Viral Video: ಈ ನಾಯಿ ನಿಜವಾಗಿಯೂ ಯೋಗಾಸನ ಮಾಡುತ್ತಿದೆ! ವಿಡಿಯೋ ಆಯ್ತು ವೈರಲ್​

ನಾವು ಹೇಳಿದಂತೆ ಕೇಳುವ ನಾಯಿ ಮರಿಯು ಯೋಗಾಸನ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುತ್ತಿದ್ದಂತೆಯೇ ನಿಮಗೂ ಆಶ್ಚರ್ಯವಾಗುತ್ತದೆ.

Viral Video: ಈ ನಾಯಿ ನಿಜವಾಗಿಯೂ ಯೋಗಾಸನ ಮಾಡುತ್ತಿದೆ! ವಿಡಿಯೋ ಆಯ್ತು ವೈರಲ್​
ನಾಯಿ ಯೋಗಾಸನ ಮಾಡುತ್ತಿರುವ ದೃಶ್ಯ
Follow us
shruti hegde
|

Updated on: May 19, 2021 | 1:38 PM

ಪ್ರತಿನಿತ್ಯ ನಮ್ಮ ಮಾತನ್ನು ಕೇಳುತ್ತಾ, ಮನೆಯ ಪಾಲಕನಾಗಿ ಇಡೀ ದಿನ ಕರ್ತವ್ಯಕ್ಕೆ ಬದ್ಧವಾಗಿ ಕೆಲಸ ಮಾಡುವ ಪ್ರಾಣಿ ನಾಯಿ. ನೀಯತ್ತಿಗೆ ಹೆಸರಾಗಿ ಮೋಟು ಬಾಲ ಅಲ್ಲಾಡಿಸುತ್ತಾ, ಬೌ.. ಬೌ ಎನ್ನುವ ಒಂದೇ ಭಾಷೆಯಲ್ಲಿ ಎಲ್ಲವನ್ನೂ ಅರ್ಥೈಸುತ್ತಾ ಮನೆಯ ಕಾವಲಾಗಿ ನಿಲ್ಲುತ್ತದೆ. ನಾವು ಹೇಳಿದಂತೆ ಕೇಳುವ ನಾಯಿ ಮರಿಯು ಯೋಗಾಸನ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುತ್ತಿದ್ದಂತೆಯೇ ನಿಮಗೂ ಆಶ್ಚರ್ಯವಾಗುತ್ತದೆ.

‘ಈ ನಾಯಿ ನಿಗವಾಗಿಯೂ ಯೋಗ ಮಾಡುತ್ತಿದೆ..’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ ಬಳಿಕ ಸುಮಾರು 2.6 ಮಿಲಿಯನ್​ ವೀಕ್ಷಣೆಗಳು ಬಂದಿವೆ. ವಿಡಿಯೋದಲ್ಲಿ ನೀವು ನೋಡುವಂತೆ ನಾಯಿ ನೆಲದ ಮೇಲೆ ಮ್ಯಾಟ್​​ ಹಾಸುತ್ತದೆ. ನಂತರ ನೇರವಾಗಿ ಮಲಗಿಕೊಳ್ಳುತ್ತದೆ. ನಿಧಾನವಾಗಿ ಬಲಗಾಲನ್ನು ಮೇಲಕ್ಕೆ ಎತ್ತುತ್ತದೆ, ಪಕ್ಕದಲ್ಲಿರುವ ಯುವತಿಯೋರ್ವಳು ಯೋಗ ಮಾಡಿದಂತೆಯೇ ನಕಲಿಸುತ್ತದೆ. ಹೇಳಿಕೊಟ್ಟಂತೆಯೇ ತಪ್ಪಿಲ್ಲದೇ ಶ್ರದ್ಧೆಯಿಂದ ನಾಯಿ ಯೋಗ ಮಾಡುವುದನ್ನು ನೋಡಿದರೆ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ.

ಈ ಹಿಂದೆ ನಾಯಿ ಮರಿಗಳು ಪ್ರಾರ್ಥನೆ ಮಾಡಿ ಆಹಾರ ಸೇವಿಸುವ ವಿಡಿಯೋವೊಂದು ವೈರಲ್​ ಆಗಿತ್ತು ಊಟಕ್ಕೆ ಕುಳಿತಾಗ ಪ್ರಾರ್ಥನೆ ಮಾಡಿ ನಂತರ ಊಟ ಮಾಡುವ ಸಂಪ್ರದಾಯವಿದೆ. ಅದೇ ರೀತಿ ಮನೆಯ ಒಡತಿ ಊಟ ಪ್ರಾರಂಭಿಸುವ ಮೊದಲು ಪ್ರಾರ್ಥನೆ ಮಾಡುತ್ತಾಳೆ. ಆಕೆಯ ಅಕ್ಕ-ಪಕ್ಕದಲ್ಲಿ ಕೂತ ನಾಯಿ ಮರಿಗಳೂ ಕೂಡಾ ಪ್ರಾರ್ಥಿಸಿ ನಂತರ ಊಟ ಸವಿಯುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವನ್ನು ವೈಶಾಲಿ ಮಾಥುರ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಹೃದಯ ಪೂರ್ವಕವಾಗಿ ಹಂಚಿಕೊಳ್ಳುತ್ತಿರುವ ವಿಡಿಯೋ ಇದು- ನನ್ನ ಸ್ನೇಹಿತೆ, ತಾನು ಸಾಕಿದ ನಾಯಿ ಮರಿಗಳಿಗೆ ಊಟ ಮಾಡುವ ಮುಂಚೆ ಪ್ರಾರ್ಥನೆ ಹೇಳಿಕೊಡುವ ದೃಶ್ಯ ಹೃದಯ ತಟ್ಟಿದೆ. ಸ್ನೇಹಿತೆ ಅಕ್ಕಪಕ್ಕದಲ್ಲಿ ಕುಳಿತ ಇಬ್ಬರೂ ಒಳ್ಳೆಯ ಹುಡುಗರು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ: ಪ್ರಾರ್ಥನೆ ಮಾಡಿದ ಬಳಿಕವೇ ಆಹಾರ ಸೇವಿಸುವ ನಾಯಿಮರಿಗಳು; ವಿಡಿಯೋ ವೈರಲ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ