Actor Jaggesh: ಒಂದು ತಿಂಗಳಾಗುತ್ತಾ ಬಂದರೂ ಟ್ವಿಟರ್​ಗೆ ಮರಳಲೇ ಇಲ್ಲ ನಟ ಜಗ್ಗೇಶ್

ಜಗ್ಗೇಶ್​ ಟ್ವಿಟರ್​ನಿಂದ ದೂರ ಉಳಿದು ಈಗ ಒಂದು ತಿಂಗಳಾಗುತ್ತಾ ಬಂದಿದೆ. ಆದಾಗ್ಯೂ ಅವರು​ ಟ್ವಿಟರ್​ಗೆ ಮರಳಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Actor Jaggesh: ಒಂದು ತಿಂಗಳಾಗುತ್ತಾ ಬಂದರೂ ಟ್ವಿಟರ್​ಗೆ ಮರಳಲೇ ಇಲ್ಲ ನಟ ಜಗ್ಗೇಶ್
ಜಗ್ಗೇಶ್​

ನಟ ಜಗ್ಗೇಶ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್​ ಆಗಿರುತ್ತಾರೆ. ಅಭಿಮಾನಿಗಳು ಮಾಡುವ ಧನಾತ್ಮಕ ಹಾಗೂ ಋಣಾತ್ಮಕ ಟ್ವೀಟ್​ಗಳಿಗೆ ಜಗ್ಗೇಶ್​ ಸಾಕಷ್ಟು ಬಾರಿ ಉತ್ತರಿಸಿದ್ದಿದೆ. ಆದರ, ಈಗ ಅವರು ಟ್ವಿಟರ್​ ತೊರೆದು ಒಂದು ತಿಂಗಳಾಗುತ್ತಾ ಬಂದಿದೆ. ಅವರು ಟ್ವಿಟರ್​ಗೆ ಮರಳೋದು ಯಾವಾಗ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಕೊರೊನಾ ಕಾಲದಲ್ಲಿ ನಟ ಜಗ್ಗೇಶ್​ ಎಲ್ಲರ ಸಹಾಯಕ್ಕೆ ನಿಂತಿದ್ದರು. ಅಗತ್ಯ ಇರುವ ಕೊರೊನಾ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್​ ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಆದರೆ, ಬಳಿಕ ಕೊರೊನಾ ಅವರ ಆಪ್ತರನ್ನೇ ಬಲಿ ತೆಗೆದುಕೊಂಡಿತ್ತು. ಈ ಕಾರಣದಿಂದ ಮೇ 14ರಂದು ಕೆಲ ಸಮಯದವರೆಗೆ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರವನ್ನು ಜಗ್ಗೇಶ್​ ತೆಗೆದುಕೊಂಡಿದ್ದರು.

‘ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ. ನನ್ನ ಆಪ್ತ ಮಾದೇಗೌಡನ ಮಗನ ಸಾವಿನಿಂದ ನನ್ನ ಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರೂ ಸಮಾಧಾನ ಆಗುತ್ತಿಲ್ಲ. ಬಂಗಾರದಂತಹ ನನ್ನ ಆತ್ಮೀಯ ಹೃದಯಗಳೇ ನಿಮ್ಮ ನೀವು ಕಾಪಾಡಿಕೊಳ್ಳಿ. ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ ಯಾರು ನಮಗಾಗಿ ಬರರು. ಸ್ವಾರ್ಥ, ಮೋಸ, ಧನದಾಹಿ ಜಗತ್ತು. ಒಳ್ಳೆಯವರಿಗಲ್ಲ ಇಂದಿನ ಜಗತ್ತು, ಕ್ಷಮೆಯಿರಲಿ’ಎಂದು ಜಗ್ಗೇಶ್​ ಬೇಸರ ಹೊರ ಹಾಕಿದ್ದರು.

ಜಗ್ಗೇಶ್​ ಟ್ವಿಟರ್​ನಿಂದ ದೂರ ಉಳಿದು ಈಗ ಒಂದು ತಿಂಗಳಾಗುತ್ತಾ ಬಂದಿದೆ. ಆದಾಗ್ಯೂ ಅವರು​ ಟ್ವಿಟರ್​ಗೆ ಮರಳಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೀಗಾಗಿ, ಅಣ್ಣಾ ಬೇಗ ಬನ್ನಿ ಎಂದು ಕೆಲವರು ಟ್ವೀಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಶಾಂತ್ ನೀಲ್ ಸಂಭಾವನೆ ಎಷ್ಟು? ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಟಾರ್ ಡೈರೆಕ್ಟರ್

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ