AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲೂಚಿಸ್ತಾನದಲ್ಲಿ ಪಾಕ್ ಸೇನೆ ಮೇಲೆ ಐಇಡಿ ದಾಳಿ, ಪಾಕಿಸ್ತಾನದ 10 ಸೇನಾಧಿಕಾರಿಗಳು ಸಾವು

ಪಾಕ್ ಸೇನಾ ಬೆಂಗಾವಲು ಪಡೆಯ ಮೇಲೆ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿ ನಡೆಸಿದೆ. ಈ ದಾಳಿಯಲ್ಲಿ 10 ಪಾಕ್​​ ಸೈನಿಕರು ಸಾವನ್ನಪ್ಪಿದ್ದಾರೆ. ಶುಕ್ರವಾರ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ಐಇಡಿ ದಾಳಿಯನ್ನು ನಡೆಸಿತ್ತು. ಪಾಕ್ ನಾಶ ಮಾಡುವುದು ನಮ್ಮ ಉದ್ದೇಶವಾಗಿದೆ. ನಮ್ಮ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಈ ದಾಳಿ ಎಂದು ಹೇಳಿದ್ದಾರೆ.

ಬಲೂಚಿಸ್ತಾನದಲ್ಲಿ ಪಾಕ್ ಸೇನೆ ಮೇಲೆ ಐಇಡಿ ದಾಳಿ, ಪಾಕಿಸ್ತಾನದ 10 ಸೇನಾಧಿಕಾರಿಗಳು ಸಾವು
ಪಾಕ್ ಸೇನೆ ಮೇಲೆ ಐಇಡಿ ದಾಳಿ
ಅಕ್ಷಯ್​ ಪಲ್ಲಮಜಲು​​
|

Updated on: Apr 26, 2025 | 10:55 AM

Share

ಬಲೂಚಿಸ್ತಾನ, ಏ.26: ಪಾಕಿಸ್ತಾನದ 10 ಸೇನಾಧಿಕಾರಿಗಳನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಲಿ ಪಡೆದಿದೆ. ಶುಕ್ರವಾರ ಬಲೂಚಿಸ್ತಾನದ (Balochistan) ಕ್ವೆಟ್ಟಾದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ಐಇಡಿ ದಾಳಿಯಲ್ಲಿ ಹತ್ತು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ .ಕ್ವೆಟ್ಟಾದ ಮಾರ್ಗತ್‌ನಲ್ಲಿ ಪಾಕಿಸ್ತಾನಿ (Pakistani) ಸೇನಾ ಬೆಂಗಾವಲು ಪಡೆಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ ನಡೆಸಲಾಗಿದೆ. ಈ ದಾಳಿಯನ್ನು ಹೊಣೆಯನ್ನು ಹೊತ್ತಿದ್ದು, ನಾವೇ ಈ ದಾಳಿಯನ್ನು ನಡೆಸಿದ್ದೇವೆ. ಪಾಕ್​ ಸೇನೆಯ ಮೇಲೆ ದಾಳಿ ಮಾಡಲು ತನ್ನ ಯೋಧರಿಗೆ ರಿಮೋಟ್-ಕಂಟ್ರೋಲ್ಡ್ ಸಾಧನ ನೀಡಲಾಗಿತ್ತು. ಇದನ್ನು ಬಳಸಿಕೊಂಡು ಪಾಕ್ ಸೇನಾ ಬೆಂಗಾವಲು ಪಡೆಯನ್ನು ಬಲಿ ಪಡೆದಿದ್ದೇವೆ ಎಂದು ಹೇಳಿದೆ. ನಮ್ಮ ಶತ್ರುಗಳನ್ನು ನಾಶ ಮಾಡುವುದು ನಮ್ಮ ಉದ್ದೇಶವಾಗಿತ್ತು ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿದೆ.

ಸುಬೇದಾರ್ ಶೆಹಜಾದ್ ಅಮೀನ್, ನೈಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಾಮ್ ಸಲೀಮ್ ಮತ್ತು ಇತರ ಸೈನಿಕರು ಸೇರಿದಂತೆ ಒಟ್ಟು 10 ಜನರನ್ನು ಬಲಿ ಪಡೆದಿದ್ದೇವೆ ಎಂದು ಬಿಎಲ್‌ಎ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಕೇವಲ ಎಚ್ಚರಿಕೆ ಅಷ್ಟೇ, ಮುಂದಿನ ದಿನಗಳಲ್ಲಿ ಈ ಕಾರ್ಯಚರಣೆ ಇನ್ನು ತೀವ್ರವಾಗಿರುತ್ತದೆ. ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಏನು ಬೇಕಾದರೂ ಮಾಡುತ್ತೇವೆ ಎಂದು ಪಾಕ್​​​ಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮತ್ತೆ 5 ಭಯೋತ್ಪಾದಕರ ಮನೆಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ

ಇದನ್ನೂ ಓದಿ
Image
ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ: ವಿಶ್ವಸಂಸ್ಥೆ
Image
ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
Image
ಪಾಕಿಸ್ತಾನಕ್ಕೆ ಭೇಟಿ ನೀಡಬೇಡಿ; ತನ್ನ ಪ್ರಜೆಗಳಿಗೆ ರಷ್ಯಾ ಎಚ್ಚರಿಕೆ
Image
ಭಾರತದಲ್ಲಿದ್ದಾರೆ 14,000 ಪಾಕಿಸ್ತಾನಿ ಪ್ರಜೆಗಳು

ಎಲ್ಲ ಕಡೆಗಳಿಂದ ಹಾಗೂ ನಮ್ಮ ಶಕ್ತಿಯಿಂದ ಪಾಕಿಸ್ತಾನದ ನಾಶವನ್ನು ಮಾಡುತ್ತೇವೆ. ನಮ್ಮ ಹೋರಾಟ ಹೀಗೆ ಮುಂದುವರಿಯುವುದು. ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ವಿರುದ್ಧ ಇಂತಹ ಅನೇಕ ದಾಳಿಗಳು ನಡೆದಿದೆ. ಇನ್ನು ಈ ದಾಳಿಗೂ ಮುನ್ನ ಗುರುವಾರ ಪಾಕ್​​ ಸೇನೆಯ ಜತೆಗೆ ಬಿಎಲ್‌ಎ ಪಡೆ ಗುಂಡಿನ ಚಕಮಕಿ ನಡೆಸಿದೆ. ಇದರಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ದಾಳಿಗಳು ಝಮುರಾನ್, ಕೊಲ್ವಾ ಮತ್ತು ಕಲಾತ್ ಜಿಲ್ಲೆಗಳಲ್ಲಿ ನಡೆದಿವೆ. ಪಾಕ್​​​ಗೆ ಸೇರಿದ ಕೆಲವೊಂದು ಭದ್ರತಾ ಠಾಣೆಗಳನ್ನು ಕೂಡ ಈ ಸಂಘಟನೆ ವಶಪಡಿಸಿಕೊಂಡಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ