‘ಶ್ರೀಕಾಂತ್​ ತಿವಾರಿಯಂತೆ ದೈಹಿಕ ಅಂತರ ಕಾಯ್ದುಕೊಳ್ಳಿ’- ಕೊವಿಡ್​ ನಿಯಂತ್ರಣಕ್ಕೆ ‘ದಿ ಫ್ಯಾಮಿಲಿ ಮ್ಯಾನ್​ 2’ ಪೋಸ್ಟ್​ ಹಂಚಿಕೊಂಡ ಕೇಂದ್ರ ಸರ್ಕಾರ

ಇತ್ತೀಚೆಗೆ ಹಂಚಿಕೊಂಡ ಪೋಸ್ಟ್​ವೊಂದರಲ್ಲಿ, ಎರಡೂ ಡೋಸ್​ ಲಸಿಕೆ ಪಡೆದ ಬಳಿಕವೂ ಕೊವಿಡ್​ ಕುರಿತಾಗಿ ನಿರ್ಲಕ್ಷ್ಯ ಬೇಡ.​​ ನಿಯಂತ್ರಣಕ್ಕೆ ಜಾರಿಗೆ ತಂದ ಕೆಲವು ನಿರ್ಬಂಧಗಳನ್ನು ಪಾಲಿಸಲೇ ಬೇಕು ಎಂಬ ಎಚ್ಚರಿಕೆಯ ಮಾತಿನ ಸಾರ ದೃಶ್ಯದಲ್ಲಿ ಕಾಣಿಸುತ್ತಿದೆ.

‘ಶ್ರೀಕಾಂತ್​ ತಿವಾರಿಯಂತೆ ದೈಹಿಕ ಅಂತರ ಕಾಯ್ದುಕೊಳ್ಳಿ’- ಕೊವಿಡ್​ ನಿಯಂತ್ರಣಕ್ಕೆ 'ದಿ ಫ್ಯಾಮಿಲಿ ಮ್ಯಾನ್​ 2' ಪೋಸ್ಟ್​ ಹಂಚಿಕೊಂಡ ಕೇಂದ್ರ ಸರ್ಕಾರ
Follow us
| Updated By: shruti hegde

Updated on:Jun 16, 2021 | 12:30 PM

ಕೊವಿಡ್​ ನಿಯಂತ್ರಣದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಅದೆಷ್ಟೋ ಪ್ರಯತ್ನಗಳು ನಡೆಯುತ್ತಿವೆ. ದೇಶಾದ್ಯಂತ ಪೊಲೀಸ್​ ಇಲಾಖೆ ಸೇರಿ ಸರ್ಕಾರಿ ಇಲಾಖೆಗಳೆಲ್ಲವೂ ಕೂಡಾ ವಿವಿಧ ಆಲೋಚನೆಗಳೊಂದಿಗೆ ಜನರಿಗೆ ಕೊವಿಡ್​ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಕೊವಿಡ್​-19 ನಿಯಂತ್ರಣಕ್ಕಾಗಿ, ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ‘ಫ್ಯಾಮಿನ್​ ಮ್ಯಾನ್​ 2’ ದೃಶ್ಯವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಅಭಿನಯಿಸಿದ ಮನೋಜ್​ ಬಾಜ್​ಪಾಯಿ ಅವರ ಶ್ರೀಕಾಂತ್​ ತಿವಾರಿ ಎಂಬ ಪಾತ್ರದ ದೃಶ್ಯವನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದ್ದು, ಕೊವಿಡ್​-19 ಕುರಿತಾಗಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.

ಸಾಮಾಜಿಕ ಜಾಲತಾಣದ ಮೂಲಕ ಕೊವಿಡ್​ ನಿಯಂತ್ರಣಕ್ಕೆ ಕುರಿತಂತೆ ಜನರಿಗೆ ತಿಳಿಹೇಳುವ ಕುರಿತಾಗಿ ಕೇಂದ್ರ ಸರ್ಕಾರ ಟ್ವೀಟ್​ ಮಾಡಿದೆ. ಇತ್ತೀಚೆಗೆ ಹಂಚಿಕೊಂಡ ಪೋಸ್ಟ್​ವೊಂದರಲ್ಲಿ, ಎರಡೂ ಡೋಸ್​ ಲಸಿಕೆ ಪಡೆದ ಬಳಿಕವೂ ಕೊವಿಡ್​ ಕುರಿತಾಗಿ ನಿರ್ಲಕ್ಷ್ಯ ಬೇಡ.​​ ನಿಯಂತ್ರಣಕ್ಕೆ ಜಾರಿಗೆ ತಂದ ಕೆಲವು ನಿರ್ಬಂಧಗಳನ್ನು ಪಾಲಿಸಲೇ ಬೇಕು ಎಂಬ ಎಚ್ಚರಿಕೆಯ ಮಾತಿನ ಸಾರ ದೃಶ್ಯದಲ್ಲಿ ಕಾಣಿಸುತ್ತಿದೆ.

‘ಎರಡೂ ಡೋಸ್​ ಲಸಿಕೆ ಪಡೆದ ಬಳಿಕವೂ ಶ್ರೀಕಾಂತ್​ ತಿವಾರಿ ಮುಖಗವಸನ್ನು ಧರಿಸಿದ್ದಾರೆ ಮತ್ತು ದೈಹಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಲಸಿಕ ಪಡೆದ ಬಳಿಕವೂ ಪ್ರತಿಕ್ರಿಯೆ ಹೀಗಿರಲಿ ಎಂದು ದೃಶ್ಯ ಹೇಳುತ್ತಿದೆ.

ಮೈಕ್ರೋಬ್ಲಾಗಿಂಗ್​ ವೆಬ್​ಸೈಟ್​ನಲ್ಲಿ ಸಚಿವಾಲಯ ಹಂಚಿಕೊಂಡ ಪೋಸ್ಟ್​ ನೋಡಿದ ನೆಟ್ಟಿಗರು ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊವಿಡ್​-19 ಸೋಂಕಿನ ಕುರಿತಾಗಿ ಜಾಗರೂಕರಾಗಿರಲು ಜನರನ್ನು ಪ್ರೋತ್ಸಾಹಿಸಿದ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?

‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ

Published On - 12:26 pm, Wed, 16 June 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ