AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊವಿಡ್​ ನಿರ್ಬಂಧಗಳನ್ನು ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಜೋಡಿ

ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದಾಗಲೂ ಸಹ ಮದುವೆಗೆ ಸಾಕಷ್ಟು ಜನರು ಬರಬೇಕು ಎಂಬ ಉದ್ದೇಶದಿಂದ ಇಲ್ಲೊಂಡು ಜೋಡಿ ವಿಮಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.

Viral Video: ಕೊವಿಡ್​ ನಿರ್ಬಂಧಗಳನ್ನು ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಜೋಡಿ
ವಿಮಾನದಲ್ಲಿ ಮದುವೆಯಾದ ಜೋಡಿ
shruti hegde
|

Updated on:May 24, 2021 | 12:17 PM

Share

ಮದುವೆ ಅಂದಾಕ್ಷಣ ಜನರು ಕೂಡಿರಬೇಕು. ಅದ್ದೂರಿಯಾಗಿರಬೇಕು. ಅಲ್ಲಲ್ಲಿ ಓಡಾಡುತ್ತಿರುವ ಮಕ್ಕಳು, ರಂಗುರಂಗಿನ ಅಲಂಕಾರ, ಹೊಸ ಬಟ್ಟೆ, ಚಿನ್ನದ ಆಭರಣ ವಿಜೃಂಭಣೆಯ ಅಲಂಕಾರ. ಆದರೀಗ ಕೊರೊನಾ ಮಹಾಮಾರಿ ವ್ಯಾಪಕವಾಗಿ ಜನರ ಆಸೆಗಳನ್ನು ಕಿತ್ತುಕೊಳ್ಳುತ್ತಿದೆ. ಬಹುಬೇಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವಂತೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಅವುಗಳಲ್ಲಿ ಮದುವೆ ಸಮಾರಂಭಕ್ಕೆ ಕಡಿಮೆ ಜನ ಸೇರುವುದೂ ಕೂಡಾ ಒಂದು.

ಇಂತಹ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದಾಗ ಮದುವೆಗೆ ಸಾಕಷ್ಟು ಜನರು ಬರಬೇಕು ಎಂಬ ಉದ್ದೇಶದಿಂದ ಇಲ್ಲೊಂಡು ಜೋಡಿ ವಿಮಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಮಧುರೈನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ತಮಗಾಗಿಯೇ ಕಾಯ್ದಿರಿಸಿಕೊಂಡು ವಿಮಾನವು ಮುಧುರೈನ ಮೀನಾಕ್ಷಿ ಅಮ್ಮನ್​ ದೇವಾಲಯದ ಮೇಲೆ ಹಾರಿದಾಗ ವರ ಮಧುವಿಗೆ ತಾಳಿ ಕಟ್ಟಿರುವ ವಿಡಿಯೋ ಸೆರೆಯಾಗಿದೆ. ವಿಮಾನದಲ್ಲಿ ಒಟ್ಟು 161 ಜನರು ಇದ್ದರು. ಅವರಷ್ಟರೂ ಕೂಡಾ ಮದುವೆಗೆಂದು ವಿಮಾನ ಹಾರಾಟದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ವರದಿಯೊಂದು ತಿಳಿಸಿದೆ.

ತಮಿಳುನಾಡಿನಲ್ಲಿ ಕೊರೊನಾ ವೈರಸ್​ ಸೋಂಕಿನ ತೀವ್ರತೆಯಿಂದಾಗಿ ಕರ್ಫ್ಯೂ ಜಾರಿಯಲ್ಲಿದೆ. ಹಾಗೂ ಮದುವೆ ಸಮಾರಂಭಗಳಿಗೆ ಇರುವ ನಿರ್ಬಂಧನೆಗಳನ್ನು ತಪ್ಪಿಸಲು ಮಧುರೈನ ನಿವಾಸಿಗಳಾದ ರಾಕೇಶ್​ ಮತ್ತು ದಕ್ಷಿಣಾ ದಂಪತಿಗಳಿಬ್ಬರು ವಿಮಾನದಲ್ಲಿ ಮದುವೆ ಆಗಲು ನಿರ್ಧರಿಸಿ ಎರಡು ಗಂಟೆಗಳ ಕಾಲ ಆಕಾಶದಲ್ಲೇ ಹಾರಾಡುವಂತೆ ವಿಮಾನವನ್ನು ಬಾಡಿಗೆಗೆ ಖರೀದಿಸಿದ್ದಾರೆ.

‘ಮಧುರೈನ ರಾಕೇಶ್​-ದಕ್ಷಿಣಾ, ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ಪಡೆದು ಆಕಾಶದಲ್ಲಿ ಮದುವೆಯಾದರು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವಿಟರ್​​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಗಮನಿಸಿದಂತೆ ಎಲ್ಲರೂ ಕೂಡಾ ಮದುವೆಯ ಸಡಗರದಲ್ಲಿದ್ದರು. ಹೂವಿನ ದಳಗಳಿಂದ ಮಧು-ವರರಿಗೆ ಸ್ವಾಗತ ಕೋರಿದರು. ಆ ಬಳಿಕ ವರ, ಮಧುವಿನ ಕುತ್ತಿಗೆಗೆ ತಾಳಿ ಕಟ್ಟುವ ವಿಡಿಯೋ ಸೆರೆಯಾಗಿದೆ. ವೈರಲ್​ ಆಗುತ್ತಿರುವ ಪೋಸ್ಟ್​ ಇದುವರೆಗೆ 1.6 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

 ತನ್ನ ಗರ್ಲ್​​ಫ್ರೆಂಡ್ ಮದುವೆ ನಿಲ್ಲಿಸಲು, ಮುಖ್ಯಮಂತ್ರಿಗೇ ಐಡಿಯಾ ಕೊಟ್ಟ..; ವೈರಲ್​ ಆಯ್ತು ಟ್ವೀಟ್​

ವೈರಲ್​ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ

Published On - 12:14 pm, Mon, 24 May 21