ವಿಮಾನದಲ್ಲಿ ಮದುವೆಯಾದರೂ ಕೊವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಶುರುವಾಯ್ತು ತನಿಖೆ
ವಿಮಾನದಲ್ಲಿ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಬಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೊವಿಡ್ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿದ್ದರಿಂದ ಈ ಕುರಿತಂತೆ ತನಿಖೆ ನಡೆಯುತ್ತಿದೆ.
ಕೊವಿಡ್ ನಿರ್ಬಂಧಗಳನ್ನು ತಪ್ಪಿಸಿ ವಿಮಾನದಲ್ಲಿ ಮದುವೆಯಾದ ಮಧುರೈನ ಜೋಡಿಗಳಿಗೆ ಇದೀಗ ಸಂಕಷ್ಟ ಎದುರಾದಂತಿದೆ. ಮದುವೆಯಾಗು ಪ್ರಯತ್ನದಲ್ಲೇನೋ ಗೆದ್ದರು. ಆದರೀಗ, ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಬಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೊವಿಡ್ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿದ್ದರಿಂದ ಈ ಕುರಿತಂತೆ ತನಿಖೆ ನಡೆಯುತ್ತಿದೆ.
ಮಧುರೈ ಜೋಡಿ ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆ ಖರೀದಿಸಿ ಮದುವೆಯಾಗಿದ್ದಾರೆ. ಆದರೆ ವಿಡಿಯೋದಲ್ಲಿ ಗಮನಿಸುವಂತೆ ಯಾರೂ ಕೂಡಾ ಕೊವಿಡ್ ನಿಯಮಾವಳಿಗಳನ್ನು ಪಾಲಿಸಿಲ್ಲ. ಈ ಕಾರಣದಿಂದಾಗಿ ವಿಚಾರಣೆಯ ಬಳಿಕ ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ. ಪದೇ ಪದೇ ವಿನಂತಿಸಿದರೂ ಕೂಡಾ ಪ್ರಯಾಣಿಕರು ನಿಯಮಗಳನ್ನು ಪಾಲಿಸಲಿಲ್ಲ ಎಂದು ಸ್ಪೈಸ್ ಜೆಟ್ ಹೇಳಿದ್ದರಿಂದ ವಧು-ವರ ಮತ್ತು ಅವರ ಕುಟುಂಬಸ್ಥರು ಕ್ರಮ ಎದುರಿಸಬೇಕಾಗುತ್ತದೆ.
A couple tied the knot on-board a chartered flight from Madurai, Tamil Nadu. Their relatives & guests were on the same flight.
“A SpiceJet chartered flight was booked y’day from Madurai. Airport Authority officials unaware of the mid-air marriage ceremony,” says Airport Director pic.twitter.com/wzMCyMKt5m
— ANI (@ANI) May 24, 2021
ಲಾಕ್ಡೌನ್ ಜಾರಿಯಲ್ಲಿರುವುದರಿಂದ ತಮಿಳುನಾಡಿನ ಮಧುರೈನ ಜೋಡಿಗಳು ಬೆಂಗಳೂರಿಗೆ ತಲುಪುವ ವಿಮಾನವನ್ನು ಬಾಡಿಗೆ ಪಡೆದು ಮಾರ್ಗ ಮಧ್ಯದಲ್ಲಿ ಮದುವೆಯಾದರು. ಮದುವೆ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಒಂದು ವಿಡಿಯೋದಲ್ಲಿ ಕ್ಯಾಮರಾಕ್ಕೆ ಮುಖ ಮಾಡಿ ವಧುವಿಗೆ ವರ ಮಂಗಳಸೂತ್ರ ಕಟ್ಟುವುದನ್ನು ನೋಡಬಹುದು. ಆ ವಿಡಿಯೋದಲ್ಲಿ ಜೋಡಿಗಳ ಹಿಂದೆ ನಿಂತಿರುವ ಜನರೆಲ್ಲರೂ ಕಾಣುತ್ತಾರೆ. ಆದರೆ ಹೆಚ್ಚಿನವರಾರೂ ಕೂಡಾ ಮುಖಗವಸು ಧರಿಸಿರುವುದಿಲ್ಲ ಎಂಬುದು ಬಹಿರಂಗವಾಗಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ತಂಡವು ವಿಮಾನದಲ್ಲಿ ನಡೆದ ಮದುವೆಯ ಕುರಿತಾಗಿ ತನಿಖೆಯನ್ನು ಪ್ರಾರಂಭಿಸಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ವಿಮಾನದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದೆ. ಕೊವಿಡ್ ಸುರಕ್ಷತಾ ಕ್ರಮದ ಉಲ್ಲಂಘನೆಯ ವಿರುದ್ಧ ದೂರು ದಾಖಲಿಸುವಂತೆ ಸ್ಪೈಸ್ ಜೆಟ್ಗೆ ಕೇಳಲಾಗಿದೆ ಎಂಬುದನ್ನು ಡಿಜಿಸಿಎ ಸುದ್ದಿ ಸಂಸ್ಥೆ ಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿ ಹಂಚಿಕೊಂಡಿದೆ.
‘ಮಧುರೈನಿಂದ ನಿನ್ನೆ ವಿಮಾನವನ್ನು ಬುಕ್ ಮಾಡಲಾಗಿದೆ. ಈ ಮದುವೆ ಸಮಾರಂಭದ ಕುರಿತಾಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿದಿರಲಿಲ್ಲ’ ಎಂದು ಮಧುರೈ ವಿಮಾನ ನಿಲ್ದಾಣ ನಿರ್ದೇಶಕ ಎಸ್.ಸೆಂಥಿಲ್ ವಲವಾನ್ ಎಎನ್ಐಗೆ ತಿಳಿಸಿದ್ದಾರೆ. ಪದೇ ಪದೇ ವಿನಂತಿ ಮಾಡಿಕೊಳ್ಳುತ್ತಿದ್ದರೂ, ಅರಿವು ಮೂಡಿಸುತ್ತಿದ್ದರೂ ಕೂಡಾ ಪ್ರಯಾಣಿಕರು ಕೊವಿಡ್ ನಿಯಮಗಳನ್ನು ಅನುಸರಿಸಿಲ್ಲ. ಹಾಗಾಗಿ ವಿಮಾನಯಾನ, ನಿಯಮಗಳ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸ್ಪೈಸ್ ಜೆಟ್ ವಕ್ತಾರ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಕೊವಿಡ್ ನಿರ್ಬಂಧಗಳನ್ನು ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಜೋಡಿ