Sai Pallavi: ಸಾಯಿ ಪಲ್ಲವಿಗೆ ಜೋಡಿಯಾದ ಕ್ರಿಕೆಟಿಗ ಡೇವಿಡ್​ ವಾರ್ನರ್​; ಫ್ಯಾನ್ಸ್​ ಮೆಚ್ಚಿದ ವಿಡಿಯೋ ವೈರಲ್​

David Warner: ಐಪಿಎಲ್​ ಮೂಲಕ ಭಾರತಕ್ಕೆ ಡೇವಿಡ್ ವಾರ್ನರ್​ ಹೆಚ್ಚು ಹತ್ತಿರ ಆಗಿದ್ದಾರೆ. ಇಲ್ಲಿನ ಸಿನಿಮಾಗಳ ಬಗ್ಗೆಯೂ ಅವರಿಗೆ ಕ್ರೇಜ್​ ಶುರುವಾಗಿದೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಕೆಲವು ಜನಪ್ರಿಯ ಸಿನಿಮಾಗಳ ದೃಶ್ಯಗಳಿಗೆ ಅವರು ಮಾರುಹೋಗಿದ್ದಾರೆ.

Sai Pallavi: ಸಾಯಿ ಪಲ್ಲವಿಗೆ ಜೋಡಿಯಾದ ಕ್ರಿಕೆಟಿಗ ಡೇವಿಡ್​ ವಾರ್ನರ್​; ಫ್ಯಾನ್ಸ್​ ಮೆಚ್ಚಿದ ವಿಡಿಯೋ ವೈರಲ್​
ಡೇವಿಡ್ ವಾರ್ನರ್ - ಸಾಯಿ ಪಲ್ಲವಿ
Follow us
ಮದನ್​ ಕುಮಾರ್​
| Updated By: Digi Tech Desk

Updated on:May 21, 2021 | 2:53 PM

ಕ್ರಿಕೆಟಿಗರಿಗೂ ಸಿನಿಮಾ ಮಂದಿಗೂ ಒಳ್ಳೆಯ ಒಡನಾಟ ಇದ್ದೇ ಇರುತ್ತದೆ. ಆದರೆ ಆಸ್ಟ್ರೇಲಿಯನ್​ ಕ್ರಿಕೆಟರ್​ ಡೇವಿಡ್​ ವಾರ್ನರ್​ಗೂ ದಕ್ಷಿಣ ಭಾರತದ ಸ್ಟಾರ್​ ನಟಿ ಸಾಯಿ ಪಲ್ಲವಿಗೂ ಏನು ಸಂಬಂಧ? ಸದ್ಯ ಅವರಿಬ್ಬರೂ ಜೋಡಿಯಾಗಿ ಕುಣಿದಿರುವ ಒಂದು ವಿಡಿಯೋ ವೈರಲ್​ ಆಗಿದೆ. ಇದು ಯಾವ ಸಿನಿಮಾದ ವಿಡಿಯೋ ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಡೇವಿಡ್​ ವಾರ್ನರ್​ ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ಗಮನಿಸಿದರೆ ಅದರ ಸತ್ಯ ಏನೆಂಬುದು ಗೊತ್ತಾಗುತ್ತದೆ. ಸದ್ಯಕ್ಕಂತೂ ಆ ವಿಡಿಯೋವನ್ನು ಡೇವಿಡ್​ ವಾರ್ನರ್​ ಮತ್ತು ಸಾಯಿ ಪಲ್ಲವಿ ಅಭಿಮಾನಿಗಳು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಐಪಿಎಲ್​ ಮೂಲಕ ಭಾರತಕ್ಕೆ ಡೇವಿಡ್ ವಾರ್ನರ್​ ಹೆಚ್ಚು ಹತ್ತಿರ ಆಗಿದ್ದಾರೆ. ಇಲ್ಲಿನ ಸಿನಿಮಾಗಳ ಬಗ್ಗೆಯೂ ಅವರಿಗೆ ಕ್ರೇಜ್​ ಶುರುವಾಗಿದೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಕೆಲವು ಜನಪ್ರಿಯ ಸಿನಿಮಾಗಳ ದೃಶ್ಯಗಳಿಗೆ ಫೇಸ್​ಆ್ಯಪ್​ ಮೂಲಕ ತಮ್ಮ ಮುಖವನ್ನು ಜೋಡಿಸಿ ಅವರು ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

ಈ ಹಿಂದೆಯೂ ಅವರು ಹಲವು ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದರು. ಈಗ ಅಭಿಮಾನಿಗಳ ಒತ್ತಾಯದ ಮೇರೆಗೆ ‘ಮಾರಿ 2’ ಸಿನಿಮಾದ ರೌಡಿ ಬೇಬಿ ಹಾಡಿಗೆ ಅವರು ತಮ್ಮ ಮುಖ ಜೋಡಿಸಿದ್ದಾರೆ. ಧನುಷ್​ ಬದಲಿಗೆ ಸಾಯಿ ಪಲ್ಲವಿ ಪಕ್ಕದಲ್ಲಿ ವಾರ್ನರ್​ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಕಂಡು ಫ್ಯಾನ್ಸ್​ ಚಪ್ಪಾಳೆ ಹೊಡೆಯುತ್ತಿದ್ದಾರೆ.

‘ಕೆಜಿಎಫ್: ಚಾಪ್ಟರ್​ 2’​ ಸಿನಿಮಾದ ಟೀಸರ್​ ರಿಲೀಸ್​ ಆಗಿ ದೊಡ್ಡಮಟ್ಟದಲ್ಲಿ ಸೌಂಡು ಮಾಡಿತ್ತು. ಅದು ಡೇವಿಡ್​ ವಾರ್ನರ್​ ಗಮನವನ್ನೂ ಸೆಳೆದಿತ್ತು. ಆ ಟೀಸರ್​ನಲ್ಲಿ ಬೆಂಕಿಯಂತೆ ಸುಡುತ್ತಿರುವ ಗನ್​ ನಳಿಕೆಯಿಂದ ರಾಖಿ ಭಾಯ್​ ಸಿಗರೇಟ್​ ಹಚ್ಚಿಕೊಳ್ಳುವ ಶಾಟ್​ಗೆ ಡೇವಿಡ್​ ವಾರ್ನರ್​ ಫೇಸ್​ಆ್ಯಪ್​ ಮಾಡಿದ್ದರು. ಅದನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ಮಂದಿ ಕೂಡ ‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಕ್ರೇಜ್​ ಹೆಚ್ಚಿಸಿಕೊಳ್ಳುವಂತೆ ಅವರು ಮಾಡಿದ್ದರು. ಆ ವಿಡಿಯೋವನ್ನು ಕೂಡ ಅಭಿಮಾನಿಗಳು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಸಾಯಿ ಪಲ್ಲವಿ ದುಬಾರಿ ಸೀರೆ; ಆದರೆ ವೈರಲ್​ ಆಗಿರುವ ವಿಚಾರವೇ ಬೇರೆ!

ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

Published On - 1:36 pm, Fri, 21 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ