‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

Madan Kumar

Madan Kumar |

Updated on: Jun 10, 2021 | 11:57 AM

ಅರವಿಂದ್​ ಮತ್ತು ಸುಚಿತ್ರಾ ಪಾತ್ರಗಳ ನಡುವಿನ ಸಂಬಂಧ ಯಾವ ರೀತಿಯದ್ದು ಎಂಬುದನ್ನು ನಿಗೂಢವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು. ಅವರಿಬ್ಬರ ಮಧ್ಯೆ ಏನು ನಡೆದಿದೆ ಎಂಬ ಪ್ರಶ್ನೆಗೆ ಈ ಸೀಸನ್​ನಲ್ಲೂ ಉತ್ತರ ಸಿಕ್ಕಿಲ್ಲ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?
ಪ್ರಿಯಾಮಣಿ, ಮನೋಜ್​ ಬಾಜಪೇಯಿ

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮನೋಜ್​ ಬಾಜಪೇಯಿ, ಪ್ರಿಯಾಮಣಿ, ಸಮಂತಾ ಅಕ್ಕಿನೇನಿ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ವೆಬ್​ ಸಿರೀಸ್​ಗೆ ರಾಜ್​ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಆ್ಯಕ್ಷನ್​, ಸಸ್ಪೆನ್ಸ್​-ಥ್ರಿಲ್ಲರ್​ ಶೈಲಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್​ 2’ ಮೂಡಿಬಂದಿದ್ದು, ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ಸೀಸನ್​ ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರು ಎರಡನೇ ಸೀಸನ್​ಗೂ ಫಿದಾ ಆಗಿದ್ದಾರೆ. ಆದರೆ ಈ ಎರಡೂ ಸೀಸನ್​ನಲ್ಲಿ ಒಂದು ಪ್ರಶ್ನೆಗೆ ಮಾತ್ರ ಪ್ರೇಕ್ಷಕರಿಗೆ ಉತ್ತರ ಸಿಕ್ಕಿಲ್ಲ.

ಶ್ರೀಕಾಂತ್​ ತಿವಾರಿ ಎಂಬ ಪಾತ್ರಕ್ಕೆ ಮನೋಜ್​ ಬಾಜಪೇಯಿ ಬಣ್ಣ ಹಚ್ಚಿದ್ದರೆ, ಅವರ ಪತ್ನಿಯಾಗಿ ಸುಚಿತ್ರಾ ಎಂಬ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆಗೆ ತಕ್ಕಂತೆಯೇ ಒಂದು ಫ್ಯಾಮಿಲಿಯ ಕಥೆ ಕೂಡ ಈ ವೆಬ್​ ಸಿರೀಸ್​​ನಲ್ಲಿ ಹೈಲೈಟ್​ ಆಗಿದೆ. ಮೊದಲ ಸೀಸನ್​ನಲ್ಲಿಯೇ ಶ್ರೀಕಾಂತ್​ ಮತ್ತು ಸುಚಿತ್ರಾ ಸಂಸಾರದಲ್ಲಿ ಜಟಾಪಟಿ ಶುರು ಆಗಿತ್ತು. ಸದಾ ಕಾಲ ಕೆಲಸದಲ್ಲಿ ಮುಳುಗಿರುವ ಶ್ರೀಕಾಂತ್​ ವರ್ತನೆಯಿಂದ ಸುಚಿತ್ರಾಗೆ ಬೇಸರ ಆಗಿತ್ತು. ಹಾಗಾಗಿ ಆಕೆ ತಮ್ಮ ಸಹೋದ್ಯೋಗಿ ಅರವಿಂದ್​ ಜೊತೆ ಆಪ್ತತೆ ಬೆಳೆಸಿಕೊಂಡಿದ್ದಳು.

ತಾಜಾ ಸುದ್ದಿ

ಅರವಿಂದ್​ ಮತ್ತು ಸುಚಿತ್ರಾ ನಡುವಿನ ಸಂಬಂಧ ಯಾವ ರೀತಿಯದ್ದು ಎಂಬುದನ್ನು ನಿಗೂಢವಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು. ಅವರಿಬ್ಬರ ಮಧ್ಯೆ ಏನು ನಡೆದಿದೆ ಎಂಬ ಪ್ರಶ್ನೆಗೆ ಈ ಸೀಸನ್​ನಲ್ಲೂ ಉತ್ತರ ಸಿಕ್ಕಿಲ್ಲ. ಕೊನೆಯ ಎಪಿಸೋಡ್​ನಲ್ಲಿ ಶ್ರೀಕಾಂತ್​ ಮತ್ತು ಸುಚಿತ್ರಾ ನಡುವೆ ಒಂದು ಸಂಭಾಷಣೆ ಬರುತ್ತದೆ. ‘ನಿಮಗೆ ನಾನು ಒಂದು ವಿಷಯ ಹೇಳಬೇಕು ಎಂದುಕೊಂಡಿದ್ದೇನೆ..’ ಎಂದು ಸುಚಿತ್ರಾ ಮಾತು ಆರಂಭಿಸುತ್ತಾಳೆ. ಆದರೆ ನಿಜಕ್ಕೂ ಆಕೆ ಏನು ಹೇಳಿದಳು ಎಂಬುದನ್ನು ನಿರ್ದೇಶಕರು ತೋರಿಸಿಲ್ಲ.

ಅದೇ ದೃಶ್ಯದ ಬಗ್ಗೆ ಮನೋಜ್​ ಬಾಜಪೇಯಿ ಅವರಿಗೂ ಇತ್ತೀಚೆಗೆ ಪ್ರಶ್ನೆ ಎದುರಾಯಿತು. ‘ನನ್ನ ಕೈಗೆ ಸ್ಕ್ರಿಪ್ಟ್​ ಸಿಕ್ಕರೆ ಮಾತ್ರ ನಾನು ಹೇಳಬಲ್ಲೆ’ ಎಂದು ನಕ್ಕು ಸುಮ್ಮನಾಗುವ ಮೂಲಕ ಕಡೆಗೂ ಆ ರಹಸ್ಯ ಏನು ಎಂಬುದನ್ನು ಅವರು ಬಯಲು ಮಾಡಿಲ್ಲ.

ಇದನ್ನೂ ಓದಿ:

Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?

ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada