Viral Video: ನಿಜವಾಗಿಯೂ ನಗುತ್ತೀರಾ.. ಈ ವೃದ್ಧ ಧರಿಸಿದ ಮುಖಗವಸು ನೋಡಿ!

ನೈಸರ್ಗಿಕ ಎಲೆಗಳಿಂದ ತುಂಬಿದ ಮುಖಗವಸಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಕೆಲವರು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಮೌಢ್ಯತೆಯ ಪರಮಾವಧಿ ಎಂದು ಹೇಳಿದ್ದಾರೆ.

Viral Video: ನಿಜವಾಗಿಯೂ ನಗುತ್ತೀರಾ.. ಈ ವೃದ್ಧ ಧರಿಸಿದ ಮುಖಗವಸು ನೋಡಿ!
ಬೇವಿನ ಸೊಪ್ಪು ಮತ್ತು ತುಳಸಿ ಎಲೆಗಳಿಂದ ತುಂಬಿದ ಮುಖಗವಸು
Follow us
shruti hegde
|

Updated on:May 25, 2021 | 2:27 PM

ದೇಶದಲ್ಲಿ ಕೊರೊನಾ ವೈರಸ್​ ಹರಡುತ್ತಿದ್ದಂತೆಯೇ ಹಲವಾರು ಮಾರ್ಗ ಸೂಚಿಗಳನ್ನು ಜಾರಿಗೆ ತರಲಾಯಿತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸ್​ ಮಾಡುವುದು ಜತೆಗೆ ಮುಖ್ಯವಾಗಿ ಮಾಸ್ಕ್​ ಧರಿಸಿವುದು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಡಬಲ್​ ಮಾಸ್ಕ್​ ಧರಿಸುವುದು ರೂಢಿಯಲ್ಲಿ ಬಂತು. ಇವೆಲ್ಲವೂ ನಮ್ಮ ಸುರಕ್ಷತೆಗಾಗಿ ಅಳವಡಿಕೆಯಲ್ಲಿ ಬಂದಿದ್ದಾಗಿದೆ. ಆದರೆ ನೈಸರ್ಗಿಕ ಎಲೆಗಳಿಂದ ತುಂಬಿದ ಮುಖಗವಸಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಕೆಲವರು ಹಾಸ್ಯ ಮಾಡಿದ್ದಾರೆ, ಇನ್ನು ಕೆಲವರು ಮೌಢ್ಯತೆಯ ಪರಮಾವಧಿ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸೀತಾಪುರದ ವೃದ್ಧರೊಬ್ಬರು ಬೇವಿನ ಸೊಪ್ಪು ಮತ್ತು ತುಳಸಿ ಎಲೆಗಳಿಂದ ತುಂಬಿದ ಮುಖಗವಸನ್ನು ಧರಿಸಿದ್ದಾರೆ. ವೃದ್ಧರಲ್ಲಿ ಮುಖಗವಸಿನ ಬಗ್ಗೆ ಕೇಳಿದಾಗ, ಬೇವಿನ ಸೊಪ್ಪು ಮತ್ತು ತುಳಸಿ ಎಲೆಯ ಔಷಧಿಯ ಗುಣಗಳ ಬಗ್ಗೆ ವಿವರಿಸುತ್ತಾರೆ. ಜನರು ಬಳಸುತ್ತಿರುವ ಬಟ್ಟೆಯ ಮುಖಗವಸು, ಎನ್​95 ಮಾಸ್ಕ್​ಗಳಿಗಿಂತ ಈಗ ಧರಿಸಿರುವ ಮಾಸ್ಕ್​ ಉಪಯುಕ್ತಕರ ಎಂದು ಹೇಳುತ್ತಾರೆ. ಈ ಘಟನೆಯ ವರದಿಯನ್ನಷ್ಟೇ ಟಿವಿ9 ಕನ್ನಡ ಡಿಜಿಟಲ್ ಪ್ರಕಟಿಸುತ್ತಿದೆ. ಇಂತಹ ಯಾವುದೇ ಘಟನೆಯನ್ನು ಟಿವಿ9 ಕನ್ನಡ ಡಿಜಿಟಲ್ ಉತ್ತೇಜಿಸುವುದಿಲ್ಲ. ಅಲ್ಲದೇ ಈ ಸುದ್ದಿಗೆ ಸಂಬಂಧಿಸಿದ ಯಾವುದೇ ಸಂಗತಿಗಳಿಗೆ ಉತ್ತರದಾಯಿತ್ವ ಹೊಂದಿರುವುದಿಲ್ಲ.

ವಿಡಿಯೋವನ್ನು ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ಈ ಮುಖಗವಸು ಪ್ರಯೋಜನಕಾರಿ ಎಂಬುದು ಖಚಿತವಾಗಿಲ್ಲ’ ಎಂದು ಅವರು ಶೀರ್ಷಿಕೆ ನೀಡುವುದರೊಂದಿಗೆ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಇದೀಗ ವೃದ್ಧನ ಮುಖಗವಸು ಹಲವು ಠೀಕೆಗೆ ಗುರಿಯಾಗಿದೆ.

ಗಿಡಮೂಲಿಕೆಗಳಿಂದ ಪ್ರಯೋಜವಿದೆ ಎಂಬ ಮಾತ್ರಕ್ಕೆ ಅವುಗಳಿಂದ ತಯಾರಿಸಿದ ಮುಖಗವಸು ಧರಿಸುವುದು ಕಂಡು ಬಂದಿರಲಿಲ್ಲ. ಆದರೀಗ ಉತ್ತರ ಪ್ರದೇಶದ ವೃದ್ಧನೋರ್ವ ಬೇವಿನ ಜಾಲರಿಯ ಮುಖಗವಸನ್ನು ಹಾಕಿಕೊಂಡು ತಿರುಗಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Viral Video: ಮಣ್ಣಿನ ರಾಡಿಯಲ್ಲಿ ಬಿದ್ದು-ಎದ್ದೇಳಲು ಹೆಣಗಾಡುತ್ತಿದ್ದ ಆನೆ ದೃಶ್ಯ ಸೆರೆ; ವೈರಲ್​ ಆಯ್ತು ವಿಡಿಯೋ

Viral Video: ಈ ನಾಯಿ ನಿಜವಾಗಿಯೂ ಯೋಗಾಸನ ಮಾಡುತ್ತಿದೆ! ವಿಡಿಯೋ ಆಯ್ತು ವೈರಲ್​

Published On - 12:43 pm, Tue, 25 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ