ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಂತು ಮಾದರಿಯಾದ ಒಡಿಶಾದ ಗ್ರಾಮ, ಇದುವರೆಗೂ ಒಂದೇ ಒಂದು ಪ್ರಕರಣವೂ ಇಲ್ಲ

ಒಡಿಶಾದಲ್ಲಿ ಒಂದು ಗ್ರಾಮ ಮಾತ್ರ ಇಲ್ಲಿಯವರೆಗೆ ಯಾವುದೇ ಒಂದು ಕೊವಿಡ್​ ಪ್ರಕರಣವನ್ನು ದಾಖಲಿಸದೇ ರಾಜ್ಯದ ಉಳಿದ ಭಾಗಗಳಿಗೆ ಮಾದರಿಯಾಗಿದೆ ನಿಂತಿದೆ.

ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಂತು ಮಾದರಿಯಾದ ಒಡಿಶಾದ ಗ್ರಾಮ, ಇದುವರೆಗೂ ಒಂದೇ ಒಂದು ಪ್ರಕರಣವೂ ಇಲ್ಲ
Follow us
shruti hegde
|

Updated on: May 24, 2021 | 10:15 AM

ಕೊರೊನಾ ವೈರಸ್​ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಪಟ್ಟಣಗಳನ್ನು ಸೇರಿ ಹಳ್ಳಿಗಳಿಗೂ ವ್ಯಾಪಿಸಿದೆ. ಎಲ್ಲಿ ನೋಡಿದರಲ್ಲಿ ಜನರಿಗೆ ಜ್ವರ, ನೆಗಡಿ ಲಕ್ಷಣಗಳುಳ್ಳ ಕೊರೊನಾ ವೈರಸ್​ ಸೋಂಕು. ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸುತ್ತಿರುವ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಹೀಗಿರುವಾಗ ಒಡಿಶಾದಲ್ಲಿ ಒಂದು ಗ್ರಾಮ ಮಾತ್ರ ಇಲ್ಲಿಯವರೆಗೆ ಯಾವುದೇ ಒಂದು ಕೊವಿಡ್​ ಪ್ರಕರಣವನ್ನು ದಾಖಲಿಸದೇ ರಾಜ್ಯದ ಉಳಿದ ಭಾಗಗಳಿಗೆ ಮಾದರಿಯಾಗಿದೆ ನಿಂತಿದೆ.

ಒಡಿಶಾದ ಗಂಜಮ್​ ಜಿಲ್ಲೆಯಲ್ಲಿ ಕಲಿಕೋಟೆ ಬ್ಲಾಕ್​ನ ದಾನಪುರ್​ ಪಂಚಾಯತ್​ ವ್ಯಾಪ್ತಿಯಲ್ಲಿ ಬರುವ ಕರಂಜರ ಎಂಬ ಹಳ್ಳಿಯಲ್ಲಿ 261 ಮನೆಗಳಿವೆ. ಹಳ್ಳಿಯಲ್ಲಿ ಒಟ್ಟು 1,234 ಜನಸಂಖ್ಯೆ ಇದೆ. ಹೇಳಲು ತುಂಬಾ ಚಿಕ್ಕ ಹಳ್ಳಿಯೇನಲ್ಲ. ಕಳೆದ ವರ್ಷ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವುದರಿಂದ ಇಲ್ಲಿಯವರೆಗೆ ಈ ಹಳ್ಳಿ ಒಂದೇ ಒಂದು ಕೊವಿಡ್​19 ಪ್ರಕರಣ ಕೂಡಾ ವರದಿ ಮಾಡಿಲ್ಲ.

ಇಲ್ಲಿವರೆಗೆ ಕರಂಜರ ಗ್ರಾಮದ ಜನರು ಕೊವಿಡ್​19 ರೋಗಲಕ್ಷಣಗಳ ಬಗ್ಗೆ ದೂರು ನೀಡಲ್ಲ. ಜನವರಿ ತಿಂಗಳಿನಲ್ಲಿ ಹಳ್ಳಿಯ ಅಷ್ಟೂ ಮಂದಿಗೂ ಕೂಡಾ ಕೋವಿಡ್​ ಪರೀಕ್ಷೆ ನಡೆಸಲಾಯಿತು. ಅವುಗಳಲ್ಲಿ ಎಲ್ಲರಿಗೂ ಸಹ ಕೊವಿಡ್19​ ನೆಗೆಟಿವ್​ ವರದಿ ದಾಖಲಾಗಿದೆ.

ಏತನ್ಮಧ್ಯೆ, ರಾಜ್ಯ ಸರ್ಕಾರದ ಆದೇಶದನುಸಾರವಾಗಿ ಆರೋಗ್ಯ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ವೈದ್ಧರು, ಸೌಮ್ಯ ಲಕ್ಷಣಗಳಿರುವವರು, ಹಾಗೂ ಹೆಚ್ಚಿನ ಅಪಾಯದಲ್ಲಿರುವವರ ಆರೋಗ್ಯವನ್ನು ವಿಚಾರಿಸಲು ಗ್ರಾಮಗಳಿಗೆ ನಂದು ಸಮೀಕ್ಷೆ ನಡೆಸುತ್ತಿದ್ದಾರೆ. ಹಾಗೂ ಆಶಾ, ಅಂಗನವಾಡಿ ಮತ್ತು ನರ್ಸ್​(ದಾದಿಯರು) ಜನರಲ್ಲಿ ಜಾಗೃತಿ ಮೂಡಿಸುವತ್ತ ಹೆಚ್ಚಿನ ಗಮನ ಹರಿಸಿದ್ದು, ಕೊರೊನಾ ಸೋಂಕಿನಿಂದ ಉಂಟಾಗುವ ಅಪಾಯದ ಕುರಿತಾಗಿ ತಿಳಿಹೇಳುವ ಕುರಿತಾಗಿ ಮುಖ್ಯ ಪಾತ್ರವಹಿಸಿದ್ದಾರೆ.

ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ ಕೆಲವು ಗ್ರಾಮಸ್ಥರೊಂದಿಗೆ ಮಾತನಾಡಿದ ಗಂಜಮ್​ ಜಿಲ್ಲಾಧಿಕಾರಿ ಇಂಡಿಯಾ ಟುಡೇ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಕೊವಿಡ್​19 ಸುರಕ್ಷತಾ ಪ್ರೊಟೋಕಾಲ್​ ಬಗ್ಗೆ ಗ್ರಾಮಸ್ಥರಿಗೆ ಬಹಳಷ್ಟು ತಿಳಿದಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬ ಗ್ರಾಮಸ್ಥರೂ ಮುಖವಾಡಗಳನ್ನು ಧರಿಸುತ್ತಾರೆ. ಮತ್ತು ಅವರು ತಮ್ಮ ಮನೆಯಿಂದ ಹೊರಬಂದಾಗಲೆಲ್ಲ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಆಡಳಿತದ ಸೂಚನೆಯಂತೆ ಮುಖಗವಸನ್ನು ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಗ್ರಾಮಸ್ಥರಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಕರಂಜರ ಸಮುದಾಯದ ಗ್ರಾಮಾಧ್ಯಕ್ಷ ತ್ರಿನಾಥ್​ ಬೆಹೆರಾ ಹೇಳಿದ್ದಾರೆ.

ನಮ್ಮ ಹಳ್ಳಿಯ ಕೆಲವು ಯುವಕರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರೂ ಅವರು ಕಳೆದ ವರ್ಷ ಮನೆಗೆ ಹಿಂದಿರುಗಲಿಲ್ಲ. ಕೆಲವರು ಹಿಂದುರಿಗಿದರೂ ಕೂಡಾ 14 ದಿನ ಕ್ವಾರಂಟೈನ್​ ಆಗಿದ್ದು ರೋಗಲಕ್ಷಣ ಕಂಡು ಬಂದಿಲ್ಲದ ಕಾರಣ ಮನೆ ಪ್ರವೇಶಿಸಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡರು.

2020ರಲ್ಲಿ ಏಕಾಏಕಿ ಕೊವಿಡ್​19 ಹರಡಲು ಪ್ರಾರಂಭವಾದಾಗಿನಿಂದ ಗ್ರಾಮಸ್ಥರು ಯಾವುದೇ ಹಬ್ಬಗಳನ್ನು ಅಥವಾ ನೆಂಟರೊಂದಿಗೆ ಸಡಗರದಿಂದ ಊಟವನ್ನು ನಡೆಸಿಲ್ಲ. ಕೊವಿಡ್​ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಸರಿಯಾಗಿ ಪಾಲಿಸಿ ಉಳಿದ ರಾಜ್ಯದ ಭಾಗಗಳಿಗೆ ಮಾದರಿಯಾಗಿ ಒಡಿಶಾದ ಕರಂಜರ ಗ್ರಾಮಸ್ಥರು ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್