AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

ನನ್ನನ್ನು ಕೆಟ್ಟದಾಗಿ ಟ್ರೋಲ್​ ಮಾಡಲಾಯಿತು. ಅದು ನನ್ನ ಮೇಲೆ ಪರಿಣಾಮ ಬೀರಿತು. ನಾಲ್ಕು ದಿನ ನಾನು ಮನೆಯಿಂದ ಹೊರಬರಲೇ ಇಲ್ಲ. ನನ್ನ ಡ್ರೈವರ್​, ವಾಚ್​ಮ್ಯಾನ್​ ಮುಂತಾದವರು ಆ ಇಮೇಜ್​ಗಳನ್ನು ನೋಡಿ ನಾನು ಎಂದು ಗುರುತಿಸಿದ್ದರು ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
ಮದನ್​ ಕುಮಾರ್​
|

Updated on:Jun 11, 2022 | 3:05 PM

Share

ಒಂದಕ್ಕಿಂತ ಒಂದು ಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಗುರುತಿಸಿಕೊಂಡವರು ನಟಿ ರಾಧಿಕಾ ಆಪ್ಟೆ. ಬಾಲಿವುಡ್​ನಲ್ಲಿ ಅವರು ತಮ್ಮದೇ ಆದ ಇಮೇಜ್​ ಸೃಷ್ಟಿಸಿಕೊಂಡಿದ್ದಾರೆ. ಎಲ್ಲ ಬಗೆಯ ಪಾತ್ರಗಳಿಗೂ ಸೈ ಎಂಬಂತಿರುವ ಅವರು ಹಲವು ಸಿನಿಮಾಗಳಲ್ಲಿ ತುಂಬ ಬೋಲ್ಡ್​ ಆಗಿ ನಟಿಸಿದ್ದಾರೆ. ತುಂಬ ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಈ ನಟಿಯ ಬದುಕಿನಲ್ಲಿ ಒಂದು ಭಯಾನಕ ಘಟನೆ ನಡೆದಿತ್ತು. ಶೂಟಿಂಗ್​ ಸಂದರ್ಭದ ನಗ್ನ ವಿಡಿಯೋಗಳು ಲೀಕ್​ ಆಗಿದ್ದವು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಘಟನೆಯ ಬಗ್ಗೆ ರಾಧಿಕಾ ಆಪ್ಟೆ ಮಾತನಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ‘ಮ್ಯಾಡ್ಲಿ’ ಆ್ಯಂಥಾಲಜಿ ಸಿನಿಮಾದೊಳಗಿನ ‘ಕ್ಲೀನ್​ ಶೇವನ್’ ಎಂಬ ಕಥೆಯಲ್ಲಿ ​ರಾಧಿಕಾ ನಟಿಸುತ್ತಿದ್ದರು. ಆಗ ಕೆಲವು ನಗ್ನ ದೃಶ್ಯಗಳು ಲೀಕ್​ ಆಗಿದ್ದವು. ಅದರಲ್ಲಿ ಇರುವುದು ರಾಧಿಕಾ ಆಪ್ಟೆ ಎಂದೇ ಹೇಳಲಾಗಿತ್ತು. ‘ನನ್ನನ್ನು ಕೆಟ್ಟದಾಗಿ ಟ್ರೋಲ್​ ಮಾಡಲಾಯಿತು. ಅದು ನನ್ನ ಮೇಲೆ ಪರಿಣಾಮ ಬೀರಿತು. ನಾಲ್ಕು ದಿನ ನಾನು ಮನೆಯಿಂದ ಹೊರಬರಲೇ ಇಲ್ಲ. ಮಾಧ್ಯಮಗಳು ಏನು ಹೇಳುತ್ತವೆ ಎಂಬುದು ಅದಕ್ಕೆ ಕಾರಣ ಆಗಿರಲಿಲ್ಲ. ನನ್ನ ಡ್ರೈವರ್​, ವಾಚ್​ಮ್ಯಾನ್​ ಮುಂತಾದವರು ಆ ಇಮೇಜ್​ಗಳನ್ನು ನೋಡಿ ನಾನು ಎಂದು ಗುರುತಿಸಿದ್ದರು’ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

‘ವಿವಾದ ಹುಟ್ಟುಹಾಕಿದ ಆ ಫೋಟೋಗಳೆಲ್ಲವೂ ನಗ್ನ ಸೆಲ್ಫಿಗಳಾಗಿದ್ದವು. ಸರಿಯಾಗಿ ನೋಡಿದರೆ ಅದು ನಾನಲ್ಲ ಎಂಬುದು ತಿಳಿಯುತ್ತಿತ್ತು. ಅದರಿಂದ ಜನರಿಗೆ ಏನೂ ಆಗಬೇಕಿರಲಿಲ್ಲ. ನಿರ್ಲಕ್ಷಿಸಬಹುದಿತ್ತು. ಉಳಿದಿದ್ದೆಲ್ಲ ಸಮಯ ವ್ಯರ್ಥ. ಆದರೆ ಪಾರ್ಚ್ಡ್​ ಚಿತ್ರಕ್ಕಾಗಿ ನಾನು ಬಟ್ಟೆ ಬಿಟ್ಟಿದಾಗ, ಮುಚ್ಚಿಡಲು ಏನೂ ಉಳಿದಿಲ್ಲ ಎಂಬುದು ನನಗೆ ಅರಿವಾಗಿತ್ತು’ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

ಪಾರ್ಚ್ಡ್ ಸಿನಿಮಾದಲ್ಲಿ ರಾಧಿಕಾ ಆಪ್ಟೆ ಬೋಲ್ಡ್​ ಆದಂತಹ​ ಪಾತ್ರ ಮಾಡಿದ್ದರು. ಆ ರೀತಿ ಪಾತ್ರ ನನಗೆ ಖಂಡಿತವಾಗಿಯೂ ಬೇಕಿತ್ತು ಎಂದು ಅವರು ಹೇಳಿದ್ದಾರೆ. 2005ರಿಂದಲೂ ಬಾಲಿವುಡ್​ನಲ್ಲಿ ಸಕ್ರಿಯರಾಗಿರುವ ರಾಧಿಕಾ ಅವರು ‘ಲಸ್ಟ್​ ಸ್ಟೋರೀಸ್​’ ಸೇರಿದಂತೆ ಹಲವು ವೆಬ್​ ಸಿರೀಸ್​ಗಳಲ್ಲೂ ನಟಿಸಿದ್ದಾರೆ. ಪ್ಯಾಡ್​ ಮ್ಯಾನ್​, ಅಂಧಾಧುನ್​ ಮುಂತಾದ ಯಶಸ್ವಿ ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದರು.

ಇದನ್ನೂ ಓದಿ:

ಕಾಂಡೋಮ್​ ಸೇಲ್ಸ್​ ಎಕ್ಸಿಕ್ಯೂಟಿವ್​ ಆದ್ರು ಬಾಲಿವುಡ್​ ಸ್ಟಾರ್​ ನಟಿ

ಪಾಕಿಸ್ತಾನಿ ಹುಡುಗನ ಜೊತೆ ಮದುವೆ ರದ್ದು ಮಾಡಿಕೊಂಡ ಬಾಲಿವುಡ್​ ನಟಿ ಸಬಾ! ಕಹಿಸತ್ಯಗಳೇ ಕಾರಣ

Published On - 12:42 pm, Fri, 21 May 21

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ