‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಪಹಲ್ಗಾಮ್ ದಾಳಿ ಬಗ್ಗೆ ಚಂದನ್ ಶೆಟ್ಟಿ ಮಾತು
ಪಹಲ್ಗಾಮ್ ದಾಳಿಯಲ್ಲಿ 26ಕ್ಕೂ ಹೆಚ್ಚು ಮಂದಿ ನಿಧನ ಹೊಂದಿದ್ದಾರೆ. ಅವರ ಸಾವು ಸಾಕಷ್ಟು ಅನೇಕರಿಗೆ ನೋವು ತಂದಿದೆ. ಅಮಾಯಕರು ಬಲಿಯಾದ ಬಗ್ಗೆ ಸಾಕಷ್ಟು ನೋವಿದೆ. ಈಗ ಪಹಲ್ಗಾಮ್ ದಾಳಿ ಬಗ್ಗೆ ಚಂದನ್ ಶೆಟ್ಟಿ ಅವರು ಮಾತನಾಡಿದ್ದಾರೆ. ಪಾಕಿಗರನ್ನು ಅವರು ಹೇಡಿಗಳು ಎಂದು ಕರೆದಿದ್ದಾರೆ.
ಚಂದನ್ ಶೆಟ್ಟಿ (Chandan Shetty) ಅವರು ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡಿದ್ದಾರೆ. ಈ ರೀತಿ ದಾಳಿ ಮಾಡಿದವರನ್ನು ಹೇಡಿ ಎಂದು ಕರೆದಿದ್ದಾರೆ. ‘ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಿದ್ದು ಹೇಡಿತನ. ಗಂಡಸ್ತನ ಇತ್ತು ಎಂದರೆ ನಮ್ಮ ಸೈನಿಕರ ಜೊತೆ ಹೋರಾಡಿ ಗೆಲ್ಲಲಿ. ಪಾಪದ ಜನರ ಮೇಲೆ ಅಟ್ಯಾಕ್ ಮಾಡಿದವರು ಹೇಡಿಗಳು. ಮೋದಿ ಸರ್ಕಾರ ತಕ್ಕ ಪಾಠ ಕಲಿಸಬೇಕು. ಶಾಂತಿ ಕಾಪಾಡಿಕೊಳ್ಳಬೇಕು ಎಂದು ಬಂದಿದ್ದೇವೆ. ಆದರೆ ಅದು ಈಗ ಮಿತಿ ಮೀರಿದೆ’ ಎಂದಿದ್ದಾರೆ ಚಂದನ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos