ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !

ವಾಹನ ತಯಾರಿಕೆಯಲ್ಲಿ ನನಗೆ ಇಬ್ಬರು ಸಹಾಯ ಮಾಡಿದ್ದಾರೆ. ಮೋಟಾರ್ ವೈಂಡಿಂಗ್​, ಎಲೆಕ್ಟ್ರಿಕಲ್​ ಸಾಮಗ್ರಿಗಳ ಅಳವಡಿಕೆ ಸೇರಿ ಎಲ್ಲ ಕೆಲಸವನ್ನೂ ನಾವು ಮನೆಯಲ್ಲೇ ಮಾಡಿದ್ದೇವೆ. ವಿದ್ಯುತ್​ ಉಪಕರಣಗಳ ಬಗ್ಗೆ ನನ್ನ ಸ್ನೇಹಿತರೊಬ್ಬರು ಸಲಹೆಗಳನ್ನು ನೀಡಿದ್ದಾರೆ ಎಂದು ಎಎನ್​ಐಗೆ ಸುಶೀಲ್​ ತಿಳಿಸಿದ್ದಾರೆ.

ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !
ಸುಶೀಲ್​ ಅಗರ್​ವಾಲ್ ಮತ್ತು ಅವರು ತಯಾರಿಸಿದ ವಾಹನ
Follow us
Lakshmi Hegde
|

Updated on:Mar 14, 2021 | 7:25 PM

ಭುವನೇಶ್ವರ್: ಯಾರಲ್ಲಿ ಏನು ಪ್ರತಿಭೆ-ಶಕ್ತಿ ಇರುತ್ತದೆ ಎಂಬುದನ್ನು ಸುಲಭಕ್ಕೆ ಅಳೆಯಲು ಸಾಧ್ಯವೇ ಇಲ್ಲ..ಇಲ್ಲಿ ನೋಡಿ, ಸಾಮಾನ್ಯ ರೈತನೊಬ್ಬ ಸೌರಶಕ್ತಿ ಚಾಲಿತ ಬ್ಯಾಟರಿಯನ್ನು ಹಾಕಿ ಓಡಿಸಬಹುದಾದ ನಾಲ್ಕು ಚಕ್ರಗಳ ವಾಹನವೊಂದನ್ನು ತಯಾರಿಸಿ ಅಚ್ಚರಿಗೆ ಕಾರಣವಾಗಿದ್ದಾರೆ. ಇಂಟರ್​ನೆಟ್​ನಲ್ಲಂತೂ ಹೀರೋ ಆಗಿಬಿಟ್ಟಿದ್ದಾರೆ. ಇವರ ಹೆಸರು ಸುಶೀಲ್ ಅಗರ್​ವಾಲ್​. ಓಡಿಶಾದ ಮಯೂರ್​ಭಂಜ್​ನ ಉಪವಿಭಾಗವಾದ ಕಾರಂಜಿಯಾದ ನಿವಾಸಿ. ಇದೀಗ ವಿಭಿನ್ನವಾದ ವಾಹನವೊಂದನ್ನು ಸಿದ್ಧಪಡಿಸಿದ್ದಾರೆ. ಈ ವಾಹನದ ವಿಶೇಷತೆಯೆಂದರೆ ಇದು 850 ವ್ಯಾಟರ್​ ಮೋಟಾರ್​, 100 Ah/54 ವೋಲ್ಟ್ಸ್​​ನ ಬ್ಯಾಟರಿಯಿಂದ ಚಲಿಸುತ್ತದೆ. ನೀವು ಒಮ್ಮೆ ಪೂರ್ತಿ ಚಾರ್ಜ್​ ಮಾಡಿಬಿಟ್ಟರೆ ಬರೋಬ್ಬರಿ 300 ಕಿಮೀ ದೂರ ಓಡಿಸಬಹುದು.

ಮನೆಯಲ್ಲೇ ಇದೆ ವರ್ಕ್​ಶಾಪ್​ ಸುಶೀಲ್​ ಅಗರ್​ವಾಲ್​ ಈ ವಾಹನ ತಯಾರಿಸಲು ಶುರುಮಾಡಿದ್ದು ಲಾಕ್​ಡೌನ್​ ಸಮಯದಲ್ಲಿ. ಇದಕ್ಕಾಗಿ ಮನೆಯಲ್ಲೇ ಒಂದು ಕೋಣೆಯನ್ನು ಮೀಸಲಿಟ್ಟಿದ್ದರು. ಅಲ್ಲಿಯೇ ವಿಭಿನ್ನ ವಾಹನ ರೆಡಿ ಆಗಿದೆ. ವಾಹನಕ್ಕೆ ಅಳವಡಿಸಲಾದ ಬ್ಯಾಟರಿಗಳು ಚಾರ್ಜ್​ ಆಗಲು ಸುಮಾರು ಎಂಟರಿಂದ ಎಂಟೂವರೆ ತಾಸು ಬೇಕು. ನಿಧಾನಕ್ಕೆ ಚಾರ್ಜ್​ ಆದರೂ 10ವರ್ಷಗಳ ಕಾಲ ಬಾಳಿಕೆಗೆ ಬರುತ್ತವೆ. ಹಾಗೆ ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿಕೊಂಡರೆ 300 ಕಿಮೀ ದೂರವನ್ನು ನಿರಾತಂಕವಾಗಿ ಕ್ರಮಿಸಬಹುದು ಎನ್ನುತ್ತಾರೆ ಸುಶೀಲ್​​ ಅಗರ್​ವಾಲ್​.

ವಾಹನ ತಯಾರಿಕೆಯಲ್ಲಿ ನನಗೆ ಇಬ್ಬರು ಸಹಾಯ ಮಾಡಿದ್ದಾರೆ. ಮೋಟಾರ್ ವೈಂಡಿಂಗ್​, ಎಲೆಕ್ಟ್ರಿಕಲ್​ ಸಾಮಗ್ರಿಗಳ ಅಳವಡಿಕೆ ಸೇರಿ ಎಲ್ಲ ಕೆಲಸವನ್ನೂ ನಾವು ಮನೆಯಲ್ಲೇ ಮಾಡಿದ್ದೇವೆ. ವಿದ್ಯುತ್​ ಉಪಕರಣಗಳ ಬಗ್ಗೆ ನನ್ನ ಸ್ನೇಹಿತರೊಬ್ಬರು ಸಲಹೆಗಳನ್ನು ನೀಡಿದ್ದಾರೆ ಎಂದು ಎಎನ್​ಐಗೆ ಸುಶೀಲ್​ ತಿಳಿಸಿದ್ದಾರೆ. ಲಾಕ್​ಡೌನ್​ ಶುರುವಾದಾಗ ಕೆಲಸ ಶುರು ಮಾಡಿದ್ದೆವು. ಅದು ಪೂರ್ಣಗೊಳ್ಳಲು ಮೂರು ತಿಂಗಳು ಬೇಕಾಯಿತು. ಒಂದು ನಾಲ್ಕು ಚಕ್ರದ ವಾಹನ ತಯಾರಿಸಬೇಕು ಎಂದು ಯೋಚನೆ ಬಂದಾಗ ಕಾರ್ಯರೂಪಕ್ಕೆ ಇಳಿದೆ. ಲಾಕ್​ಡೌನ್​ ಮುಗಿಯುತ್ತಿದ್ದಂತೆ ಇಂಧನ ಬೆಲೆ ಏರಿಕೆಯಾಗುತ್ತದೆ ಎಂಬುದು ನನಗೆ ಪಕ್ಕಾ ಗೊತ್ತಿತ್ತು. ಹಾಗಾಗಿ ಎಷ್ಟಾಗತ್ತೋ ಅಷ್ಟು ಬೇಗ, ಪೆಟ್ರೋಲ್​, ಡೀಸೆಲ್​ ಅಗತ್ಯವಿಲ್ಲದ ಒಂದು ಸ್ವಂತ ಕಾರನ್ನು ಹೊಂದಲು ಬಯಸಿದ್ದೆ. ಅದರ ಪರಿಣಾಮವಾಗಿ ಹೀಗೊಂದು ಸೌರಶಕ್ತಿ ಚಾಲಿತ ಬ್ಯಾಟರಿಯಿಂದ ಓಡುವ ವಾಹನ ಸಿದ್ಧಪಡಿಸಿದೆ ಎಂದೂ ಹೇಳಿದ್ದಾರೆ. ಹಾಗೇ, ಇದಕ್ಕಾಗಿ ಕೆಲವು ಪುಸ್ತಕ, ಯೂಟ್ಯೂಬ್ ವಿಡಿಯೋಗಳನ್ನೂ ನೋಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಒಡಿಶಾದ ಈ ರೈತನ ಬಗ್ಗೆ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ. ಇಂಥ ವಾಹನಗಳು ಪರಿಸರ ಸ್ನೇಹಿಯಾಗಿರುತ್ತವೆ. ಸರ್ಕಾರಗಳು ಗಮನಕೊಡಬೇಕು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!

ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ

Published On - 7:22 pm, Sun, 14 March 21

Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ