AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಲಯನ್​ Vs ಟೈಗರ್​.. ಯಾರು ಗೆಲ್ಲುತ್ತಾರೆ ನೀವೇ ನೋಡಿ!

ಹುಲಿ ಮತ್ತು ಸಿಂಹದ ಮರಿಗಳು ಹೇಗೆ ಕಿತ್ತಾಡುತ್ತಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಒಂದೇ ಕುಟುಂಬದ ಅಣ್ಣ-ತಮ್ಮಂದಿರಂತೆ ಚೇಷ್ಟೆ ಮಾಡಿಕೊಳ್ಳುತ್ತಾ ಕಿತ್ತಾಡಿಕೊಳ್ಳುತ್ತಿವೆ.

Viral Video: ಲಯನ್​ Vs ಟೈಗರ್​.. ಯಾರು ಗೆಲ್ಲುತ್ತಾರೆ ನೀವೇ ನೋಡಿ!
ಲಯನ್​ Vs ಟೈಗರ್
shruti hegde
|

Updated on:May 25, 2021 | 11:44 AM

Share

ಪ್ರಾಣಿಗಳ ಕೀಟಲೆ, ಚೇಷ್ಟೆ ಬಾರೀ ನಗುತರಿಸುತ್ತದೆ. ನೋಡ ನೋಡುತ್ತಿದ್ದಂತೆಯೇ ಪ್ರಾಣಿಗಳು ಜಾರಿ ಬೀಳುವುದು, ನಾಯಿ-ಬೆಕ್ಕು ಸ್ನೇಹಿತರಾಗಿ ಆಟ ಆಡುವುದು, ಕೋತಿ ಊಟಮಾಡುವುದು, ಸಾಕಿದ ಪ್ರಾಣಿಗಳು ದೇವರ ಮುಂದೆ ಮಂತ್ರ ಪಠಿಸುವ ಎಲ್ಲಾ ಅಚ್ಚರಿಯ ಸಂಗತಿಗಳು  ನೋಡುವುದಕ್ಕೆ ಮುದ ನೀಡುತ್ತದೆ. ಪ್ರಾಣಿಗಳ ತುಂಟಾಟದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಬಾರೀ ಸದ್ದು ಮಾಡುತ್ತಿದೆ.

ಹುಲಿ ಮತ್ತು ಸಿಂಹದ ಮರಿಗಳು ಹೇಗೆ ಕಿತ್ತಾಡುತ್ತಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಒಂದೇ ಕುಟುಂಬದ ಅಣ್ಣ-ತಮ್ಮಂದಿರಂತೆ ಚೇಷ್ಟೆ ಮಾಡಿಕೊಳ್ಳುತ್ತಾ ಕಿತ್ತಾಡಿಕೊಳ್ಳುತ್ತಿವೆ. ಒಂದು ಕ್ಷಣ ಜಗಳ ನಿಂತಿದೆ ಅನ್ನುವಷ್ಟರಲ್ಲಿ ಮತ್ತೆ ಮುಖಕ್ಕೆ ಪರಚುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹುಲಿ ಮರಿ ಸುಮ್ಮನಾದರೆ ಸಿಂಹದ ಮರಿ ಜಗಳಕ್ಕೆ ನಿಲ್ಲುತ್ತದೆ. ಸಿಂಹದ ಮರಿ ಸುಮ್ಮನಾದಾಗ ಹುಲಿಮರಿ ಕೆಣಕಲು ಶುರು ಮಾಡುತ್ತಿದೆ.

ಟ್ವಿಟರ್​ನಲ್ಲಿ 42 ಸೆಕೆಂಡುಗಳ ಈ ಪೋಸ್ಟ್​ಅನ್ನು ಹಂಚಿಕೊಳ್ಳಲಾಗಿದ್ದು, ‘ಲಯನ್​ Vs ಟೈಗರ್​’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಸಿಂಹ ಮತ್ತು ಹುಲಿಯ ಕಿತ್ತಾಟ ನಿಯವಾಗಿಯೂ ರಂಜಿಸುವುದಂತೂ ಸತ್ಯ. ಹುಲ್ಲಿನ ಹಾಸಿಗೆಯ ಮೇಲೆ ಉರುಳಾಡುತ್ತಾ ಹುಲಿ ಮತ್ತು ಸಿಂಹದ ಮರಿಗಳು ಪರಸ್ಪರ ಹೊಡೆದುಕೊಳ್ಳುತ್ತಿವೆ.

ವಿಡಿಯೋ 53,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ 3,500ಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ‘ನೋಡಿ.. ನೋಡಿ ಹೋರಾಟ ನೋಡಿ’ ಎಂದು ಬರೆದುಕೊಂಡಿದ್ದಾರೆ. ಯಾರು ಗೆಲ್ಲುತ್ತಾರೆ ಎಂದು ಪಣತೊಟ್ಟು ಕುಸ್ತಿಯಾಡುತ್ತಿವೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ: 

ಹೇಗಿದ್ದಾರೆ ನೋಡಿ ಕರ್ನಾಟಕದ ಶಿಲ್ಪಾ ಶೆಟ್ಟಿ ಮಕ್ಕಳು; ವೈರಲ್​ ಆಯ್ತು ಕ್ಯೂಟ್​ ವಿಡಿಯೋ

Sai Pallavi: ಸಾಯಿ ಪಲ್ಲವಿಗೆ ಜೋಡಿಯಾದ ಕ್ರಿಕೆಟಿಗ ಡೇವಿಡ್​ ವಾರ್ನರ್​; ಫ್ಯಾನ್ಸ್​ ಮೆಚ್ಚಿದ ವಿಡಿಯೋ ವೈರಲ್​

Published On - 11:43 am, Tue, 25 May 21