ಪಹಲ್ಗಾಮ್ ದಾಳಿಯ ತಟಸ್ಥ ತನಿಖೆಗೆ ಸಿದ್ಧ; ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭರವಸೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಬಲವಾದ ಅನುಮಾನ ಭಾರತಕ್ಕೆ ಉಂಟಾಗಿದ್ದರಿಂದ ಪಾಕಿಸ್ತಾನದ ವಿರುದ್ಧ 5 ಕಠಿಣ ಕ್ರಮಕ್ಕೆ ಮುಂದಾಗಿದೆ. ಇದೀಗ ಪಹಲ್ಗಾಮ್ ದಾಳಿಯ ಬಗ್ಗೆ ಮೊದಲ ಬಾರಿ ಸಾರ್ವಜನಿಕ ಹೇಳಿಕೆ ನೀಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ದಾಳಿಯ ಕುರಿತಾದ'ತಟಸ್ಥ ತನಿಖೆ'ಗೆ ಸಿದ್ಧ ಎಂದಿದ್ದಾರೆ. ಹಾಗೇ, ಸುಂಧೂ ಜಲ ಒಪ್ಪಂದ ರದ್ದುಗೊಳಿಸುವ ಮೂಲಕ 'ನೀರಿನ ಹರಿವನ್ನು ಕಡಿಮೆ ಮಾಡುವ ಯಾವುದೇ ಪ್ರಯತ್ನ ಮಾಡಿದರೂ ಅದಕ್ಕೆ ನಮ್ಮ ವಿರೋಧವಿದ್ದೇ ಇದೆ' ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್, ಏಪ್ರಿಲ್ 26: ಕಾಶ್ಮೀರ ಕಣಿವೆಯ ಪಹಲ್ಗಾಮ್ ಭಯೋತ್ಪಾದನಾ ದಾಳಿಯಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಇಸ್ಲಾಮಾಬಾದ್ ಈ ದಾಳಿಯ ಬಗ್ಗೆ “ತಟಸ್ಥ ತನಿಖೆಗೆ” ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯಲ್ಲಿ 26 ಜನರ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಅಬೋಟಾಬಾದ್‌ನ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಭಾರತದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಪಾಕಿಸ್ತಾನವು ಯಾವುದೇ ತಟಸ್ಥ, ಪಾರದರ್ಶಕ ತನಿಖೆಯಲ್ಲಿ ಭಾಗವಹಿಸಲು ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದ ದಾಳಿಗೆ ಕಾರಣರಾದ ದುಷ್ಕರ್ಮಿಗಳು ಮತ್ತು “ಪಿತೂರಿ ನಡೆಸಿದವರ” ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಕುಲ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್-ಔಟ್ ಪೆರೇಡ್‌ನಲ್ಲಿ ಮಾತನಾಡಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸಹ ಉಲ್ಲೇಖಿಸಿದ್ದಾರೆ. ಇದರಲ್ಲಿ ಇಸ್ಲಾಮಾಬಾದ್ ‘ತಟಸ್ಥ’ ತನಿಖೆಯಲ್ಲಿ ಭಾಗವಹಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
India’s reckless attempt to blame Pakistan for the tragedy in Pahalgam is both irresponsible and dangerous.
Pakistan strongly rejects these allegations and is ready to participate in any neutral and transparent investigation. pic.twitter.com/h552htl3bk
— Prime Minister Shehbaz Sharif (Parody) (@NotCMShehbaz) April 26, 2025
ಹಾಗೇ, ಪಿಎಂ ಷರೀಫ್ ತಮ್ಮ ಭಾಷಣದಲ್ಲಿ ನೀರನ್ನು “ಪ್ರಮುಖ ಮತ್ತು ರಾಷ್ಟ್ರೀಯ ಹಿತಾಸಕ್ತಿ” ಎಂದು ಬಣ್ಣಿಸಿದರು. ಪಾಕಿಸ್ತಾನವು ತನ್ನ ಜಲ ಸಂಪನ್ಮೂಲಗಳನ್ನು ರಾಜಿ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಅವರು ಸೂಚಿಸಿದರು. “ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ನೀರಿನ ಹರಿವನ್ನು ನಿಲ್ಲಿಸುವ, ಕಡಿಮೆ ಮಾಡುವ, ತಿರುಗಿಸುವ ಯಾವುದೇ ಪ್ರಯತ್ನಕ್ಕೆ ಸಂಪೂರ್ಣ ಬಲ ಮತ್ತು ಶಕ್ತಿಯಿಂದ ಪ್ರತಿಕ್ರಿಯಿಸಲಾಗುವುದು” ಎಂದು ಅವರು ಭಾರತಕ್ಕೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ತಮಗೆ ತಾವೇ ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
26 ಭಾರತೀಯ ಪ್ರವಾಸಿಗರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಅವರ ಈ ಹೇಳಿಕೆಗಳು ಹೊರಬಿದ್ದಿವೆ. “ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲು ನೆಪವಾಗಿ ಬಳಸುತ್ತಿದೆ” ಎಂದು ಷರೀಫ್ ಆರೋಪಿಸಿದರು. “ಯಾವುದೇ ಪುರಾವೆಗಳಿಲ್ಲದೆ, ಯಾವುದೇ ತನಿಖೆಯಿಲ್ಲದೆ ಪಾಕಿಸ್ತಾನವನ್ನು ಶಿಕ್ಷಿಸಲು ಭಾರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ, ನಾನು ಯುದ್ಧದ ಪರ ಅಲ್ಲ: ಸಿದ್ದರಾಮಯ್ಯ
“ಭಯೋತ್ಪಾದನೆಯ ವಿರುದ್ಧ ವಿಶ್ವದ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿ, ನಾವು ಅಪಾರ ನಷ್ಟವನ್ನು ಅನುಭವಿಸಿದ್ದೇವೆ, 90,000 ಸಾವುನೋವುಗಳು ಮತ್ತು ಕಲ್ಪನೆಗೂ ಮೀರಿದ ಆರ್ಥಿಕ ನಷ್ಟಗಳು 600 ಶತಕೋಟಿ ಯುಎಸ್ ಡಾಲರ್‌ಗಳನ್ನು ಮೀರಿದೆ” ಎಂದು ಪಾಕ್ ಪ್ರಧಾನಿ ಶೆಹಬಾಜ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sat, 26 April 25