AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಲುಗಾಡುತ್ತಿರುವ ಸೇತುವೆಯ ಮೇಲೆ ಕೋತಿಯ ಫ್ಯಾಶನ್​ ಶೋ! ಗಮ್ಮತ್ತಾಗಿದೆ ವಿಡಿಯೋ ನೀವೂ ನೋಡಿ

ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಹಂಚಿಕೊಂಡ ವಿಡಿಯೋ ಇದು. ಸುಮಾರು 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವಿಡಿಯೋ ಫುಲ್​ ವೈರಲ್​ ಆಗಿದೆ.

Viral Video: ಅಲುಗಾಡುತ್ತಿರುವ ಸೇತುವೆಯ ಮೇಲೆ ಕೋತಿಯ ಫ್ಯಾಶನ್​ ಶೋ! ಗಮ್ಮತ್ತಾಗಿದೆ ವಿಡಿಯೋ ನೀವೂ ನೋಡಿ
ಅಲುಗಾಡುತ್ತಿರುವ ಸೇತುವೆಯ ಮೇಲೆ ಕೋತಿಯ ಫ್ಯಾಶನ್​ ಶೋ!
TV9 Web
| Updated By: shruti hegde|

Updated on:Jun 17, 2021 | 2:29 PM

Share

ಪ್ರಾಣಿಗಳ ತುಂಟಾದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ನಕ್ಕು ನಕ್ಕು ಸಾಕಾಯ್ತಪ್ಪಾ.. ಅನ್ನುವಷ್ಟರ ಮಟ್ಟಿಗೆ ವಿಡಿಯೋ ಕಾಡುತ್ತದೆ. ಮನಸ್ಸಿಗೆ ಖುಷಿ ನೀಡುವ ಪ್ರಾಣಿಗಳ ತುಂಟಾಟದ ವಿಡಿಯೋವನ್ನು ನೋಡಲು ನೆಟ್ಟಿಗರು ಹೆಚ್ಚು ಇಷ್ಪಡುತ್ತಾರೆ. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಂಗ ಅಲುಗಾಡುತ್ತಿರುವ ಸೇತುವೆಯ ಹಗ್ಗದ ಮೇಲೆ ಫ್ಯಾಶನ್​ ಶೋ ಮಾಡುತ್ತಿದೆ. ಸ್ಟೈಲ್​ ಆಗಿ ನಡೆದು ಸಾಗುತ್ತಿರುವ ಮಂಗನನ್ನು ನೋಡಿದ ನೆಟ್ಟಿಗರು ಭೇಷ್​! ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಮಂಗ, ಮನುಷ್ಯನಂತೆಯೇ ನಡೆಯಲು ಪ್ರಯತ್ನಿಸುತ್ತಿದೆ. ಸಹಜ ಅಂದುಕೊಂಡು ಬಿಡಬೇಡಿ.. ಬರಿ ನೆಲದ ಮೇಲಲ್ಲ.. ಅಲುಗಾಡುತ್ತಿರುವ ಸೇತುವೆಯ ಮೇಲೆ. ಎರಡೇ ಕಾಲಿನಲ್ಲಿ ಸ್ಟಂಟ್​ ಮಾಡುತ್ತಾ ಸ್ಟೈಲ್​ ಆಗಿ ನಡೆದುಕೊಂಡು ಸಾಗುತ್ತಿದೆ. ಎರಡೇ ಕಾಲಿನಲ್ಲಿ ಬ್ಯಾಲೆನ್ಸ್​ ತಪ್ಪದೇ ಎಚ್ಚರಿಕೆಯಿಂದ ಸಾಗುತ್ತಿದೆ. ಮಂಗನ ಈ ಸಾಹಸ ನೋಡಿದನೆಟ್ಟಿಗರು ಬಹಳ ಇಷ್ಟ ಪಟ್ಟಿದ್ದಾರೆ.

ತರಬೇತಿ ಪಡೆದಿರುವಂತೆ ಪೋಸ್​ ಕೊಡುತ್ತಾ, ಸರಾಗವಾಗಿ ಹಗ್ಗದ ಮೇಲೆ ಸಾಗುತ್ತಿದೆ ಈ ಮಂಗ. ಎರಡೇ ಕಾಲುಗಳಿಂದ ಬ್ಯಾಲೆನ್ಸ್​ ತಪ್ಪದೇ ಎಚ್ಚರಿಕೆಯಿಂದ ಹಗ್ಗ ದಾಟುತ್ತಿದೆ. ಹರಸಾಹಸ ಪಟ್ಟು ಹಗ್ಗದ ಕೊನೆಯವರೆಗೂ ಹೋಗಿ ತಲುಪಿದೆ.  ಸ್ಟೈಲ್​ ಆಗಿ ನಡೆದು ಸಾಗುತ್ತಿರುವ ಮಂಗನನ್ನು ವಿಡಿಯೋದಲ್ಲಿ ನೋಡಿ ನೀವೂ ಮೆಚ್ಚಿಕೊಳ್ಳುತ್ತೀರಾ.

ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಹಂಚಿಕೊಂಡ ವಿಡಿಯೋ ಇದು. ಸುಮಾರು 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವಿಡಿಯೋ ಫುಲ್​ ವೈರಲ್ ಆಗಿದೆ. ಮಂಗನ ಸರ್ಕಸ್​ ನೋಡಿದ ಕೆಲವರು, ಭೇಷ್​ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಆಶ್ಚರ್ಯವಾಗುತ್ತಿದೆ! ಎಂದು ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ:

Viral Video: ಭರ್ಜರಿ ಭೋಜನ ಸವಿಯುತ್ತಿರುವ ಯುವತಿ! ಕ್ಯಾಮರಾ ಬಂದ ತಕ್ಷಣ ರಿಯಾಕ್ಷನ್ ಹೇಗಿದೆ ನೋಡಿ

Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು

Published On - 2:22 pm, Thu, 17 June 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!