‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ

ಅಪರಿಚಿತ ವ್ಯಕ್ತಿಯೊಬ್ಬ ಮಾಸ್ಕ್​ ಧರಿಸಿ, ಚೈನೀಸ್​ ಭಾಷೆಯಲ್ಲಿ ಮೆಸೇಜ್​ ಕಳಿಸಲು ಶುರುಮಾಡುತ್ತಾನೆ. ಆತ ಒಂದು ಹೊಸ ಅವಘಡ ಮಾಡಲು ಭಾರತಕ್ಕೆ ಬಂದಿದ್ದಾನೆ.

‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ
ಮನೋಜ್​ ಬಾಜ್​ಪೇಯ್​, ಸಮಂತಾ ಅಕ್ಕಿನೇನಿ
Follow us
ಮದನ್​ ಕುಮಾರ್​
|

Updated on: Jun 11, 2021 | 12:46 PM

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಇನ್ನೂ ಅನೇಕರು ಈ ಸೀರಿಸ್​ ನೋಡಿಲ್ಲ. ಅಷ್ಟರಲ್ಲಾಗಲೇ 3ನೇ ಸೀಸನ್​ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು 2ನೇ ಸೀಸನ್​ನ ಕ್ಲೈಮ್ಯಾಕ್ಸ್​​. ಎರಡನೇ ಸೀಸನ್​ ಮುಗಿಯುವಾಗ ಸಂಬಂಧವೇ ಇಲ್ಲದ ಒಂದು ದೃಶ್ಯವನ್ನು ತೋರಿಸಲಾಗಿದೆ. ಅದರ ಅರ್ಥ ಏನು? ಯಾಕೆ ಆ ದೃಶ್ಯವನ್ನು ಸೇರಿಸಲಾಗಿದೆ ಎಂಬುದನ್ನು ನಿರ್ದೇಶಕರಾದ ರಾಜ್​ ಮತ್ತು ಡಿಕೆ ವಿವರಿಸಿದ್ದಾರೆ.

ಆ ದೃಶ್ಯದಲ್ಲಿ ಏನಿದೆ?

ಅಪರಿಚಿತ ವ್ಯಕ್ತಿಯೊಬ್ಬ ಮಾಸ್ಕ್​ ಧರಿಸಿ, ಕೊಲ್ಕತ್ತಾದ ನಿಗೂಢ ಸ್ಥಳಕ್ಕೆ ಬರುತ್ತಾನೆ. ತನ್ನ ಲ್ಯಾಪ್​ಟಾಪ್ ತೆರೆದು ಚೈನೀಸ್​ ಭಾಷೆಯಲ್ಲಿ ಮೆಸೇಜ್​ ಕಳಿಸಲು ಶುರುಮಾಡುತ್ತಾನೆ. ಆತ ಒಂದು ಹೊಸ ಅವಘಡ ಮಾಡಲು ಭಾರತಕ್ಕೆ ಬಂದಿದ್ದಾನೆ ಎಂಬುದರ ಸುಳಿವು ಕೊಡಲಾಗಿದೆ. ಅಷ್ಟಕ್ಕೂ ಈ ದೃಶ್ಯ ಯಾಕೆ ಇದೆ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಮೂಡಿದೆ.

3ನೇ ಸೀಸನ್​ನಲ್ಲಿ ಕೊವಿಡ್​ ಕಥೆ

‘ಎಲ್ಲ ಮುಗಿದ ನಂತರದಲ್ಲಿ ನಾವು ಈ ದೃಶ್ಯವನ್ನು ಚಿತ್ರೀಕರಿಸಿದೆವು. ಕೊವಿಡ್​ನಿಂದಾಗಿ ಮುಂದೆ ನಾವು ಯಾವ ಪರಿಸ್ಥಿತಿಗೆ ಹೋಗಬಹುದು ಎಂಬುದನ್ನು ಆ ದೃಶ್ಯ ಪ್ರತಿನಿಧಿಸುತ್ತದೆ. ಜನರಲ್ಲಿ ಕುತೂಹಲ ಮೂಡಿಸಬೇಕು ಎಂಬ ಉದ್ದೇಶದಿಂದಲೇ ಆ ದೃಶ್ಯ ಸೇರಿಸಿದ್ದೇವೆ. ಕೊವಿಡ್​ಗೆ ಸಂಬಂಧಿಸಿದ ಕತೆಯನ್ನು ನಾವು ಖಂಡಿತವಾಗಿ ಮೂರನೇ ಎಪಿಸೋಡ್​ನಲ್ಲಿ ತೋರಿಸುತ್ತೇವೆ. ಆದರೆ ಅದರ ಪ್ರಮಾಣ ಎಷ್ಟು ಇರಲಿದೆ ಎಂಬುದನ್ನು ಕಥೆ ಬರೆಯಲು ಕುಳಿತಾಗ ನಿರ್ಧರಿಸಲಿದ್ದೇವೆ’ ಎಂದು ರಾಜ್​ ವಿವರಿಸಿದ್ದಾರೆ.

ಬದಲಾಗಿದೆ ಶ್ರೀಕಾಂತ್​-ಸುಚಿ ಸಂಸಾರ

ಈ ವೆಬ್​ ಸರಣಿಯಲ್ಲಿ ಶ್ರೀಕಾಂತ್​ ತಿವಾರಿ (ಮನೋಜ್​ ಬಾಯಪೇಯಿ) ಮತ್ತು ಸುಚಿ (ಪ್ರಿಯಾಮಣಿ) ಸಂಸಾರದ ಕಥೆ ಕೂಡ ಇಂಟರೆಸ್ಟಿಂಗ್​ ಆಗಿದೆ. ಆದರೆ ಎರಡನೇ ಸೀಸನ್​ನ ಕೊನೆಯಲ್ಲಿ ತನ್ನ ಒಂದು ಸೀಕ್ರೆಟ್​ ಅನ್ನು ಗಂಡನ ಎದುರು ಸುಚಿ ರಿವೀಲ್​ ಮಾಡಿದ್ದಾಳೆ. ಹಾಗಾಗಿ ಅವರ ಫ್ಯಾಮಿಲಿ ಕಥೆ ಕೂಡ 3ನೇ ಸೀಸನ್​ನಲ್ಲಿ ಬೇರೆ ಸ್ವರೂಪ ಪಡೆದುಕೊಳ್ಳಲಿದೆ.

ಈ ವೆಬ್​ ಸರಣಿಗೆ ನಟಿ ಸಮಂತಾ ಅಕ್ಕಿನೇನಿ ಹೊಸದಾಗಿ ಸೇರ್ಪಡೆ ಆಗಿದ್ದರು. ರಾಜಿ ಎಂಬ ರಗಡ್​ ಯುವತಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡ ಅವರಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ನಟಿಯರು ಸುಮಂತಾ ಅವರ ಆ್ಯಕ್ಷನ್​ ನೋಡಿ ಫಿದಾ ಆಗಿದ್ದಾರೆ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್