Viral Video: ಭರ್ಜರಿ ಭೋಜನ ಸವಿಯುತ್ತಿರುವ ಯುವತಿ! ಕ್ಯಾಮರಾ ಬಂದ ತಕ್ಷಣ ರಿಯಾಕ್ಷನ್ ಹೇಗಿದೆ ನೋಡಿ

ಇನ್​ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸುಮಾರು 57,400 ವೀಕ್ಷಣೆಗಳನ್ನು ಪಡೆದುಕೊಂಡಿದೆ. 2,000ಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ.

Viral Video: ಭರ್ಜರಿ ಭೋಜನ ಸವಿಯುತ್ತಿರುವ ಯುವತಿ! ಕ್ಯಾಮರಾ ಬಂದ ತಕ್ಷಣ ರಿಯಾಕ್ಷನ್ ಹೇಗಿದೆ ನೋಡಿ
‘ಮದುವೆ ಮನೆಯಲ್ಲಿ ಯುವತಿ ಊಟ ಮಾಡ್ತಾ ಇರೋದ್​ ನೋಡಿ’!
Follow us
TV9 Web
| Updated By: shruti hegde

Updated on:Jun 17, 2021 | 11:12 AM

ಫೋಟೋದಲ್ಲಿ ಸುಂದರವಾಗಿ ಕಾಣಿಸ್ಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಕ್ಯಾಮರಾ ಎದುರು ಬಂದರೆ ಸಾಕು ನಮ್ಮ ನಡವಳಿಕೆಯೇ ಚೇಂಜ್​ ಆಗಿ ಬಿಡುತ್ತದೆ. ಬಹಳ ಶಿಸ್ತು, ಬೇಡ.. ಬೇಡ.. ಅಂದರೂ ಹಲ್ಲು  ಕಿರಿದು ನಕ್ಕೇ ಬಿಡುತ್ತೇವೆ. ಕ್ಯಾಮರಾದ ಪವರೇ ಹಾಗೆ! ಇಲ್ಲೋರ್ವ ಯುವತಿಯ ಪರಿಸ್ಥಿತಿಯೂ ಹಾಗೇ ಆಗಿದೆ. ನೆಮ್ಮದಿಯಿಂದ ಊಟ ಮಾಡಲೂ ಆಗುತ್ತಿಲ್ಲ. ಮದುವೆ ಮನೆಯಲ್ಲಿ ಭರ್ಜರಿ ಭೀಜನ ಸವಿಯುತ್ತಿರುವ ಯುವತಿ ಕ್ಯಾಮರಾ ಬಂದ ತಕ್ಷಣ ಹೇಗೆ ಫೋಸ್​ ಕೊಡ್ತಿದ್ದಾಳೆ ನೋಡಿ. ಯುವತಿಯ ರಿಯಾಕ್ಷನ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಅಗಿದೆ.

ಮದುವೆ ಮನೆಗೆ ಹೋಗಿದ್ದೆ ಅಂದ್ರೆ ಸಾಕು! ಮೊದಲ ಕೇಳುವ ಪ್ರಶ್ನೇಯೇ ಊಟ ಚೆನ್ನಾಗಿತ್ತಾ?.. ವಿವಿಧ ಖಾದ್ಯ, ಹಪ್ಪಳ-ಸಂಡಿಗೆ ಭರ್ಜರಿ ಭೋಜನ, ಮಿಸ್​ ಮಾಡ್ಕೊಳೋಕಾಗತ್ಯೇ? ಗಡದ್ದಾಗಿ ತಿಂದು ಎಲೆ ಅಡಿಕೆ ಹಾಕಿಬಿಟ್ಟರೆ ಅದರಷ್ಟು ತೃಪ್ತಿ ಇನ್ಯಾವುದರಲ್ಲಿಯೂ ಸಿಗುವುದಿಲ್ಲ.

ನಮಗಿಷ್ಟವಾದ ತಿಂಡಿ ಎದುರಿಗಿದ್ದಾಗ ಅದೆಷ್ಟು ಬೇಗ ತಿಂದು ಮುಗಿಸುತ್ತೀನೋ ಎಂಬ ಕಾತುರ. ಇನ್ನು ಕೆಲವು ಬಾರಿ ಆಸೆ ಹೆಚ್ಚಾದಾಗ ಗಡಿಬಿಡಿಯಿಂದ ತಿಂದು ಮುಗಿಸಿಬಿಡುತ್ತೇವೆ. ತಟ್ಟೆಯಲ್ಲಿರುವ ಊಟ ಖಾಲಿ ಆಗುವವರೆಗೆ ಸಮಾಧಾನವೇ ಇಲ್ಲ. ಈ ಯುವತಿಗೂ ಹಾಗೇ ಆಗಿದೆ. ಇಷ್ಟದ ಊಟ ಎದುರಿಗಿದೆ, ತಡ ಮಾಡದೇ ಇಷ್ಪಟ್ಟು ಭೋಜನವನ್ನು ತಿನ್ನುತ್ತಿದ್ದಾಳೆ. ಆದರೆ ಕ್ಯಾಮರಾ ಎದುರು ಬಂದ ತಕ್ಷಣ ನಾಚಿಕೆಯಿಂದ ಸುಮ್ಮನೆ ಒಂದು ಸ್ಮೈಲ್​ ಮಾಡಿ ಚಮಚ ಹಿಡಿದು ತಿನ್ನಲು ಪ್ರಾರಂಭಿಸುತ್ತಾಳೆ. ಈಕೆಯ ರಿಯಾಕ್ಷನ್​ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋದಲ್ಲಿ ನೀವು ಗಮನಿಸುವಂತೆ ಯುವತಿ ಕುರ್ಚಿಯ ಮೇಲೆ ಸಿಂಗಾರ ಮಾಡಿಕೊಂಡು ಕುಳಿತಿದ್ದಾರೆ. ಒಂದು ಕೈಯಲ್ಲಿ ಪ್ಲೇಟ್​ ಹಿಡಿದು ಇನ್ನೊಂದು ಕೈಯಿಂದ ಊಟ ಸವಿಯುತ್ತಿದ್ದಾಳೆ. ಬಟ್ಟಲಿನಲ್ಲಿ ಬಗೆ-ಬಗೆಯ ಊಟವಿದೆ. ಇನ್ನಯಾರೋ ಬಂದು ಬಟ್ಟಲಿಗೆ ಕೈ ಹಾಕಿಬಿಡುತ್ತಾರೋನೋ ಅನ್ನುವಷ್ಟು ಅವಸರದಲ್ಲಿ ತಿನ್ನುತ್ತಿದ್ದಾಳೆ. ಇದ್ದಕ್ಕಿದ್ದಂತೆ ವಿಡಿಯೋಗ್ರಾಫರ್​ ಅವಳ ಬಳಿ ಕ್ಯಾಮರಾ ತಂದಂತೆ ನಾಚುತ್ತಾ, ಸುಂದರವಾಗಿ ಸ್ಮೈಲ್​ ಮಾಡುತ್ತಾ.. ಸ್ಟೈಲ್​ ಆಗಿ ಸ್ಪೂನ್​ ಹಿಡಿದು ನಿಧಾನವಾಗಿ ತಿನ್ನಲು ಪ್ರಾರಂಭಿಸುತ್ತಾಳೆ.

ಇನ್​ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸುಮಾರು 57,400 ವೀಕ್ಷಣೆಗಳನ್ನು ಪಡೆದುಕೊಂಡಿದೆ. 2,000ಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ. ಭಲೇ ಚಾಲಾಕಿ ನೀನು.. ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು, ಕ್ಯಾ,ಮರಾ ಮ್ಯಾನ್​ ನೆಮ್ಮದಿಯಿಂದ ಊಟ ಮಾಡಲು ಬಿಡುತ್ತಿಲ್ಲ.. ಛೇ! ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು

Viral video: ವಿವಾಹವಾಗುವ ಉತ್ಸಾಹದಲ್ಲಿ ಮದುಮಗ! ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸಕತ್​ ಡಾನ್ಸ್

Published On - 11:08 am, Thu, 17 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ