ನೋಡನೋಡುತ್ತಲೇ ತರಬೇತುದಾರನ ಮೇಲೆರಗಿದ ಸಿಂಹ; ಸರ್ಕಸ್​ ಪ್ರದರ್ಶನದ ವೇಳೆ ನಡೆದೇ ಹೋಯ್ತು ಅನಾಹುತ

ಒಮ್ಮೆ ದಾಳಿ ಮಾಡಿ ಆತ ಕೈಯಲ್ಲಿದ್ದ ಕೋಲನ್ನು ಬೀಸಿದಾಗ ಕೊಂಚ ಹಿಂದೆ ಹೆಜ್ಜೆ ಇಟ್ಟಿದ್ದ ಸಿಂಹ ಎರಡನೇ ಬಾರಿಗೆ ಮತ್ತೆ ಮುನ್ನುಗ್ಗಿ ಮೈಮೇಲೆ ಎರಗಿರುವುದು ಎಂಥವರಿಗೂ ಭೀತಿ ಹುಟ್ಟಿಸುವಂತಿದೆ. ಈ ದುರ್ಘಟನೆ ವೇಳೆ ಸರ್ಕಸ್ ನೋಡಲು ಜಮಾಯಿಸಿದ್ದ ಜನರ ಪೈಕಿ ಅನೇಕರು ಭಯಬಿದ್ದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ನೋಡನೋಡುತ್ತಲೇ ತರಬೇತುದಾರನ ಮೇಲೆರಗಿದ ಸಿಂಹ; ಸರ್ಕಸ್​ ಪ್ರದರ್ಶನದ ವೇಳೆ ನಡೆದೇ ಹೋಯ್ತು ಅನಾಹುತ
ದಾಳಿ ನಡೆಸಿದ ಸಿಂಹ
Follow us
Skanda
|

Updated on: May 25, 2021 | 7:55 PM

ಮನುಷ್ಯ ಎಷ್ಟೇ ಬುದ್ಧಿವಂತನಾದರೂ, ಪ್ರಾಣಿಗಳನ್ನು ತನಗೆ ಬೇಕಾದಂತೆ ಪಳಗಿಸಿಕೊಂಡರೂ ಕೆಲ ಸಂದರ್ಭಗಳಲ್ಲಿ ಅವುಗಳ ಮುಂದೆ ಸ್ತಬ್ಧನಾಗಲೇ ಬೇಕಾಗುತ್ತದೆ. ಆನೆ, ಹುಲಿ, ಸಿಂಹ, ಚಿರತೆ, ಕರಡಿಗಳನ್ನು ಬೆರಳ ತುದಿಯ ಸೂಚನೆಯಿಂದಲೇ ಆಡಿಸಬಲ್ಲೆ ಎಂಬುದು ಮಾನವನ ಅಹಂಕಾರವಾದರೂ ಆ ಪ್ರಾಣಿಗಳೇನಾದರೂ ತಿರುಗಿಬಿದ್ದರೆ ಅಹಂಕಾರವೆಲ್ಲಾ ಕ್ಷಣಾರ್ಧದಲ್ಲಿ ಕರಗಿ ಹೋಗಲೇಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆದ ವಿಡಿಯೋ ಒಂದು ಪ್ರಾಣಿಗಳ ಮನಸ್ಸು ಕೆಟ್ಟರೆ ಮನುಷ್ಯನ ಅವಸ್ಥೆ ಹೇಗಾಗುತ್ತದೆ ಎನ್ನುವುದಕ್ಕೆ ಸೂಕ್ತ ನಿದರ್ಶನದಂತಿದೆ.

ರಷ್ಯಾದಲ್ಲಿ ಸರ್ಕಸ್ ಪ್ರದರ್ಶನ ನಡೆಯುತ್ತಿದ್ದ ವೇಳೆ ಸಿಂಹಿಣಿಯೊಂದು ತರಬೇತುದಾರನ ಮೇಲೆಯೇ ಏಕಾಏಕಿ ದಾಳಿ ಮಾಡಿದೆ. ರಿಂಗ್ ಒಳಗೆ ಎರಡು ಸಿಂಹಗಳಿದ್ದು ಅವು ಮೊದಲು ತಮ್ಮ ಪಾಡಿಗೆ ತಾವು ಆಟವಾಡಿಕೊಳ್ಳುತ್ತಿರುವಂತೆ ಕಂಡುಬಂದಿವೆ. ಆ ಸಂದರ್ಭದಲ್ಲಿ ಮಾಮೂಲಿನಂತೆ ಅವುಗಳನ್ನು ಪಳಗಿಸುವವನು ಹತ್ತಿರಕ್ಕೆ ಸುಳಿದಿದ್ದಾನೆ. ಆದರೆ, ಯಾವುದೇ ಸುಳಿವಿಲ್ಲದೇ ತಿರುಗಿ ಬಿದ್ದ ಸಿಂಹ ಆತನ ಮೇಲೆ ಎರಗಿಯೇ ಬಿಟ್ಟಿದೆ. ಈ ವೇಳೆ ಸರ್ಕಸ್ ನೋಡುತ್ತಿದ್ದ ಸಾವಿರಾರು ಮಂದಿ ಏನಾಗುತ್ತಿದೆ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಲಾಗದೆ ದಿಗ್ಭ್ರಾಂತರಾಗಿ ಕಿರುಚಾಡಿದ್ದಾರೆ.

ಸರ್ಕಸ್​ ನೇರ ಪ್ರದರ್ಶನದ ವೇಳೆಯೇ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ತರಬೇತುದಾರನ ಕಾಲನ್ನು ಬಲವಾಗಿ ಒತ್ತಿ ಹಿಡಿದು, ಕಚ್ಚಿದ ಸಿಂಹ ತನ್ನ ಉಗ್ರರೂಪವನ್ನು ಪ್ರದರ್ಶಿಸಿದೆ. ಸಿಂಹಿಣಿಯ ದಾಳಿಗೊಳಗಾದ ವ್ಯಕ್ತಿಯನ್ನು ಮ್ಯಾಕ್ಸಿಮ್ ಆರ್ಲೋವ್ ಎಂದು ಗುರುತಿಸಲಾಗಿದ್ದು, ಅದು ಕಚ್ಚಿದ ರಭಸಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಒಮ್ಮೆ ದಾಳಿ ಮಾಡಿ ಆತ ಕೈಯಲ್ಲಿದ್ದ ಕೋಲನ್ನು ಬೀಸಿದಾಗ ಕೊಂಚ ಹಿಂದೆ ಹೆಜ್ಜೆ ಇಟ್ಟಿದ್ದ ಸಿಂಹ ಎರಡನೇ ಬಾರಿಗೆ ಮತ್ತೆ ಮುನ್ನುಗ್ಗಿ ಮೈಮೇಲೆ ಎರಗಿರುವುದು ಎಂಥವರಿಗೂ ಭೀತಿ ಹುಟ್ಟಿಸುವಂತಿದೆ. ಈ ದುರ್ಘಟನೆ ವೇಳೆ ಸರ್ಕಸ್ ನೋಡಲು ಜಮಾಯಿಸಿದ್ದ ಜನರ ಪೈಕಿ ಅನೇಕರು ಭಯಬಿದ್ದು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಲ್ಲದೇ, ಇದಾದ ನಂತರ ಮುಂದಿನ ಸರ್ಕಸ್​ಗಳಿಗೆ ಆ ಸಿಂಹಗಳನ್ನು ತರದೇ ಇರಲು ಆಯೋಜಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದಾಳಿ ಮಾಡಿದ ಸಿಂಹದ ಹೆಸರು ವೆಗಾ ಹಾಗೂ ಅದರೊಂದಿಗಿದ್ದ ಇನ್ನೊಂದು ಸಿಂಹದ ಹೆಸರು ಸಂತಾ ಎಂದು ತಿಳಿದುಬಂದಿದೆ. ವೆಗಾ ಸಿಂಹಿಣಿ 5 ವರ್ಷದ ಪ್ರಾಯದ್ದಾಗಿದ್ದು, ಚಿಕ್ಕ ಮರಿಯಾಗಿದ್ದಾಗಿಂದಲೂ ಸರ್ಕಸ್​ನಲ್ಲಿ ಭಾಗವಾಗಿತ್ತು ಎಂದು ಆಯೋಜಕರು ಹೇಳಿದ್ದಾರೆ. ಕೊರೊನಾ ಕಾರಣದಿಂದ ದೀರ್ಘ ಕಾಲದ ತನಕ ಸರ್ಕಸ್​ ನಡೆಸಲಾಗದ ಕಾರಣ ಅನೇಕ ದಿನಗಳ ನಂತರ ಸಿಂಹ ಜನರನ್ನು ನೋಡಿ ಬೆಚ್ಚಿರುವ ಸಾಧ್ಯತೆ ಇದೆ. ಅಲ್ಲದೇ ಇದೀಗ ಅದನ್ನು ಬೇರೆಡೆಗೆ ಸ್ಥಳಾಂತರಿಸಲು ಯೋಚಿಸಲಾಗಿದೆ ಎನ್ನುವುದನ್ನೂ ತಿಳಿಸಿದ್ದಾರೆ.

ಇದನ್ನೂ ಓದಿ: ಮೃಗಾಲಯದ ಸಿಂಹಗಳಿಗೂ ಕೊರೊನಾ! 

ವಿಮಾನ ನಿಲ್ದಾಣದೊಳಗೆ ಕಪಿರಾಯನ ಭರ್ಜರಿ ಬೇಟೆ; ವೈರಲ್ ಆಯ್ತು ಹಳೇ ವಿಡಿಯೋ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?