ಐಎಎಸ್ ಪರೀಕ್ಷೆ ಪಾಸ್ ಮಾಡಿದ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?

ಭಾರತೀಯ ತಂಡದಲ್ಲಿ ಸ್ಥಾನ ಪಡೆಯುವ ಮೊದಲು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಕಸ್ಟಮ್ಸ್ ಮತ್ತು ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು.

ಐಎಎಸ್ ಪರೀಕ್ಷೆ ಪಾಸ್ ಮಾಡಿದ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ?
ಅಮಯ್ ಖುರೇಶಿಯಾ
Follow us
ಪೃಥ್ವಿಶಂಕರ
| Updated By: Skanda

Updated on: May 21, 2021 | 9:53 AM

ಕ್ರಿಕೆಟ್​ ಜಗತ್ತಿನಲ್ಲಿ ಹಲವು ಕ್ರಿಕೆಟಿಗರು ಕೇವಲ ತಮ್ಮ ಆಟದಿಂದಲ್ಲದೆ ತಮ್ಮ ವಿಧ್ಯಾಭ್ಯಾಸದಿಂದಲೂ ಸುದ್ದಿಯಲ್ಲಿರುತ್ತಾರೆ. ಇಂತಹ ಸಾಧನೆ ಮಾಡಿದ ಟೀಂ ಇಂಡಿಯಾದ ಏಕೈಕ ಕ್ರಿಕೆಟಿಗನ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾಗಿದೆ. ಆತ ಪದವಿ ಗಳಿಸಿದ್ದು ಮಾತ್ರವಲ್ಲ, ದೇಶದ ಅತ್ಯಂತ ಕಠಿಣ ಐಎಎಸ್ ಪರೀಕ್ಷೆಯಲ್ಲೂ ಉತ್ತೀರ್ಣರಾದಗಿದ್ದರು. ನಂತರ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿದರು. ಈ ಆಟಗಾರನ ಹೆಸರು ಅಮಯ್ ಖುರೇಶಿಯಾ. ಅವರು 90 ರ ದಶಕದಲ್ಲಿ ಭಾರತೀಯ ತಂಡಕ್ಕಾಗಿ ಕ್ರಿಕೆಟ್ ಆಡುತ್ತಿದ್ದರು.

ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣ, ಹುದ್ದೆಗೆ ನೇಮಕ ಅಮಯ್ ಖುರೇಶಿಯಾ ಜನಿಸಿದ್ದು ಮಧ್ಯಪ್ರದೇಶದ ಜಬಲ್ಪುರದಲ್ಲಿ. ಅವರು ಎಡಗೈ ಬ್ಯಾಟ್ಸ್‌ಮನ್ ಆಗಿದ್ದರು. ವೇಗವಾಗಿ ಓಡುವ ಕಲೆ ಅವರಿಗೆ ಇತ್ತು. ಆದರೆ ಭಾರತೀಯ ತಂಡದಲ್ಲಿ ಸ್ಥಾನ ಪಡೆಯುವ ಮೊದಲು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಕಸ್ಟಮ್ಸ್ ಮತ್ತು ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದರು.

ಅವರು 1989-1990ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು 2004-2005ರವರೆಗೆ ಕ್ರಿಕೆಟ್ ಆಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅವರು ಮಧ್ಯಪ್ರದೇಶದ ಪರವಾಗಿ 119 ಪ್ರಥಮ ದರ್ಜೆ ಪಂದ್ಯಗಳಲ್ಲಿ 40.80 ಸರಾಸರಿಯಲ್ಲಿ 7304 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 238. ಮೊದಲ ವಿಭಾಗದಲ್ಲಿ ಅವರು 21 ಶತಕಗಳನ್ನು ಮತ್ತು 31 ಅರ್ಧಶತಕಗಳನ್ನು ಗಳಿಸಿದರು. ಅವರು 1990-91, 1991-92 ಮತ್ತು 2000-01 ಪ್ರಥಮ ದರ್ಜೆ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದರು.

ಎರಡನೇ ಎಸೆತದಲ್ಲಿ ಬೌಂಡರಿ, ಮೊದಲ ಪಂದ್ಯದಲ್ಲಿ ಅರ್ಧಶತಕ 1999 ರ ಶ್ರೀಲಂಕಾ ವಿರುದ್ಧದ ಪೆಪ್ಸಿ ಕಪ್‌ನಲ್ಲಿ ಖುರೇಶಿಯಾ ಭಾರತಕ್ಕಾಗಿ ಏಕದಿನ ಪಂದ್ಯವನ್ನು ಆಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು ಎರಡನೇ ಎಸೆತದಲ್ಲಿ ನಾಲ್ಕು ರನ್ ಗಳಿಸಿದರು. ನಂತರ 45 ಎಸೆತಗಳಲ್ಲಿ 57 ರನ್ ಗಳಿಸಿದರು. ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಎಂಟನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪೆಪ್ಸಿ ಕಪ್‌ನಲ್ಲಿ ಅವರ ಸಾಧನೆ 1999 ರ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಳಿಸುವಂತೆ ಮಾಡಿತು. ಆದರೆ ಅವನಿಗೆ ಆಡಲು ಅವಕಾಶ ಸಿಗಲಿಲ್ಲ.

ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಆದರೆ, 2001 ರಲ್ಲಿ ಅಮಯ್ ಖುರೇಶಿಯಾ ಅವರಿಗೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತು. ಈ ಬಾರಿ ಮತ್ತೆ ಶ್ರೀಲಂಕಾ ವಿರುದ್ಧ ಅವರಿಗೆ ಅವಕಾಶ ಸಿಕ್ಕಿತು ಆದರೆ ಆ ಸಮಯದಲ್ಲಿ ಅವರ ಬ್ಯಾಟ್ ಮಾತನಾಡಲಿಲ್ಲ. ಆದರೆ ಅದರ ನಂತರ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ.

12 ಏಕದಿನ ಪಂದ್ಯಗಳನ್ನು ಆಡಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು ಅಮಯ್ ಖುರೇಶಿಯಾ ಭಾರತ ಪರ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 1999 ರಲ್ಲಿ ಈ 10 ಪಂದ್ಯಗಳನ್ನು ಆಡಿದ್ದಾರೆ. 13.54 ಸರಾಸರಿಯಲ್ಲಿ ಅವರು 149 ರನ್ ಗಳಿಸಿದ್ದಾರೆ. ಖುರೇಶಿಯಾ ನಿವೃತ್ತರಾದಾಗ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಾಧ್ಯಗಲಿಲ್ಲ ಎಂಬುದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಅವರು 2007 ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ನಂತರ ಅವರು ತರಬೇತಿ ಮತ್ತು ಕಾಮೆಂಟೆಟರ್​ ಆಗಿ ತಮ್ಮ ಹೊಸ ಇನ್ನಿಂಗ್ಸ್‌ಗಳನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ವಿರಾಟ್ & ರೋಹಿತ್​ಗೆ ಬೌಲಿಂಗ್ ಮಾಡುವುದು ಕಷ್ಟವಲ್ಲ; ಐಪಿಎಲ್​ನಲ್ಲಿ ಆಡಲು ಪಾಕ್ ಕ್ರಿಕೆಟಿಗನ ಖಡಕ್ ಪ್ಲಾನ್