Viral video: ಭರವಸೆಯೇ ಬೆಳಕು; ಸೋಂಕಿನ ನಡುವೆಯೂ 95ರ ವೃದ್ಧೆಯ ಗರ್ಬಾ ಡಾನ್ಸ್

95 ವರ್ಷದ ವೃದ್ಧೆ ಆಸ್ಪತ್ರೆಯ ಹಾಸಿಗೆಯ ಮೆಲೆ ಆಕ್ಷಿಜನ್​​ ಹಾಕಿಕೊಂಡು ಗರ್ಬಾ ಡಾನ್ಸ್​ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋಂಕಿನಿಂದ ಬಳಲುತ್ತಿರುವ ಹಾಗೂ ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಜನರಿಗೆ ಈ ವೃದ್ಧೆ ಮಾಡಿರುವ ಗರ್ಬಾ ಡಾನ್ಸ್​ ಭರವಸೆಯನ್ನು ಮೂಡಿಸುತ್ತದೆ.

Viral video: ಭರವಸೆಯೇ ಬೆಳಕು; ಸೋಂಕಿನ ನಡುವೆಯೂ 95ರ ವೃದ್ಧೆಯ ಗರ್ಬಾ ಡಾನ್ಸ್
95 ವಯಸ್ಸಿನ ವೃದ್ಧೆಯ ಗರ್ಬಾ ಡಾನ್ಸ್
Follow us
shruti hegde
|

Updated on: May 13, 2021 | 1:28 PM

ಕೊರೊನಾ ವೈರಸ್​ ಎರಡನೇ ಅಲೆಯು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಕಿನಿಂದ ಹಾನಿಗೊಳಗಾದವರು ಅದೆಷ್ಟೋ ಮಂದಿ. ದಿನೇ ದಿನೇ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಜನರು ಹೆಚ್ಚು ಭೀತಿಗೊಳಗಾಗುತ್ತಿದ್ದಾರೆ. ಸೋಂಕಿನ ವಿರುದ್ಧ ಹೋರಾಡಲು ಅದೆಷ್ಟೊ ಪ್ರಯತ್ನಗಳು, ಹೋರಾಟಗಳು ನಡೆಯುತ್ತಿವೆ. ದಿನೇ ದಿನೇ ಭೀತಿ ಹೆಚ್ಚಾಗುತ್ತಿರುವ ಕಾರಣ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಈ ನಡುವೆ ಜನರು ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮೊರೆ ಹೋಗಿದ್ದಾರೆ. ಮನಸ್ಸನ್ನು ಹೆಚ್ಚು ಒತ್ತಡಕ್ಕೆ ಸಿಲುಕಿಸದೇ ಸಂತೋಷದಿಂದ ದಿನ ಕಳೆಯಲು ಬಯಸುತ್ತಿದ್ದಾರೆ. ಹೀಗಿರುವಾಗ ಸೋಂಕಿನಿಂದ ಬಳಲುತ್ತಿರುವ 95 ವರ್ಷದ ವೃದ್ಧೆ ಆಸ್ಪತ್ರೆಯ ಹಾಸಿಗೆಯ ಮೆಲೆ ಆಕ್ಷಿಜನ್​​ ಹಾಕಿಕೊಂಡು ಗರ್ಬಾ ಡಾನ್ಸ್​ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋಂಕಿನಿಂದ ಬಳಲುತ್ತಿರುವ ಹಾಗೂ ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಜನರಿಗೆ ಈ ವೃದ್ಧೆ ಮಾಡಿರುವ ಗರ್ಬಾ ಡಾನ್ಸ್​ ಭರವಸೆಯನ್ನು ಮೂಡಿಸುತ್ತದೆ.

ಗುಜರಾತ್​​ ಛಾಯಾಚಿತ್ರಗ್ರಾಹಕ ವೈರಲ್​ಭಯಾನಿ ಎಂಬುವವರು ಗುಜರಾತಿನ ರಾಜ್​ಕೋಟ್​ನ ಆಸ್ಪತ್ರೆಯಲ್ಲಿ ದಾಖಲಾದ 95 ವರ್ಷದ ವೃದ್ಧೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವೃದ್ಧೆ ತನ್ನ ವಯಸ್ಸಿನ ಹೊರತಾಗಿಯೂ, ಅನಾರೋಗ್ಯದ ಹೊರತಾಗಿಯೂ ಆಮ್ಲಜನಕದ ಮುಖವಾಡ ಧರಿಸಿ ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತು ಗರ್ಬಾ ಡಾನ್ಸ್​ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆನಾರೋಗ್ಯವಿದ್ದರೂ, ಮಾನಸಿಕ ಒತ್ತಡ ಮಾಡಿಕೊಳ್ಳದೇ ಭರವಸೆಯಿಂದ, ಧೈರ್ಯದಿಂದ ಸೋಂಕಿನ ವಿರುದ್ಧ ಹೋರಾಡುತ್ತಿರುವುದು ವೃದ್ಧೆಯ ಮುಖದಲ್ಲಿ ಕಂಡು ಬರುತ್ತದೆ. ಬಹಳ ಉತ್ಸುಕರಾಗಿ ವೃದ್ಧೆ ಡಾನ್ಸ್​ ಮಾಡುತ್ತಾರೆ. ‘ಸೋಂಕಿನ ವಿರುದ್ಧ ಅವರ ಹೋರಾಟದ ಮನೋಭಾವ ಮತ್ತು ಧೈರ್ಯ ರಾಜ್​ಕೋಟ್​ನ 95 ವರ್ಷದ ವೃದ್ಧೆ ಮಾಡಿರುವ ಗರ್ಭಾ ಡಾನ್ಸ್​ನಲ್ಲಿ ಕಾಣುತ್ತದೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಅಗುತ್ತಿದ್ದಂತೆಯೇ ನೆಟ್ಟಿಗರು, ವೃದ್ಧೆಯ ಹೋರಾಟದ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಬಹುಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ‘ ದೇವರು ಅವರನ್ನು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಹೊರಬರುವಂತೆ ಆಶೀರ್ವದಿಸುತ್ತಾನೆ. ಅವರು ಇನ್ನಷ್ಟು ಆರೋಗ್ಯವಾಗಿರುತ್ತಾರೆ’, ಅವರ ಈ ಭರವಸೆಯ ಮನೋಭಾವವನ್ನು ಗೌರವಿಸುತ್ತೇನೆ’ ಎಂದು ಇನ್ನೋರ್ವ ಬಳಕೆದಾರರು ಬರೆದಿದ್ದಾರೆ. ಮಾನಸಿಕ ಒತ್ತಡಕ್ಕೆ ಸಿಲುಕದೇ ನಗುತ್ತಾ, ಧೈರ್ಯದಿಂದ ಎದುರಿಸಿದರೆ ವೈರಸ್​ಅನ್ನು ಸೋಲಿಸಬಹುದು ಎಂಬ ಭರವಸೆಯ ಜೊತೆಗೆ ಸ್ಪೂರ್ತಿ ತುಂಬುವ ವಿಡಿಯೋ ಇದಾಗಿದೆ.

ಇದನ್ನೂ ಓದಿ: ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ