Viral video: ವಿವಾಹವಾಗುವ ಉತ್ಸಾಹದಲ್ಲಿ ಮದುಮಗ! ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸಕತ್ ಡಾನ್ಸ್
ವರ ಗೋಲ್ಡ್ನ್ ಬಣ್ಣದ ಉಡುಪು ಧರಸಿ ಸಕತ್ ರೆಡಿಯಾಗಿದ್ದಾನೆ. ಹೊಸ ಹೊಸ ಸ್ಟೆಪ್ ಹಾಕುವ ಮೂಲಕ ಭರ್ಜರಿ ಡಾನ್ಸ್ನಲ್ಲಿ ಮುಳುಗಿದ್ದಾನೆ.
ಸ್ಮಾರ್ಟ್ಫೋನ್ಗಳ ಯುಗದಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ವೈರಲ್ ಆಗಿ ಬಿಡುತ್ತವೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಜಗತ್ತಿನ ಮೂಲೆ ಮೂಲೆಗೂ ತಲುಪಿಬಿಟ್ಟಿರುತ್ತದೆ. ಇದೀಗ ಮದುವೆ ಆಗಲು ಸಕತ್ ಆಗಿ ಸಿದ್ಧನಾಗಿರುವ ವರನ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮದುವೆ ಮನೆಯಲ್ಲಿ ಸಂಭ್ರಮ, ಸಡಗರ. ಚಿಕ್ಕ- ಮಕ್ಕಳಿಂದ ಹಿಡಿದು ವಯಸ್ಕರವೆರೆಗೆ ಎಲ್ಲರೂ ಕೂಡಾ ನಗುಮೊಗದಿಂದ ಆಚರಣೆ ನಡೆಸಿಕೊಡುತ್ತಾರೆ. ಈಗೆಲ್ಲಾ ವಧು-ವರರು ವೇದಿಕೆಯಲ್ಲಿ ನೃತ್ಯ ಮಾಡುವುದು ಟ್ರೆಂಡ್ ಅಗಿಬಿಟ್ಟಿದೆ. ಹೀಗಿರುವಾಗ ತನ್ನ ವಿವಾಹದ ಕ್ಷಣ ನೆನೆದು ವರ ಬಹಳ ಉತ್ಸುಕನಾಗಿದ್ದಾನೆ. ಕಾಲಿಗೆ ಚಪ್ಪಲಿಯನ್ನೂ ಹಾಕಿಕೊಳ್ಳದೇ ರಸ್ತೆಯಲ್ಲಿ ಬರಿಗಾಲಿನಲ್ಲಿಯೇ ಸಕತ್ ಸ್ಪೆಪ್ ಹಾಕುತ್ತಿದ್ದಾನೆ.
ವಧು-ವರರಿಗೆ ವಿವಾಹವು ಜೀವನದ ಒಂದು ಘಟ್ಟ. ವಿವಾಹ ಆಗುತ್ತಿರುವ ಸಂಭ್ರಮದಲ್ಲಿ ವರ ಸಕತ್ ಡಾನ್ಸ್ ಮಾಡುತ್ತಿದ್ದಾನೆ. ಸೂಪರ್ಹಿಟ್ ಭೋಜ್ಪುರಿ ಹಾಡಿಗೆ ವರ ನೃತ್ಯ ಮಾಡುತ್ತಿದ್ದಾನೆ.
Funny very funny moment dance dulha indain marriage Function #AditiRathore #EktaKapoor #SonuSoodRealHero #ModiHaiToMumkinHai pic.twitter.com/bneBFTGlqp
— Sanjay yadav (@Sanjayy00891732) June 2, 2021
ವರ ಗೋಲ್ಡ್ನ್ ಬಣ್ಣದ ಉಡುಪು ಧರಸಿ ಸಕತ್ ರೆಡಿಯಾಗಿದ್ದಾನೆ. ಹೊಸ ಹೊಸ ಸ್ಟೆಪ್ ಹಾಕುವ ಮೂಲಕ ಭರ್ಜರಿ ಡಾನ್ಸ್ನಲ್ಲಿ ಮುಳುಗಿದ್ದಾನೆ. ವಿವಾಹದ ಉತ್ಸಾಹದಲ್ಲಿ ಕಾಲಿಗೆ ಶೂ ಕೂಡಾ ಧರಿಸದೇ ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸ್ಟೆಪ್ ಹಾಕುತ್ತಿದ್ದಾನೆ. ಈತನ ಜತೆ ಮನೆಯ ಸಂಬಂಧಿಕರು ಕೂಡಾ ಸಾಥ್ ನೀಡಿದ್ದಾರೆ. ವರನ ಉತ್ಸಾಹವನ್ನು ನೋಡಿದ ನೆಟ್ಟಿಗರು ಖುಷಿ ಪಟ್ಟಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ವರನ ಉತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ಶೂ ಧರಿಸಬಹುದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಈಗಾಗಲೇ ವಿವಾಹರಾದವರು ಮದುವೆ ಆದ ಮೇಲೆ ಇಷ್ಟು ಸಂತೋಷವಾಗಿರುವುದಿಲ್ಲ ಬಿಡು! ಎಂದು ಹುಬ್ಬೇರಿಸುತ್ತಾ ತಮ್ಮ ಜೀವನದ ಸ್ಥಿತಿಯನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:
ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್ ವಿಡಿಯೋ ವೈರಲ್
Viral video: ಭರವಸೆಯೇ ಬೆಳಕು; ಸೋಂಕಿನ ನಡುವೆಯೂ 95ರ ವೃದ್ಧೆಯ ಗರ್ಬಾ ಡಾನ್ಸ್