AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನ್ ಮಾತಾಡ್ತಿರೋದು, ಏನ್ ಸಮಾಚಾರ ಅಂತ ಫೋನ್ ಮಾಡಿ ವಿಚಾರಿಸುತ್ತಾರೆ ; ಪಿಣರಾಯಿ ವಿಜಯನ್ ಬಗ್ಗೆ ಮೋಹನ್​ಲಾಲ್ ಮಾತು

Mohanlal: ವಿಜಯನ್ ಮಾತಾಡ್ತಿರೋದು,ಏನ್ ಸಮಾಚಾರ ಎಂದು ಪಿಣರಾಯಿ ವಿಜಯನ್ ಫೋನ್ ಮಾಡಿ ಕೇಳುತ್ತಾರೆ ಎಂದು ನಿಮಗೆ ಊಹಿಸಲು ಸಾಧ್ಯವೆ? ಅವರ ಈ ಗೆಳೆತನವನ್ನು ನಿಭಾಯಿಸುವ ರೀತಿಯಿಂದಲೇ ನನಗೆ ಅವರು ಇಷ್ಟ ಆಗಿದ್ದುಅಂತಾರೆ ಮೋಹನ್​ಲಾಲ್.

ವಿಜಯನ್ ಮಾತಾಡ್ತಿರೋದು, ಏನ್ ಸಮಾಚಾರ ಅಂತ ಫೋನ್ ಮಾಡಿ ವಿಚಾರಿಸುತ್ತಾರೆ ; ಪಿಣರಾಯಿ ವಿಜಯನ್ ಬಗ್ಗೆ ಮೋಹನ್​ಲಾಲ್ ಮಾತು
ಪಿಣರಾಯಿ ವಿಜಯನ್- ಮೋಹನ್​ಲಾಲ್
ರಶ್ಮಿ ಕಲ್ಲಕಟ್ಟ
|

Updated on:May 20, 2021 | 8:39 PM

Share

ತಿರುವನಂತಪುರಂ: ಹೊಸ ಅಧಿಕಾರವಧಿಗೆ ಕಾಲಿಡುತ್ತಿರುವ ಗೌರವಾನ್ವಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರಕ್ಕೆ ಶುಭ ಹಾರೈಕೆಗಳು. ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆ ಆಗಲಿ,ಕೇರಳ ಜಗತ್ತಿಗೆ ಮಾದರಿಯಾಗಲಿ ಎಂದು ಮಲಯಾಳಂ ನಟ ಮೋಹನ್​ಲಾಲ್ ಫೇಸ್​ಬು​ಕ್​ನಲ್ಲಿ ಹಾರೈಸಿದ್ದಾರೆ. ಪಿಣರಾಯಿ ವಿಜಯನ್ ಇಂದು ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮುಖ್ಯಮಂತ್ರಿ ಜತೆಗಿರುವ ಫೋಟೊವನ್ನು ಮೋಹನ್​ಲಾಲ್ ಪೋಸ್ಟಿಸಿದ್ದಾರೆ. ಅಂದಹಾಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆಗಿನ ಗೆಳೆತನದ ಬಗ್ಗೆ ಮೋಹನ್ಲಾಲ್ ಇಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಮಲಯಾಳ ಮನೋರಮಾ ಪತ್ರಿಕೆ ಜತೆ ಮಾತನಾಡಿದ ಲಾಲೇಟ್ಟನ್ ಪಿಣರಾಯಿ ವಿಜಯನ್ ಬಗ್ಗೆ ಹೇಳಿದ್ದು ಹೀಗೆ…

‘ನನಗೆ ಅಚ್ಚರಿ ಎನಿಸಿದ್ದು ಕಾಮ್ರೇಡ್ ಪಿಣರಾಯಿ ವಿಜಯನ್ ಅವರ ಗೆಳೆತನದ ಬಗ್ಗೆ. ನಮ್ಮಿಬ್ಬರ ನಡುವೆ ಮೂರು ನಾಲ್ಕು ಮ್ಯೂಚುವಲ್ ಫ್ರೆಂಡ್ಸ್ ಇದ್ದಾರೆ. ಯಾವುದೇ ಕೆಲಸ ಅವರ ಕೈಲಾಗದು ಎನ್ನುವಂತಿಲ್ಲ ಹಾಗಿರುವ ಅಸಾಧಾರಣ ವ್ಯಕ್ತಿ ಅವರು. ಪಿಣರಾಯಿ ಅವರ ವ್ಯಕ್ತಿತ್ವವೂ ಅಂಥದ್ದೇ.  ಭೇಟಿಯಾದಾಗೆಲ್ಲ ಆ ಗೆಳೆಯರ ಬಗ್ಗೆ ಹೇಳ್ತಾರೆ, ಅವರ ಜತೆ ಮಾತನಾಡಿದ್ದೆ ಅಂತಾರೆ ಅಷ್ಟೇ. ಆ ವ್ಯಕ್ತಿಗಳು ಹೇಗೆ ಪಿಣರಾಯಿ ಅವರ ಗೆಳೆಯರಾದರು ಎಂಬುದರ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಆ ವ್ಯಕ್ತಿಗಳಿಗೆ ರಾಜಕೀಯ ಕ್ಷೇತ್ರದ ಬಗ್ಗೆ ಗೊತ್ತಿಲ್ಲ. ಅವರ ಕ್ಷೇತ್ರದ ಬಗ್ಗೆ ಪಿಣರಾಯಿಗೂ ಸಂಬಂಧವಿಲ್ಲ. ಈ ರೀತಿ ಯಾವುದೇ ಸಂಬಂಧವಿಲ್ಲದ ಕ್ಷೇತ್ರಗಳ ಹಲವಾರು ಸ್ನೇಹಿತರು ಪಿಣರಾಯಿ ಅವರಿಗಿದ್ದಾರೆ. ಅವರಲ್ಲಿ ಕೆಲವರ ಬಗ್ಗೆ ನನಗೆ ಗೊತ್ತು. ಆ ಒಳ್ಳೆ ಮನಸ್ಸಿನ ಮನುಷ್ಯರ ಒಡನಾಟದ ಪಾಸಿಟಿವ್ ಫೀಲ್ ಪಿಣರಾಯಿ ಅವರಿಗೆ ಸಿಗುತ್ತಿರಬಹುದು. ಗೆಳೆಯರನ್ನು ಆಯ್ಕೆ ಮಾಡುವಾಗ ಇಷ್ಟೊಂದು ಸೂಕ್ಷ್ಮವಾಗಿ ಇರುವ ಬೇರೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಅವರನ್ನು ಭೇಟಿಯಾಗಿದ್ದು ಎಲ್ಲಿ ,ಈಗಲೂ ಈ ಗೆಳೆತನವನ್ನು ಮುಂದುರಿಸಿಕೊಂಡು ಹೇಗೆ ಹೋಗುತ್ತಿದ್ದೀರಿ ಎಂದು ಕೇಳಬೇಕು ಎಂದು ಅನಿಸುತ್ತಿತ್ತು. ಅವರಿಗಾಗಿ ಸಮಯವನ್ನು ಮೀಸಲಿಡುತ್ತಿರುವುದು ಹೇಗೆ ಎಂಬ ಅಚ್ಚರಿ ನನಗೆ. ವಿಜಯನಾ, ಎಂದೊಕ್ಕೆಯುಂಡುಡೊ ಪರಾ (ವಿಜಯನ್ ಮಾತಾಡ್ತಿರೋದು,ಏನ್ ಸಮಾಚಾರ) ಎಂದು ಪಿಣರಾಯಿ ವಿಜಯನ್ ಫೋನ್ ಮಾಡಿ ಕೇಳುತ್ತಾರೆ ಎಂದು ನಿಮಗೆ ಊಹಿಸಲು ಸಾಧ್ಯವೆ? ಅವರ ಈ ಗೆಳೆತನವನ್ನು ನಿಭಾಯಿಸುವ ರೀತಿಯಿಂದಲೇ ನನಗೆ ಅವರು ಇಷ್ಟ ಆಗಿದ್ದು.

ಇದನ್ನೂ ಓದಿ: Pinarayi Vijayan Oath Taking ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿಣರಾಯಿ ವಿಜಯನ್

Published On - 8:33 pm, Thu, 20 May 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!