ನಟಿಯ ದೇಹದ ಖಾಸಗಿ ಅಂಗಗಳ ಬಗ್ಗೆ ಹೀಗೆಲ್ಲ ಮಾತಾಡ್ತಾರಾ ನಿರ್ದೇಶಕರು? ರಿಚಾ ಹೇಳಿದ ಕಹಿ ಸತ್ಯಗಳು
ಚಿತ್ರರಂಗದಲ್ಲಿ ಪ್ರತಿಯೊಬ್ಬ ನಟಿ ಕೂಡ ಬಾಡಿ ಶೇಮಿಂಗ್ ಅನುಭವಿಸುತ್ತಾಳೆ. ದೈಹಿಕ ಸೌಂದರ್ಯಕ್ಕಾಗಿ ನಟಿಯರಿಗೆ ನಿರ್ಮಾಪಕರು ಮತ್ತು ನಿರ್ದೇಶಕರು ಅಸಹಜವಾದ ಒತ್ತಡಗಳನ್ನು ಹೇರುತ್ತಾರೆ ಎಂಬುದನ್ನು ನಟಿ ರಿಚಾ ಚಡ್ಡಾ ಒಮ್ಮೆ ಬಾಯಿ ಬಿಟ್ಟಿದ್ದರು.
ಹೊರಗಿನಿಂದ ನೋಡಲು ಬಣ್ಣದ ಲೋಕ ಚೆನ್ನಾಗಿ ಕಾಣಿಸುತ್ತದೆ. ತಳುಕು ಬಳುಕಿನ, ಬೆಡಗಿ ಬಿನ್ನಾಣದ ಈ ಜಗತ್ತಿನಲ್ಲಿ ನಟಿಯರು ಮಿಂಚುತ್ತಾರೆ. ಆದರೆ ಅವರ ಹಾದಿ ಅಷ್ಟು ಸುಲಭ ಆಗಿರುವುದಿಲ್ಲ. ಕೆಟ್ಟ ಮನಸ್ಥಿತಿಯ ಕೆಲವು ಜನರನ್ನು ಎದುರಿಸಿ ಅವರು ಮುನ್ನುಗ್ಗಬೇಕಾಗುತ್ತಿದೆ. ಅಂಥ ಒಂದು ಅನುಭವವನ್ನು ನಟಿ ರಿಚಾ ಚಡ್ಡಾ ಅವರು ಈ ಹಿಂದೆ ಹೇಳಿಕೊಂಡಿದ್ದರು. ಅವರ ಜೊತೆ ಮಾತನಾಡಿದ ನಿರ್ದೇಶಕನೊಬ್ಬ ಬಾಡಿ ಶೇಮಿಂಗ್ ಮಾಡಿದ್ದಲ್ಲದೇ ಅವರ ದೇಹದ ಖಾಸಗಿ ಅಂಗಗಳ ಬಗ್ಗೆ ಮನಬಂದಂತೆ ಟೀಕೆ ಮಾಡಿದ್ದ.
2008ರಿಂದಲೂ ಬಾಲಿವುಡ್ನಲ್ಲಿ ಸಕ್ರಿಯವಾಗಿರುವ ನಟಿ ರಿಚಾ ಚಡ್ಡಾ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ‘ಶಕೀಲಾ’ ಸಿನಿಮಾ ಮೂಲಕ ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಯವಾದರು. ಭಿನ್ನವಾದ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರ ಕೈಯಲ್ಲಿ ಈಗಲೂ ಹಲವು ಪ್ರಾಜೆಕ್ಟ್ಗಳಿವೆ. ಚಿತ್ರರಂಗದಲ್ಲಿ ಈ ಹಂತಕ್ಕೆ ಬರುವುದಕ್ಕೂ ಮುನ್ನ ಅವರು ಅನೇಕ ಸವಾಲುಗಳನ್ನು ಎದುರಿಸಿದ್ದರು.
ಚಿತ್ರರಂಗದಲ್ಲಿ ಪ್ರತಿಯೊಬ್ಬ ನಟಿ ಕೂಡ ಬಾಡಿ ಶೇಮಿಂಗ್ ಅನುಭವಿಸುತ್ತಾಳೆ. ದೈಹಿಕ ಸೌಂದರ್ಯಕ್ಕಾಗಿ ನಟಿಯರಿಗೆ ನಿರ್ಮಾಪಕರು ಮತ್ತು ನಿರ್ದೇಶಕರು ಅಸಹಜವಾದ ಒತ್ತಡಗಳನ್ನು ಹೇರುತ್ತಾರೆ ಎಂಬುದನ್ನು ರಿಚಾ ಒಮ್ಮೆ ಬಾಯಿ ಬಿಟ್ಟಿದ್ದರು. ಅಲ್ಲದೆ, ತಮಗಾದ ಸ್ವಂತ ಅನುಭವನ್ನೂ ಹೇಳಿಕೊಂಡಿದ್ದರು. ಅವರನ್ನು ಭೇಟಿ ಮಾಡಿದ ಹಲವು ನಿರ್ದೇಶಕರು ದೇಹದ ಖಾಸಗಿ ಅಂಗಗಳಿಗೆ ಸರ್ಜರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರಂತೆ!
‘ಮೊದಲು ತೂಕ ಹೆಚ್ಚಿಸಿಕೊಳ್ಳಬೇಕು ಎಂದರು. ನಂತರ ತೆಳ್ಳಗಾಗಬೇಕು ಎಂದರು. ತುಟಿ ಮತ್ತು ಮೂಗನ್ನು ಸರಿಮಾಡಿಸಿಕೊಳ್ಳಬೇಕು. ಸ್ತನಗಳನ್ನು ದೊಡ್ಡದು ಮಾಡಿಕೊಳ್ಳಬೇಕು. ದೇಹದ ಫ್ಯಾಟ್ ಕರಗಿಸಬೇಕು. ಹಿಂಬದಿ ಭಾಗ ಕೂಡ ದೊಡ್ಡದಾಗಿರಬೇಕು. ದೇಹಕ್ಕೆ ಶೇಪ್ ನೀಡುವಂತಹ ಒಳಉಡುಪು ಧರಿಸು. ಮಾತನಾಡುವಾಗ ತುಟಿಗಳನ್ನು ಮುಂದಕ್ಕೆ ಚಾಚು ಎಂದೆಲ್ಲ ನನಗೆ ನಿರ್ದೇಶಕರು ಮತ್ತು ನಿರ್ಮಾಪಕರು ಒತ್ತಡ ಹೇರಿದ್ದರು’ ಎಂಬುದನ್ನು ರಿಚಾ ಹೇಳಿಕೊಂಡಿದ್ದರು.
ಮಸಾಣ್, ಸರಬ್ಜಿತ್, ಫುಕ್ರೆ ಮುಂತಾದ ಸಿನಿಮಾಗಳ ಮೂಲಕ ರಿಚಾ ಚಡ್ಡಾ ಗುರುತಿಸಿಕೊಂಡಿದ್ದಾರೆ. ಕೆಲವು ಸೀರಿಯಲ್ಗಳಲ್ಲಿ ಅತಿಥಿ ಪಾತ್ರವನ್ನೂ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಿಚಾಗೆ ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ:
ನಟಿಯ ಟಾಪ್ಲೆಸ್ ಫೋಟೋಗೆ ಕೊಳಕು ಕಮೆಂಟ್ ಮಾಡಿ, ಆಮೇಲೆ ಅಕ್ಕ ಎಂದ ಈ ಭೂಪ ಯಾರು?
ಸುಶಾಂತ್ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ