ಕಾಂಡೋಮ್​ ಸೇಲ್ಸ್​ ಎಕ್ಸಿಕ್ಯೂಟಿವ್​ ಆದ್ರು ಬಾಲಿವುಡ್​ ಸ್ಟಾರ್​ ನಟಿ

ಅಕ್ಷಯ್​ ಕುಮಾರ್​ ನಟನೆಯ ರಾಮ್​ಸೇತು ಸಿನಿಮಾದಲ್ಲಿ ನುಸ್ರತ್​ ಬರೂಚಾ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚೋರಿ ಸಿನಿಮಾದಲ್ಲೂ ನುಸ್ರತ್​ ನಟಿಸುತ್ತಿದ್ದಾರೆ.

ಕಾಂಡೋಮ್​ ಸೇಲ್ಸ್​ ಎಕ್ಸಿಕ್ಯೂಟಿವ್​ ಆದ್ರು ಬಾಲಿವುಡ್​ ಸ್ಟಾರ್​ ನಟಿ
ನುಸ್ರತ್
Rajesh Duggumane

|

May 20, 2021 | 7:34 PM

ಬಾಲಿವುಡ್​ನಲ್ಲಿ ನುಸ್ರತ್​ ಬರುಚಾ ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ಸೋನು ಕೆ ಟಿಟ್ಟೂ ಕಿ ಸ್ವೀಟಿ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ಕಾಂಡೋಮ್​ ಸೇಲ್ಸ್​ ಎಕ್ಸಿಕ್ಯೂಟಿವ್ ಆಗಿದ್ದಾರೆ. ಹಾಗಂತ ನಿಜ ಜೀವನದಲ್ಲಲ್ಲ. ಅವರ ಮುಂದಿನ ಚಿತ್ರದಲ್ಲಿ ಹೀಗೊಂದು ಭಿನ್ನ ಪಾತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ರಾಜ್​ ಶಾಂಡಿಲ್ಯ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನುಸ್ರತ್​ ಬರುಚಾ ನಟಿಸುತ್ತಿದ್ದಾರೆ. ಜನ್​​ಹಿತ್​ ಮೆ ಜಾರಿ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ಪೂರ್ಣಗೊಂಡಿದೆ. ಈ ಚಿತ್ರಕ್ಕಾಗಿ ನುಸ್ರತ್​ ಈ ಹೊಸ ಅವತಾರ ತಾಳಿದ್ದಾರಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

ಈ ಬಗ್ಗೆ ಸಿನಿಮಾ ನಿರ್ದೇಶಕ ಶಾಂಡಿಲ್ಯ ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ‘ಯುವತಿಯೊಬ್ಬಳು ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾಳೆ. ಅವಳಿಗೆ ಕಾಂಡೋಮ್ ಸೆಲ್ಸ್​ ಎಕ್ಸಿಕ್ಯೂಟಿವ್​ ಜಾಬ್​ ಸಿಗಲಿದೆ. ಪ್ರತಿ ಮೆಡಿಕಲ್​ ಸ್ಟೋರ್​ಗೆ ಹೋಗಿ ಕಾಂಡೋಮ್​ ಮಾರುವ ಕೆಲಸ ಕಥಾ ನಾಯಕಿಯದ್ದು. ಇಡೀ ಚಿತ್ರದಲ್ಲಿ ಇದುವೇ ಹೈಲೈಟ್​. ಸಿನಿಮಾ ನೋಡಿದ ಪ್ರತಿಯೊಬ್ಬರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ’ ಎಂದಿದ್ದಾರೆ ಅವರು.

ಈ ಸಿನಿಮಾದ ಶೂಟಿಂಗ್ ಏಪ್ರಿಲ್​ನಲ್ಲಿ ಆರಂಭವಾಗಬೇಕಿತ್ತು. ಆದರೆ, ಕೊವಿಡ್​ ಕಾರಣಕ್ಕೆ ಸಿನಿಮಾ ಶೂಟಿಂಗ್​ ವಿಳಂಬವಾಗುತ್ತಿದೆ. ಕೊವಿಡ್​ ಎರಡನೇ ಅಲೇ ಜೋರಿರುವುದರಿಂದ ಸಿನಿಮಾ ಶೂಟಿಂಗ್​ಗೆ ಅನೇಕ ರಾಜ್ಯಗಳು ತಡೆ ನೀಡಿವೆ. ಮಹಾರಾಷ್ಟ್ರ ಕೂಡ ಇದೇ ನಿಯಮ ಜಾರಿಗೆ ತಂದಿದೆ. ಹೀಗಾಗಿ, ಶೂಟಿಂಗ್​ಗೆ ಅವಕಾಶ ನೀಡಿದ ನಂತರ ಚಿತ್ರದ ಶೂಟಿಂಗ್​ ನಡೆಯಲಿದೆ.

ಅಕ್ಷಯ್​ ಕುಮಾರ್​ ನಟನೆಯ ರಾಮ್​ಸೇತು ಸಿನಿಮಾದಲ್ಲಿ ನುಸ್ರತ್​ ಬರೂಚಾ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚೋರಿ ಸಿನಿಮಾದಲ್ಲೂ ನುಸ್ರತ್​ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ನೆಟ್​ಫ್ಲಿಕ್​ ಹಾಗೂ ಅಮೆಜಾನ್​ ಪ್ರೈಂನಲ್ಲಿ ತೆರೆಕಾಣುತ್ತಿವೆ.

ಇದನ್ನೂ ಓದಿ: ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್​ ಹಾಕಿ ಅಪಚಾರ; ಕೃತ್ಯ ಎಸಗಿದವರಿಗೆ ಎದುರಾಯಿತು ಸಂಕಷ್ಟ

 ಇದು ಸಾವೋ ಅಥವಾ ಕೊಲೆಯೋ? ಬೆಂಗಳೂರಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದ ಬಾಲಿವುಡ್​ ನಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada