AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB Recruitment: ಸರ್ಕಾರಿ ಕೆಲಸಕ್ಕೆ ಭಾರೀ ಪೈಪೋಟಿ! ರೈಲ್ವೆಯಲ್ಲಿ 32,438 ಹುದ್ದೆಗಳಿಗೆ 1.08 ಕೋಟಿ ಅರ್ಜಿ ಸಲ್ಲಿಕೆ

ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ ಡಿ ಹುದ್ದೆಗಳ 32,438 ನೇಮಕಾತಿಗಳಿಗೆ 1.08 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿವೆ. ಮುಂಬೈ ವಲಯದಿಂದ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನೇಮಕಾತಿಯು ಟ್ರ್ಯಾಕ್ ಮೇಂಟೇನರ್, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್, ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಒಳಗೊಂಡಿದೆ. ಭಾರೀ ಸ್ಪರ್ಧೆಯನ್ನು ಸೂಚಿಸುವ ಈ ಸಂಖ್ಯೆಗಳು ಯುವಕರಲ್ಲಿ ಸರ್ಕಾರಿ ಉದ್ಯೋಗಗಳ ಬೇಡಿಕೆಯನ್ನು ಎತ್ತಿ ತೋರಿಸುತ್ತವೆ.

RRB Recruitment: ಸರ್ಕಾರಿ ಕೆಲಸಕ್ಕೆ ಭಾರೀ ಪೈಪೋಟಿ! ರೈಲ್ವೆಯಲ್ಲಿ 32,438 ಹುದ್ದೆಗಳಿಗೆ 1.08 ಕೋಟಿ ಅರ್ಜಿ ಸಲ್ಲಿಕೆ
Rrb Group D Recruitment
ಅಕ್ಷತಾ ವರ್ಕಾಡಿ
|

Updated on: Apr 27, 2025 | 11:38 AM

Share

ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಒಟ್ಟು 32,438 ನೇಮಕಾತಿಗಳನ್ನು ಮಾಡಲಾಗುತ್ತಿದೆ. ಅಚ್ಚರಿಯ ವಿಷಯವೆಂದರೆ ದೇಶಾದ್ಯಂತ 1.08 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚಿನ ಅರ್ಜಿಗಳು ಮುಂಬೈ ವಲಯದಿಂದ ಬಂದಿವೆ. ಮುಂಬೈನಿಂದ ಒಟ್ಟು 15,59,100 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೈಲ್ವೆಯ ವಿವಿಧ ಇಲಾಖೆಗಳಲ್ಲಿ ಲೆವೆಲ್-1 ಹುದ್ದೆಗಳಿಗೆ ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದೆ. ಇದರಲ್ಲಿ ಟ್ರ್ಯಾಕ್ ಮೇಂಟೇನರ್ ಗ್ರೇಡ್-IV, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳು ಸೇರಿವೆ. ಈ ಹುದ್ದೆಗಳು ವಿದ್ಯುತ್, ಯಾಂತ್ರಿಕ ಮತ್ತು ಸಿಗ್ನಲ್ ಮತ್ತು ದೂರಸಂಪರ್ಕ ವಿಭಾಗಗಳಲ್ಲಿವೆ.

ದೇಶಾದ್ಯಂತ 1.08 ಕೋಟಿ ಅರ್ಜಿಗಳು:

ರೈಲ್ವೆ ವಲಯದ ಪ್ರಕಾರ , ಚಂಡೀಗಢದಿಂದ 11.60 ಲಕ್ಷ, ಚೆನ್ನೈನಿಂದ 11.12 ಲಕ್ಷ, ಸಿಕಂದರಾಬಾದ್‌ನಿಂದ 9.60 ಲಕ್ಷ, ಪ್ರಯಾಗ್‌ರಾಜ್‌ನಿಂದ 8.61 ಲಕ್ಷ ಮತ್ತು ಕೋಲ್ಕತ್ತಾದಿಂದ 7.93 ಲಕ್ಷ ಅರ್ಜಿಗಳು ಬಂದಿವೆ. ಒಟ್ಟು 1,08,22,423 ಅರ್ಜಿಗಳು ಸಲ್ಲಿಕೆಯಾಗಿವೆ. ಇಷ್ಟೊಂದು ಅರ್ಜಿಗಳು ಬಂದ ನಂತರ, ಯುವಕರಲ್ಲಿ ಸರ್ಕಾರಿ ಉದ್ಯೋಗಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿವೆ.

ರಾಷ್ಟ್ರೀಯ ಅಂಕಿಅಂಶ ಕಚೇರಿಯ (NSO) ಇತ್ತೀಚಿನ ವರದಿಯ ಪ್ರಕಾರ, ಜುಲೈ-ಸೆಪ್ಟೆಂಬರ್ 2024 ರ ತ್ರೈಮಾಸಿಕದಲ್ಲಿ ನಗರ ನಿರುದ್ಯೋಗ ದರವು ಶೇ. 6.4 ಕ್ಕೆ ಇಳಿದಿದೆ, ಇದು ಸಕಾರಾತ್ಮಕ ಸಂಕೇತವಾಗಿದೆ. ಮತ್ತೊಂದೆಡೆ, ಭಾರತ ಉದ್ಯೋಗ ವರದಿ 2024 ಸಹ ಉದ್ಯೋಗದ ಗುಣಮಟ್ಟ ಮತ್ತು ಸ್ಥಿರತೆಯು ಇನ್ನೂ ಕಳವಳಕಾರಿ ವಿಷಯವಾಗಿದೆ. ವಿಶೇಷವಾಗಿ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳ ಕೊರತೆಯಿದೆ.

ಇದನ್ನೂ ಓದಿ: ಹೆರಿಗೆಯಾಗಿ 2 ವಾರವಾಗಿದೆಯಷ್ಟೇ, UPSC ಪರೀಕ್ಷೆ ಬರೆದು 45ನೇ ರ‍್ಯಾಂಕ್ ಪಡೆದ ಮಹಿಳೆ

ಸರ್ಕಾರ ಈಗ ಉದ್ಯೋಗ ಸಂಬಂಧಿತ ಡೇಟಾವನ್ನು ಹೆಚ್ಚು ಪಾರದರ್ಶಕಗೊಳಿಸುವತ್ತ ಕ್ರಮಗಳನ್ನು ತೆಗೆದುಕೊಂಡಿದೆ. ಮೇ 15 ರಿಂದ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಪ್ರತಿ ತಿಂಗಳು ನಿರುದ್ಯೋಗ ಡೇಟಾವನ್ನು ಬಿಡುಗಡೆ ಮಾಡುತ್ತದೆ. ಇವುಗಳನ್ನು ಮೊದಲು ಪ್ರತಿ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಇದು ನೀತಿಗಳನ್ನು ರೂಪಿಸುವಲ್ಲಿ ಮತ್ತಷ್ಟು ಸಹಾಯ ಮಾಡುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?