ತುಮಕೂರು ನಿವಾಸಿಯೊಬ್ಬರನ್ನು ಮದುವೆಯಾಗಿ ಮೂರು ಮಕ್ಕಳನ್ನು ಹೆತ್ತಿರುವ ಪಾಕಿಸ್ತಾನಿ ಮಹಿಳೆ!
ಅಸಲಿಗೆ, ಅಸ್ಲಂ ಪಾಶಾನ ಸಹೋದರಿಯನ್ನು ಪಾಕಿಸ್ತಾನದ ಯುವಕನೊಬ್ಬನಿಗೆ ಕೊಟ್ಟು ಮದುವೆ ಮಾಡಲಾಗಿದೆ ಮತ್ತು ಆಕೆಯ ಕಸಿನ್ ಆಗಿರುವ ಫೈಜಾಳನ್ನು ಪಾಶಾಗೆ ತಂದುಕೊಳ್ಳಲಾಗಿದೆಯಂತೆ. ಪಾಶಾನ ಚಿಕ್ಕಪ್ಪ ಹೇಳುವ ಪ್ರಕಾರ ಫೈಜಾಳ ಪಾಕಿಸ್ತಾನಿ ಸಂಬಂಧಿಕರು ಆಗಾಗ್ಗೆ ತುಮಕೂರುಗೆ ಬಂದ ಹೋಗುತ್ತಾರೆ ಮತ್ತು ಅದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ದಾಖಲೆಗಳಿವೆ.
ತುಮಕೂರು, ಏಪ್ರಿಲ್ 26: ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತದಲ್ಲಿರುವ ಎಲ್ಲ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿಗಳಿಗೆ ಫೋನ್ ಮಾಡಿದ ಬಳಿಕ ಗೃಹ ಇಲಾಖೆಗಳು ತಮ್ಮ ರಾಜ್ಯಲ್ಲಿರುವ ಪಾಕಿಸ್ತಾನೀಯರ ಲಿಸ್ಟ್ ತಯಾರು ಮಾಡುತ್ತಿದ್ದಾರೆ. ತುಮಕೂರುನಲ್ಲಿ ಅಸ್ಲಂ ಪಾಶಾ (Aslam Pasha) ಹೆಸರಿನ ವ್ಯಕ್ತಿಯೊಬ್ಬ ಸುಮಾರು 18 ವರ್ಷಗಳ ಹಿಂದೆ ಪಾಕಿಸ್ತಾನದ ಫೈಜಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದಾರೆ. ನಮ್ಮ ತುಮಕೂರು ಪ್ರತಿನಿಧಿ ಅಸ್ಲಂ ಪಾಶಾನ ಚಿಕ್ಕಪ್ಪನೊಂದಿಗೆ ಮಾತಾಡಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಬಗ್ಗೆ ಕೇಳಿದ ನಂತರ ಪಾಶಾನ ತಾಯಿ ಅಂದರೆ ಫೈಜಾ ಅತ್ತೆ ಹೃದಯಾಘಾತಕ್ಕೊಳಗಾಗಿ ಅಸ್ಪತ್ರೆ ಸೇರಿದ್ದಾರಂತೆ.
ಇದನ್ನೂ ಓದಿ: ಮಂಗಳೂರು: ಪಹಲ್ಗಾಮ್ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್ ಬುಕ್ನಲ್ಲಿ ಪೋಸ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
