AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಮೊದಲ ವಾರದ ತನ್ನ ಖರ್ಚು ವೆಚ್ಚ ಹಂಚಿಕೊಂಡ ವ್ಯಕ್ತಿ

ಬೆಂಗಳೂರು ಜೀವನ ದುಬಾರಿ ಅನ್ನೋದು ಅನೇಕರ ಅಭಿಪ್ರಾಯ. ಇದಕ್ಕೆ ಸಾಕ್ಷಿಯಂತಿದೆ ಈ ಪೋಸ್ಟ್. ಹೌದು, ಬೆಂಗಳೂರಿಗೆ ಸ್ಥಳಾಂತರಗೊಂಡ ಒಂದೇ ವಾರಕ್ಕೆ ಎಷ್ಟು ದುಡ್ಡು ಖರ್ಚು ಆಯ್ತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಮೊದಲ ವಾರದ ತನ್ನ ಖರ್ಚು ವೆಚ್ಚ ಹಂಚಿಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Feb 19, 2026 | 1:08 PM

Share

ಬೆಂಗಳೂರು, ಫೆಬ್ರವರಿ 19: ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ (Bengaluru) ಹೆಜ್ಜೆ ಹಾಕುವವರೇ ಹೆಚ್ಚು. ಇಲ್ಲಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆನ್ನುವ ಕನಸು ಅನೇಕರದ್ದು. ಆದರೆ ಈ ದುಬಾರಿ ದುನಿಯಾದಲ್ಲಿ ಕೈಯಲ್ಲಿ ಎಷ್ಟು ದುಡ್ಡಿದ್ರು ಸಾಲದು. ಇದೇ ರೀತಿ ಅನುಭವ ವ್ಯಕ್ತಿಯೊಬ್ಬರಿಗೆ ಆಗಿದೆ. ಬೆಂಗಳೂರಿಗೆ ಬಂದ ಒಂದೇ ವಾರಕ್ಕೆ ತಮ್ಮ ಖರ್ಚು ವೆಚ್ಚಗಳನ್ನು ಬಹಿರಂಗ ಪಡಿಸಿದ್ದಾರೆ. ತಿಂಗಳ ಬಾಡಿಗೆ 18 ಸಾವಿರ, ಏಳು ದಿನದ ಊಟಕ್ಕೆ ಸರಿಸುಮಾರು 12 ಸಾವಿರ ರೂ ಖರ್ಚು ಆಯ್ತು ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಒಂದು ವಾರದ ಖರ್ಚು ವೆಚ್ಚದ ಪೋಸ್ಟ್ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಪ್ರಾಹಾ (Praha) ಎಂಬ ಬಳಕೆದಾರರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಬೆಂಗಳೂರಿನಲ್ಲಿ ಒಂದು ವಾರ ಪೂರ್ಣಗೊಂಡಿದೆ, ತಿಂಗಳ ಬಾಡಿಗೆ 18 ಸಾವಿರ ಹಾಗೂ ಊಟಕ್ಕಾಗಿ 12 ಸಾವಿರ ರೂ ಖರ್ಚು ಮಾಡಿದೆ. ನಗರ ಜೀವನ ಅಗ್ಗವಾಗಿಲ್ಲ. ನನಗೆ ಹೆಚ್ಚು ಖರ್ಚು ಮಾಡುವ ಅಭ್ಯಾಸವಿಲ್ಲ. ಆದರೆ, ಇಂದಿರಾನಗರ, ಎಚ್‌ಎಸ್‌ಆರ್, ಎಲೆಕ್ಟ್ರಾನಿಕ್ ಸಿಟಿಯನ್ನು ಅನ್ವೇಷಿಸಿದೆ. ಎಚ್‌ಎಸ್‌ಆರ್‌ನಲ್ಲಿ ಉಳಿಯಲಿದ್ದೇನೆ, ಉತ್ತಮವಾದ ಸುಸಜ್ಜಿತ ಫ್ಲಾಟ್ ಹಾಗೂ ಎಲ್ಲ ಸವಲತ್ತುಗಳಿವೆ. ಈ ಬೆಂಗಳೂರು ಕೆಲಸ ಮಾಡಲು ಉತ್ತಮ ಸ್ಥಳ, ಇಲ್ಲಿ ಬಹಳಷ್ಟು ಜನರು ಇದರಲ್ಲೇ ಒದ್ದಾಡುತ್ತಿದ್ದಾರೆ. ಈ ರೀತಿ ಎಂದಿಗೂ ನೋಡಿಲ್ಲ ಅಥವಾ ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು

ಫೆಬ್ರವರಿ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಹದಿನಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, 18 ಸಾವಿರ ರೂಗೆ ಸುಸಜ್ಜಿತ ಪ್ಲಾಟ್ ಅನ್ನು ಹೇಗೆ ಕಂಡುಕೊಂಡಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಗರ ಜೀವನ ದುಬಾರಿಯಾಗಿವೆ, ಆದರೆ ಅವಕಾಶಗಳು ಹೇರಳವಾಗಿವೆ ಎಂದಿದ್ದಾರೆ. ಮತ್ತೊಬ್ಬರು, ಎಚ್‌ಎಸ್‌ಆರ್‌ನಲ್ಲಿ ರಿಯಲ್ ಎಸ್ಟೇಟ್ ತುಂಬಾ ದುಬಾರಿಯಾಗಿದೆ. ನೀವು ಬೊಮ್ಮನಹಳ್ಳಿ ಅಥವಾ ಜಿಬಿ ಪಾಳ್ಯದಲ್ಲಿ ಮನೆ ಹುಡುಕಿದರೆ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!