Anil Kumble: ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ; ಜಂಬೋ ಮೆಚ್ಚಿ ಮಾತಾನಾಡಿದ ಕ್ರಿಕೆಟ್ ದಂತಕತೆಗಳು
ICC Hall Of Fame: 50 ವರ್ಷದ ಭಾರತೀಯ ಕ್ರಿಕೆಟಿಗನನ್ನು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಂಡಿದ್ದು, ಇದರ ವಿಡಿಯೋವನ್ನು ಐಸಿಸಿ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಪಂದ್ಯ ವಿಜೇತ ಆಟಗಾರ ಅನಿಲ್ ಕುಂಬ್ಳೆ ತಮ್ಮ ವೃತ್ತಿ ಜೀವನ ಕೊನೆಗೊಳಿಸಿ ಈಗಾಗಲೇ ಸಾಕಷ್ಟು ವರ್ಷಗಳು ಕಳೆದಿವೆ. ಆದರೂ ಕುಂಬ್ಳೆ ತಮ್ಮ ಕೈಚಳಕದಿಂದ ಮಾಡಿರುವ ಸಾಧನೆಯನ್ನು ಯಾರು ಮರೆಯುವಂತಿಲ್ಲ . ಅವರು 90 ಮತ್ತು 2000 ರ ದಶಕದ ಆರಂಭದಲ್ಲಿ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರು. ಮುರಳಿ ಮತ್ತು ವಾರ್ನ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಮೇ 19 ರಂದು ಐಸಿಸಿ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿತು.
50 ವರ್ಷದ ಭಾರತೀಯ ಕ್ರಿಕೆಟಿಗನನ್ನು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಂಡಿದ್ದು, ಇದರ ವಿಡಿಯೋವನ್ನು ಐಸಿಸಿ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದೆ, ಇದರಲ್ಲಿ ಅನುಭವಿಗಳಾದ ಸ್ಟೀಫನ್ ಫ್ಲೆಮಿಂಗ್, ವಾಸಿಮ್ ಅಕ್ರಮ್, ಕುಮಾರ್ ಸಂಗಕ್ಕಾರ ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡುತ್ತಾರೆ . ಮಾಡುವುದನ್ನು ನೋಡಬಹುದು.
ಕುಂಬ್ಳೆ ನಿದ್ರೆಯಲ್ಲು ಕಾಡುವ ಬೌಲರ್- ಸಂಗಕ್ಕಾರ ಈ ವೀಡಿಯೊದಲ್ಲಿ, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಕುಂಬ್ಳೆ ಅದ್ಭುತ ಕ್ರಿಕೆಟ್ ಚಾಂಪಿಯನ್ ಎಂದು ಬಣ್ಣಿಸಿದ್ದಾರೆ. ಕುಂಬ್ಳೆ ಅಂತಹ ಬೌಲರ್ ಆಗಿದ್ದು, ನನಗೆ ಬ್ಯಾಟಿಂಗ್‌ನಲ್ಲಿ ಸಾಕಷ್ಟು ತೊಂದರೆ ನೀಡಿದ್ದಾರೆ ಎಂದು ಹೇಳಿದರು. ಸಂಗಕ್ಕಾರ, ಒಬ್ಬ ಬ್ಯಾಟ್ಸ್‌ಮನ್ ಆಗಿ ನಾನು ಹಲವು ರಾತ್ರಿಗಳನ್ನು ನಿದ್ದೆ ಮಾಡದೆ ಕುಂಬ್ಳೆ ಬಗ್ಗೆ ಯೋಚಿಸುತ್ತಿದೆ ಎಂದು ಸಂಗಾಕ್ಕಾರ ಹೇಳಿದ್ದಾರೆ. ಕುಂಬ್ಳೆ ಸಾಮಾನ್ಯ ಲೆಗ್ ಸ್ಪಿನ್ನರ್‌ಗಿಂತ ಭಿನ್ನವಾಗಿದ್ದರು. ಅವರ ಎಸೆತಗಳಲ್ಲಿ ರನ್ ಗಳಿಸುವುದು ಸುಲಭವಲ್ಲ. ಉತ್ತಮ ಕ್ರಿಕೆಟಿಗನಲ್ಲದೆ, ಕುಂಬ್ಳೆ ಕೂಡ ಒಬ್ಬ ಮಹಾನ್ ವ್ಯಕ್ತಿ ಎಂದಿದ್ದಾರೆ. ಸಂಗಕ್ಕಾರ ನಂತರ, ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಕೂಡ ಕುಂಬ್ಳೆಯನ್ನು ಹೊಗಳಿದರು. ಕುಂಬ್ಳೆ ವಿರುದ್ಧ ಆಡಲು ಯಾವಾಗಲೂ ಉತ್ತಮ ತಂತ್ರದೊಂದಿಗೆ ಮೈದಾನಕ್ಕೆ ಬರಬೇಕಾಗುತ್ತದೆ ಎಂದು ಅವರು ಹೇಳಿದರು.
“If you were a batsman facing Anil Kumble, you knew that he had a plan for you.”
One of India’s finest on #ICCHallOfFame ?️ pic.twitter.com/55Et7OWpdV
— ICC (@ICC) May 20, 2021
ಕುಂಬ್ಳೆ ಎರಡನೇ ಹಂತದ ಸ್ಪಿನ್ನರ್ – ವಾಸಿಮ್ ಅಕ್ರಮ್ ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಕೂಡ ಕುಂಬ್ಳೆಯನ್ನು ಕಠಿಣ ಬೌಲರ್ ಎಂದು ಬಣ್ಣಿಸಿದರು ಮತ್ತು ಅವರು ಇತರ ಲೆಗ್ ಸ್ಪಿನ್ನರ್ಗಳಿಗಿಂತ ಸಂಪೂರ್ಣವಾಗಿ ಭಿನ್ನರು ಎಂದು ಹೇಳಿದರು. ಅವರು ಪಾಕಿಸ್ತಾನದ ವಿರುದ್ಧ ದೆಹಲಿಯಲ್ಲಿ 10 ವಿಕೆಟ್ ಪಡೆದಾಗ ನನಗೆ ನೆನಪಿದೆ. ನಾನು ಅವರ 10 ನೇ ಬಲಿಪಶುವಾಗಿದ್ದೇ. ಅವರು ನಿಜವಾಗಿಯೂ ಕಠಿಣ ಬೌಲರ್, ಇತರ ಲೆಗ್ ಸ್ಪಿನ್ನರ್ಗಳಿಗಿಂತ ಸಂಪೂರ್ಣವಾಗಿ ಭಿನ್ನಬಾಗಿದ್ದರು ಎಂದು ಪಾಕ್ ಕ್ರಿಕೆಟಿಗ ಬಣ್ಣಿಸಿದ್ದಾರೆ.
Published On - 2:50 pm, Fri, 21 May 21