ಕಳೆದುಕೊಂಡ ಸ್ನೇಹಿತೆ ಮತ್ತೆ ಸಿಕ್ಕಿದ್ದಾಳೆ, ಕತ್ತೆಯು ಮಗುವನ್ನು ಅಪ್ಪಿಕೊಂಡಿರುವುದು ಹೇಗೆ ನೋಡಿ; ವೈರಲ್​ ಆಯ್ತು ವಿಡಿಯೋ

ಪ್ರಾಣಿಗಳ ವಿಡಿಯೋಗಳು ಹೆಚ್ಚು ಮನಸೆಳೆಯುತ್ತವೆ. ಮತ್ತೆ ಮತ್ತೆ ವಿಡಿಯೋ ನೋಡಿಬಿಡೋಣ ಅನ್ನುವಷ್ಟರ ಮಟ್ಟಿಗೆ ಕಾಡುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕಳೆದುಕೊಂಡ ಸ್ನೇಹಿತೆ ಮತ್ತೆ ಸಿಕ್ಕಿದ್ದಾಳೆ, ಕತ್ತೆಯು ಮಗುವನ್ನು ಅಪ್ಪಿಕೊಂಡಿರುವುದು ಹೇಗೆ ನೋಡಿ; ವೈರಲ್​ ಆಯ್ತು ವಿಡಿಯೋ
ಕತ್ತೆಯು ಮಗುವನ್ನು ಅಪ್ಪಿಕೊಂಡಿರುವುದು ಹೇಗೆ ನೋಡಿ

ಪ್ರಾಣಿಗಳು ಮನುಷ್ಯನನ್ನು ಹಚ್ಚಿಕೊಂಡಷ್ಟು ಮನುಷ್ಯರೇ ಮನುಷ್ಯರನ್ನು ಹಚ್ಚಿಕೊಳ್ಳುವುದಿಲ್ಲ. ಮೂಕ ಪ್ರಾಣಿಗಳಾದರೂ ಮನುಷ್ಯನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಸಾಕು ಪ್ರಾಣಿಗಳು ಮಾನವರನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.

ಪ್ರಾಣಿಗಳ ವಿಡಿಯೋಗಳು ಹೆಚ್ಚು ಮನಸೆಳೆಯುತ್ತವೆ. ಮತ್ತೆ ಮತ್ತೆ ವಿಡಿಯೋ ನೋಡಿಬಿಡೋಣ ಅನ್ನುವಷ್ಟರ ಮಟ್ಟಿಗೆ ಕಾಡುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಾಕು ನಾಯಿ ಮನೆಯ ಮಾಲೀಕನಿಗೆ ಕಾರು​​ ಪಾರ್ಕ್​ ಮಾಡಲು ಸಾಹಾಯ ಮಾಡುವುದು, ಮನೆಯ ಯಜಮಾನಿ ಹೇಳಿದಂತೆಯೇ ಬೆಕ್ಕು ಕೇಳುವುದು, ನಾಯಿ ಮರಿಗಳು ಊಟ ಮಾಡುವ ಮೊದಲು ಪ್ರಾರ್ಥನೆ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಮನೆಯ ಸದಸ್ಯರು ಒಂದು ನಿಮಿಷ ಕಾಣಿಸದಿದ್ದರೆ ಸಾಕು ಮನೆಯೆಲ್ಲಾ ಹುಡುಕಾಡಿಬಿಡುತ್ತವೆ ಸಾಕಿದ ಪ್ರಾಣಿಗಳು.

ಮಾನುಷ್ಯರು ಮತ್ತು ಪ್ರಾಣಿಗಳ ನಡುವಿನ ಆಳವಾದ ಪ್ರೀತಿಗೆ ಉದಾಹಣೆಯಾಗಿ ಈ ವಿಡಿಯೋ ನೋಡಬಹುದು. ಬಾಲಕಿಯ ಕಡೆಗೆ ಬರುತ್ತಿದ್ದಂತೆಯೇ ದೂರದಲ್ಲಿ ನಿಂತಿದ್ದ ಕತ್ತೆಯು ಓಡೋಡಿ ಬರುತ್ತದೆ. ಖುಷಿಯಿಂದ ಪ್ರೀತಿಯ ಅಪ್ಪುಗೆ ನೀಡುತ್ತದೆ. ಅದೆಷ್ಟೋ ದಿನಗಳ ಬಳಿಕ ಸ್ನೇಹಿತರಿಬ್ಬರು ಭೇಟಿಯಾದ ಖುಷಿ ಇಬ್ಬರ ಮುಖದಲ್ಲೂ ಕಾಣುತ್ತಿದೆ. ಇವರಿಬ್ಬರ ನಡುವಿನ ಸ್ನೇಹ ನಿಜವಾಗಿಯೂ ಖುಷಿ ನೀಡುವಂತದ್ದು.

ಕತ್ತೆಯು ಬಾಲಕಿಯ ಕಡೆಗೆ ಬರುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ತನ್ನ ಆಪ್ತ ಸ್ನೇಹಿತೆಯಾದ ಬಾಲಕಿಯನ್ನು ಕತ್ತೆ ಬಹುಬೇಗ ಗುರುತಿಸಿದೆ. ಕೂಡಲೇ ಬಾಲಕಿಯ ಬಳಿ ಒಡೋಡಿ ಬಂದು, ತಬ್ಬಿಕೊಳ್ಳುತ್ತದೆ. ಪ್ರೀತಿಯ ಅಪ್ಪುಗೆ ನೀಡುತ್ತದೆ. ಇಬ್ಬರೂ ಬಹಳ ಸಮಯದ ನಂತರ ಭೇಟಿ ಆಗುತ್ತಿರುವ ಸಂದೇಶ ಇಬ್ಬರ ಭಾವನೆಯಿಂದ ತಿಳಿದು ಬರುತ್ತದೆ.

ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ಪಡುವುದರ ಜತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ಕತ್ತೆಯು ಬಾಲಕಿಯನ್ನು ನೋಡಿದಾಕ್ಷಣ ಓಡೋಡಿ ಬಂದು ಅಪ್ಪುಗೆ ನೀಡಿದೆ. ಈ ಮೂಲಕ ಕಳೆದು ಕೊಂಡ ಸ್ನೇಹಿತೆಯನ್ನು ಮತ್ತೆ ಪಡೆದೆನೆಂಬ ಖುಷಿ ಕತ್ತೆಯ ನಡವಳಿಕೆಯ ಮೂಲಕ  ತಿಳಿದು ಬರುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಫುಲ್​ ವೈಲ್​ ಆಗಿದ್ದು, 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Viral Video: ನಿಜವಾಗಿಯೂ ನಗುತ್ತೀರಾ.. ಈ ವೃದ್ಧ ಧರಿಸಿದ ಮುಖಗವಸು ನೋಡಿ!

Viral Video: ಲಯನ್​ Vs ಟೈಗರ್​.. ಯಾರು ಗೆಲ್ಲುತ್ತಾರೆ ನೀವೇ ನೋಡಿ!