AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ತಮಗೆ ತಾವೇ ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!

ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ರಾಜತಾಂತ್ರಿಕ ಕ್ರಮದ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. ಭಾರತ ತೆಗೆದುಕೊಂಡ ನಿರ್ಧಾರದಿಂದ ಪಾಕಿಸ್ತಾನ ತತ್ತರಿಸಿದ್ದು, ಈ ಬಗ್ಗೆ ಪಾಕಿಸ್ತಾನದ ಜನರು ಎಕ್ಸ್ ಮತ್ತು ಇನ್​ಸ್ಟಾಗ್ರಾಂನಲ್ಲಿ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿರುವ ಪೋಸ್ಟ್‌ಗಳು ವೈರಲ್ ಆಗಿವೆ. ಇದು ಅವರು ತಮ್ಮದೇ ಆದ ಸರ್ಕಾರದ ಬಗ್ಗೆ ಹೇಗೆ ಅತೃಪ್ತರಾಗಿದ್ದಾರೆ ಮತ್ತು ತಮ್ಮ ದುಃಸ್ಥಿತಿಯನ್ನು ಹೇಗೆ ಅಪಹಾಸ್ಯ ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ತಮಗೆ ತಾವೇ ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
Pakistan Trolling Themselves
ಸುಷ್ಮಾ ಚಕ್ರೆ
|

Updated on: Apr 25, 2025 | 10:56 PM

Share

ನವದೆಹಲಿ, ಏಪ್ರಿಲ್ 25: ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡುವ ಮೂಲಕ, ಪಾಕಿಸ್ತಾನೀಯರಿಗೆ ವೀಸಾ ರದ್ದು ಮಾಡುವ ಮೂಲಕ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಭಯೋತ್ಪಾದನೆಗೆ ಸಹಾಯ ಮಾಡುವ ಮೂಲಕ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಕಾರಣವಾದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಇದಕ್ಕೆ ಪಾಕಿಸ್ತಾನ ತತ್ತರಿಸಿದೆ. ಭಾರತದ ಕ್ರಮವನ್ನು ನೋಡಿ ಪಾಕಿಸ್ತಾನದ ನಾಗರಿಕರು ತಮ್ಮನ್ನು ತಾವೇ ಅಪಹಾಸ್ಯ ಮಾಡಿಕೊಳ್ಳುತ್ತಿದ್ದಾರೆ, ತಮ್ಮ ಬಗ್ಗೆಯೇ ಟ್ರೋಲ್ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತ ದಂಡನಾತ್ಮಕ ಕ್ರಮಗಳ ಸರಣಿಯನ್ನು ಘೋಷಿಸುತ್ತಿದ್ದಂತೆ, ಪಾಕಿಸ್ತಾನಿ ನಾಗರಿಕರು ತಮ್ಮನ್ನು ತಾವು ಟ್ರೋಲ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಮುಂದಿನ ನಡೆಯ ಬಗ್ಗೆ ಪಾಕಿಸ್ತಾನಿ ಸರ್ಕಾರ ತತ್ತರಿಸುತ್ತಿರುವಾಗ, ಪಾಕಿಸ್ತಾನಿಗಳು ಸಿಂಧೂ ನದಿಗಿಂತ ವೇಗವಾಗಿ ಹರಿಯುವ ಮೀಮ್‌ಗಳ ಪ್ರವಾಹವನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ತಮ್ಮನ್ನು ತಾವು ಟ್ರೋಲ್ ಮಾಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ನೀರಿನ ಕೊರತೆಯಿಂದ ಹಿಡಿದು ಸಂಪೂರ್ಣ ವಿದ್ಯುತ್ ಕಡಿತದವರೆಗೆ, ಭಾರತದ ಕ್ರಮಗಳಿಂದಾಗಿ ತಾವು ಎದುರಿಸಬೇಕಾಗಬಹುದಾದ ಹಲವಾರು ಪರಿಣಾಮಗಳನ್ನು ಪಾಕಿಸ್ತಾನಿಗಳು ಊಹಿಸಿದ್ದಾರೆ.

ಇದನ್ನೂ ಓದಿ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
Image
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ಕಾಶ್ಮೀರದ ಪಹಲ್ಗಾಮ್‌ನ ರೆಸಾರ್ಟ್ ಪಟ್ಟಣದಲ್ಲಿ 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ನಂತರ ತ್ವರಿತ ಕ್ರಮಗಳ ಸರಣಿಯಲ್ಲಿ, ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ವೀಸಾಗಳನ್ನು ಸ್ಥಗಿತಗೊಳಿಸುವುದು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕೆ ಇಳಿಸುವುದಾಗಿ ಘೋಷಿಸಿತು. ತಕ್ಷಣವಲ್ಲದಿದ್ದರೂ, ಭಾರತ ಸಿಂಧೂ ನದಿ ನೀರನ್ನು ಬಿಡದಿದ್ದರೆ ಪಾಕಿಸ್ತಾನದ ಕೃಷಿ ಮತ್ತು ಇಂಧನ ವಲಯಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಬಹುದು. ಏಕೆಂದರೆ ಪಾಕಿಸ್ತಾನದ ಜೀವನಾಡಿಯಾದ ಸಿಂಧೂ ನದಿ ಅದರ ಕೃಷಿ ಭೂಮಿಯ 80%ಗೆ ನೀರನ್ನು ಒದಗಿಸುತ್ತವೆ. ಅದರ ಜಲವಿದ್ಯುತ್ ಉತ್ಪಾದನೆಯ ಸುಮಾರು ಮೂರನೇ ಒಂದು ಭಾಗವು ಸಿಂಧೂ ಜಲಾನಯನ ಪ್ರದೇಶದ ನೀರನ್ನು ಅವಲಂಬಿಸಿದೆ.

ಪಾಕಿಸ್ತಾನಿಗಳು ಈಗ ಸ್ನಾನಕ್ಕೂ ಸಹ ಭಾರತದಿಂದ ನೀರು ಕೇಳಬೇಕಾಗುತ್ತದೆ ಎಂದು ಸೂಚಿಸುವ ಮೀಮ್ ಅನ್ನು ಒಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದರೆ, ಪಾಕ್ ಸರ್ಕಾರವು ಹಲವಾರು ರಾಷ್ಟ್ರಗಳಿಗೆ ಸಾಲವನ್ನು ಮರುಪಾವತಿಸಬೇಕಾಗಿರುವುದರಿಂದ ಭಾರತವು ನಮ್ಮ ಮೇಲೆ ದಾಳಿ ಮಾಡಬಾರದು ಎಂದು ಮತ್ತೊಬ್ಬರು ಟ್ರೋಲ್ ಮಾಡಿಕೊಂಡಿದ್ದಾರೆ.

“ನಾವು ಅರ್ಧದಷ್ಟು ಪ್ರಪಂಚದ ಸಾಲವನ್ನು ಪಾವತಿಸಬೇಕಾಗಿದೆ, ಆದ್ದರಿಂದ ಭಾರತದಿಂದ ಯಾರೂ ನಮ್ಮ ಮೇಲೆ ದಾಳಿ ಮಾಡಲು ಬಿಡಬಾರದು. ಎಲ್ಲರೂ ನಿದ್ರೆಗೆ ಜಾರಿಕೊಳ್ಳಿ” ಎಂದು ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಮತ್ತೊಬ್ಬರು ಹಾಸ್ಯಮಯವಾಗಿ, “ಪಾಕಿಸ್ತಾನಿ ಸರ್ಕಾರ ಭಾರತವು ಪಾಕಿಸ್ತಾನವನ್ನು ವಶಪಡಿಸಿಕೊಳ್ಳಬೇಕೆಂದು ಬಯಸುತ್ತದೆ. ಇದರಿಂದ ಅವರು ಜನರಿಗೆ ಹಣವನ್ನು ಖರ್ಚು ಮಾಡಲು ಮತ್ತು ಪ್ರಪಂಚದಿಂದ ಸಾಲ ಮನ್ನಾ ಕೇಳಲು ಚಿಂತಿಸಬೇಕಾಗಿಲ್ಲ” ಎಂದು ಮೀಮ್ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ