Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮನೆಯಲ್ಲಿ ಪಾನಿಪುರಿ ರಸದೌತಣ! ನೀವೂ ಮಿಸ್​ ಮಾಡಿಕೊಳ್ಳುತ್ತಿದ್ದೀರಾ?

ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ 2.3 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್ಸ್​ಗಳೂ ಸಹ ಲಭ್ಯವಾಗಿದೆ.

Viral Video: ಮದುವೆ ಮನೆಯಲ್ಲಿ ಪಾನಿಪುರಿ ರಸದೌತಣ! ನೀವೂ ಮಿಸ್​ ಮಾಡಿಕೊಳ್ಳುತ್ತಿದ್ದೀರಾ?
ಮದುವೆ ಮನೆಯಲ್ಲಿ ಪಾನಿಪುರಿ ರಸದೌತಣ
Follow us
TV9 Web
| Updated By: shruti hegde

Updated on: Jun 20, 2021 | 10:54 AM

ಪಾನಿಪುರಿ ಎಂಬ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರುರುತ್ತೆ! ಅದೆಷ್ಟು ದಿನಗಳಾಯ್ತು ಅಲ್ವೇ? ರಸ್ತೆಯ ಬದಿಯಲ್ಲಿ ನಿಂತು ಸ್ನೇಹಿತರೊಡನೆ ಪೈಪೋಟಿಯೊಂದಿಗೆ ಪಾನಿ ಪುರಿ ತಿನ್ನದೇ.. ರಸ್ತೆ ಬದಿಯಲ್ಲಿ ಇರುವ ಗೂಡಂಗಡಿಗಳಿಂದ ಹಿಡಿದು ಬಣ್ಣದ ಲೈಟಿಂಗ್ಸ್​ನೊಂದಿಗೆ ಕಂಗೊಳಿಸುವ ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿಯೂ ಪಾನಿಪುರಿ ಅಷ್ಟು ಫೇಮಸ್​! ಅದೆಷ್ಟೋ ದುಡ್ಡುಕೊಟ್ಟು ವಿವಿಧ ಖಾದ್ಯಗಳನ್ನು ಸವಿದರೂ ಸಹ 25-30 ರೂಪಾಯಿ ಒಳಗೆ ಸಿಗುವ ಪಾನಿಪುರಿಯಷ್ಟು ಸ್ವಾದ ಇನ್ನೆಲ್ಲೂ ಸಿಗಲ್ಲ ಅಂತಾರೆ ನಮ್ಮ ಪಾನಿಪುರಿ ಪ್ರಿಯರು. ಇದೀಗ ಪಾನಿಪುರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಈಗೆಲ್ಲಾ ಮದುವೆ ಮನೆಯಲ್ಲಿ ಚಾಟ್​ ಐಟಮ್ಸ್​ಗಳನ್ನು ಇಡುವುದು ಟ್ರೆಂಡ್​ ಆಗಿಬಿಟ್ಟಿದೆ. ಅದರಲ್ಲಿಯೂ ಪಾನಿಪುರಿ ಹೆಚ್ಚು ಫೇಮಸ್​! ಈಗಷ್ಟೇ ವಿವಾಹವಾದ ನವಜೋಡಿಗಳು ಪಾನಿಪುರಿ ಸವಿಯುತ್ತಿದ್ದಾರೆ. ಮದುಮಗ ತನ್ನ ಸಂಗಾತಿಗೆ ಪಾನಿಪುರಿ ತಿನ್ನಿಸುವ ವಿಡಿಯೋ ಇದೀಗ ವೈರಲ್​ ಆಗಿದೆ.  ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಆಹಾ.. ಪಾನಿಪುರಿ! ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು ಹಾರ್ಟ್​ ಇಮೋಜಿಗಳೊಂದಿಗೆ ಪಾನಿಪುರಿ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

View this post on Instagram

A post shared by ?Annie ? (@arushi_rajput_08)

ಲಾಕ್​ಡೌನ್​ ಸಂದರ್ಭದಲ್ಲಿ ಪಾನಿಪುರಿಯನ್ನು ಮಿಸ್​ ಮಾಡಿಕೊಂಡವರು ಮಿಸ್​ ಯು ಪಾನಿಪುರಿ.. ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಅದರ ಸ್ವಾದವನ್ನು ಬಣ್ಣಿಸಲುಂಟೇ? ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೆಂಡತಿಯ ಆಸೆಯನ್ನು ಪೂರೈಸಿದ ಮದುಮಗನಿಗೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ 2.3 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್ಸ್​ಗಳೂ ಸಹ ಲಭ್ಯವಾಗಿದೆ.

ಇದನ್ನೂ ಓದಿ:

Viral video: ತಲೆ ಮೇಲೆ ಭಾರದ ಪಾತ್ರೆ ಬುಟ್ಟಿ ಹೊತ್ತು ನೀರಿನಲ್ಲಿ ಬೈಕ್​ ಓಡಿಸಿದ ಮಹಿಳೆ! ಅದ್ಭುತ ಪ್ರತಿಭೆಗೆ ಪ್ರಶಂಸೆ

Viral Video: ಅಲುಗಾಡುತ್ತಿರುವ ಸೇತುವೆಯ ಮೇಲೆ ಕೋತಿಯ ಫ್ಯಾಶನ್​ ಶೋ! ಗಮ್ಮತ್ತಾಗಿದೆ ವಿಡಿಯೋ ನೀವೂ ನೋಡಿ