AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತ ಸಿಂಧೂರಿ’ ಟೈಟಲ್ನಲ್ಲಿ ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಚರಿತ್ರೆ

Bharatha Sindhuri: ಸದ್ಯಕ್ಕೆ ರಾಜ್ಯದಲ್ಲಿ ಸಖತ್ ಸುದ್ದಿಯಲ್ಲಿರೋದು ಅಂದ್ರೆ ಅದು ರೋಹಿಣಿ ಸಿಂಧೂರಿ. ಇವರನ್ನ ನೋಡಿ ಒಬ್ಬ ಅಧಿಕಾರಿ ಅಂದ್ರೆ ಹೀಗ್ ಇರ್ಬೇಕು ಅಂತ ಅನ್ಸುತ್ತೆ. ಸಿಂಧೂರಿ ಅವರ ಖಡಕ್ ಮಾತು, ಅಭಿವೃದ್ಧಿ ಕಲಸ ಸಾಕಷ್ಟು ಜನರಿಗೆ ಪ್ರೆೇರಣೆ. ಇಂತಹ ದಿಟ್ಟ ಐಎಎಸ್‌ ಅಧಿಕಾರಿಯ ಸ್ಟೋರಿ ತೆರೆ ಮೇಲೆ ಬರೋಕೆ ರೆಡಿಯಾಗಿದೆ.

'ಭಾರತ ಸಿಂಧೂರಿ’ ಟೈಟಲ್ನಲ್ಲಿ ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಚರಿತ್ರೆ
ರೋಹಿಣಿ ಸಿಂಧೂರಿ
TV9 Web
| Updated By: Digi Tech Desk|

Updated on:Jun 09, 2021 | 10:21 AM

Share

ಮಂಡ್ಯ: ರೋಹಿಣಿ ಸಿಂಧೂರಿ.. ಈ ಹೆಸರು ಯಾರು ಕೇಳಿಲ್ಲ ಹೇಳಿ. ಕರುನಾಡಿನ ಪ್ರತಿಯೊಬ್ಬರ ಕಿವಿಗೂ ಈ ಲೇಡಿ ಆಫೀಸರ್‌ ಹೆಸರು ಬಿದ್ದಿರುತ್ತೆ. ಕರುನಾಡನ್ನೇ ನಡುಗಿಸಿದ ಖಡಕ್ ಅಧಿಕಾರಿ ಇವರು. 2009 ರ ಬ್ಯಾಚ್ ನ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಸಖತ್ ಹೆಸರು ಮಾಡಿದ ದಿಟ್ಟ ಮಹಿಳೆ. ಯಾವುದೇ ಅಧಿಕಾರಿಗಳಿಗೆ, ಯಾವುದೇ ಜನಪ್ರತಿನಿಧಿಗಳಿಗೆ ಬಗ್ಗದ ಐಎಎಸ್‌ ಅಧಿಕಾರಿ. ಇವರು ಅಧಿಕಾರ ವಹಿಸಿಕೊಂಡ ಪ್ರತಿ ಜಿಲ್ಲೆಯಲ್ಲೂ ನೆನಪಿನಲ್ಲಿರುವಂತ ಕೆಲಸ ಮಾಡಿದ್ದಾರೆ. ಸರ್ಕಾರವನ್ನೇ ಅಲುಗಾಡಿಸಿದ ಈ ಖಡಕ್ ಅಧಿಕಾರಿ ಕಥೆ ಬೆಳ್ಳಿ ತೆರೆ ಮೇಲೆ ಬರಲಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅಭಿವೃದ್ಧಿ ಕೆಲಸದ ಜೊತೆಗೆ ವೃತ್ತಿ ಬದುಕಿನಲ್ಲಿ ಸಾಕಷ್ಟು ವಿವಾದಗಳನ್ನ ಎದುರಿಸುತ್ತಿದ್ದಾರೆ. ಇಂತಹ ಹೈ ಪ್ರೊಫೈಲ್ ಮಹಿಳಾ ಅಧಿಕಾರಿಯ ವೃತ್ತಿ ಬದುಕು ಕುರಿತು ಸಿನಿಮಾವೊಂದು ಸೆಟ್ಟೇರಲು ಸಿದ್ಧವಾಗಿದೆ. ಮಂಡ್ಯದ ಹಿರಿಯ ಪತ್ರಕರ್ತ ಕೃಷ್ಣ ಸ್ವರ್ಣಸಂದ್ರ ಎಂಬುವವರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ 2020 ರ ಜೂನ್ 15 ರಲ್ಲೇ ‘ಭಾರತ ಸಿಂಧೂರಿ’ ಟೈಟಲ್ ನ್ನ ರಿಜಿಸ್ಟ್ರೇಷನ್ ಮಾಡಿದ್ದಾರೆ. ಚಿತ್ರದಲ್ಲಿ ರೋಹಿಣಿ ಸಿಂಧೂರಿ ಅವರ ಪಾತ್ರವನ್ನ ಅಕ್ಷತಾ ಪಾಂಡವಪುರ ನಿರ್ವಹಿಸಲಿದ್ದಾರೆ.

ಐಎಎಸ್ ಅಧಿಕಾರಿಯಾಗಿ ರಾಜ್ಯಕ್ಕೆ ಬಂದ ರೋಹಿಣಿ ಸಿಂಧೂರಿ ತುಮಕೂರು, ಮಂಡ್ಯ, ಹಾಸನ, ಮೈಸೂರಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದರಲ್ಲೂ ರೋಹಿಣಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನವನ್ನ ಬಳಸಿಕೊಂಡು ಮಂಡ್ಯದಲ್ಲಿ ಹೆಚ್ಚು ಶೌಚಾಲಯಗಳನ್ನ ನಿರ್ಮಿಸಿ ಜಿಲ್ಲೆಯಲ್ಲಿ ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದರು. ಇದರಿಂದ ಇವರಿಗೆ ಸಾಕಷ್ಟು ಹೆಸರು ಬಂದಿತ್ತು. ಹೀಗಿರುವಾಗಲೇ ಇವರಿಗೆ ಒಂದೇ ವರ್ಷದಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿತ್ತು. ಇದಾದ ನಂತರ ಇವರು ಹಾಸನ ಮೈಸೂರು ಜಿಲ್ಲೆಗಳಲ್ಲೂ ಕೆಲಸ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದರು.

ಸಾಕಷ್ಟು ವಿವಾದಗಳು ನಡೆದ ಮೈಸೂರಿನಿಂದಲೂ ಸಿಂಧೂರಿ ವಾರ್ಗವಣೆ ಆಗಿದ್ದಾರೆ. ಯಾವುದೇ ರಾಜಕಾರಣಿಗಳ ಮಾತಿಗೂ ಕೇರ್ ಮಾಡದೆ ತಮ್ಮ ಕೆಲಸವನ್ನ ರೋಹಿಣಿ ಮಾಡುತ್ತಿದ್ದರು. ಇಂತಹ ದಿಟ್ಟ ಮಹಿಳಾ ಅಧಿಕಾರಿಯ ವೃತ್ತಿ ಬದುಕನ್ನೇ ಆಧಾರವಾಗಿಟ್ಟುಕೊಂಡು ‘ಭಾರತ ಸಿಂಧೂರಿ’ ಹೆಸರಿನಲ್ಲಿ ಸಿನಿಮಾ ಬರುತ್ತಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

ಸ್ವರ್ಣ ಕೃಷ್ಣರಿಂದ ‘ಭಾರತ ಸಿಂಧೂರಿ’ಗೆ ನಿರ್ದೇಶನ ಪಿಂಕಿ ಎಲ್ಲಿ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಕ್ಷತಾ ಭಾರತ ಸಿಂಧೂರಿ ಚಿತ್ರದಲ್ಲಿ ನಟಿಸಲಿದ್ದಾರೆ. ನಿರ್ದೇಶಕ ಸ್ವರ್ಣ ಕೃಷ್ಣ ಈ ಮೊದಲೇ ಸಿಂಧೂರಿ ಜೀವನಾಧರಿತ ಚಿತ್ರ ಮಾಡಲು ಪ್ಲಾನ್ ಮಾಡಿಕೊಂಡಿದ್ದರಂತೆ. ಸದ್ಯ ಟೈಟಲ್ ರಿಜಿಸ್ಟರ್ ಆಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಮಾತನಾಡಿದ ನಟಿ ಅಕ್ಷತಾ ಸಿನಿಮಾ ಪ್ಲಾನ್ ಆಗಿರೋದು ನಿಜ. ಆದ್ರೆ ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕು. ನಿರ್ದೇಶಕ ಸ್ವರ್ಣ ಕೃಷ್ಣ ಕಥೆ ರೆಡಿ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಈಗ ಸಖತ್ ಸುದ್ದಿಯಲ್ಲಿದ್ದಾರೆ. ಕೆಲವರು ಇವರ ಪರ ಮಾತನಾಡಿದ್ರೆ, ಇನ್ನೂ ಕೆಲವರು ಇವರನ್ನ ವಿರೋಧಿಸುತ್ತಿದ್ದಾರೆ. ಅದರಲ್ಲೂ ಭ್ರಷ್ಟರಿಗೆ, ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದ ರೋಹಿಣಿ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ

Published On - 9:36 am, Wed, 9 June 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ