Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?

Samantha Remuneration: ಸಂಪೂರ್ಣ ವೆಬ್​ ಸೀರಿಸ್​ನಲ್ಲಿ ಹೈಲೈಟ್​ ಆಗಿದ್ದು ಮನೋಜ್​​ ಬಾಜಪೇಯಿ. ಅವರು ಬಣ್ಣ ಹಚ್ಚಿದ ಶ್ರೀಕಾಂತ್​ ತಿವಾರಿ ಪಾತ್ರ ಆರಂಭದಿಂದ ಹಿಡಿದು ಕೊನೆಯವರೆಗೂ ವೆಬ್​ ಸೀರಿಸ್​ಅನ್ನು ಆವರಿಸಿಕೊಳ್ಳುತ್ತದೆ.

Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?
ಮನೋಜ್​ ಬಾಜ್​ಪೇಯ್​, ಸಮಂತಾ ಅಕ್ಕಿನೇನಿ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jun 09, 2021 | 3:21 PM

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಇತ್ತೀಚೆಗೆ ರಿಲೀಸ್​ ಆಗಿ ದೊಡ್ಡ ಮಟ್ಟದಲ್ಲಿ ಹೈಪ್​ ಸೃಷ್ಟಿಸಿಕೊಂಡಿದೆ. ಈ ವೆಬ್​ ಸೀರಿಸ್​ ನೋಡಿದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಸಮಂತಾ ಅಕ್ಕಿನೇನಿ, ಮನೋಜ್​ ಬಾಜಪೇಯಿ ಅವರ ನಟನೆ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈಗ ಈ ವೆಬ್​ ಸೀರಿಸ್​ಗಾಗಿ ಕಲಾವಿದರು ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಬಯಲಾಗಿದೆ. ಇದನ್ನು ಕೇಳಿದ ಅಭಿಮಾನಿಗಳು ಸಾಕಷ್ಟು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ವೆಬ್​ ಸೀರಿಸ್​ನಲ್ಲಿ ಹೈಲೈಟ್​ ಆಗಿದ್ದು ಮನೋಜ್​​ ಬಾಜಪೇಯಿ. ಅವರು ಬಣ್ಣ ಹಚ್ಚಿದ ಶ್ರೀಕಾಂತ್​ ತಿವಾರಿ ಪಾತ್ರ ಆರಂಭದಿಂದ ಹಿಡಿದು ಕೊನೆಯವರೆಗೂ ವೆಬ್​ ಸೀರಿಸ್​ಅನ್ನು ಆವರಿಸಿಕೊಳ್ಳುತ್ತದೆ. ಮನೋಜ್ ತೆರೆಮೇಲೆ ಸಾಕಷ್ಟು ಹೊತ್ತು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ, ಈ ವೆಬ್​ ಸೀರಿಸ್​ಗಾಗಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಇವರೇ. ಮೂಲಗಳ ಪ್ರಕಾರ ಮನೋಜ್​ ಅವರಿಗೆ ಎರಡೂ ವೆಬ್​ ಸೀರಿಸ್​ ಸೇರಿ 10 ಕೋಟಿ ರೂಪಾಯಿ ನೀಡಲಾಗಿದೆಯಂತೆ.

ಇನ್ನು, ಸಮಂತಾ ಕೂಡ ಈ ವೆಬ್​ ಸೀರಿಸ್​ ಮೂಲಕ ಮೋಡಿ ಮಾಡಿದ್ದಾರೆ. ಅವರು ನಟಿಸಿರುವ ರಾಜಿ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಅವರು ಈ ವೆಬ್​ ಸೀರಿಸ್​ಗಾಗಿ ಬರೋಬ್ಬರಿ 3-4 ಕೋಟಿ ರೂಪಾಯಿ ಪಡೆದಿದ್ದಾರಂತೆ. ಸಮಂತಾ ನಟನೆ ನೋಡಿದ ಅನೇಕರು ಅವರಿಗೆ ಸಂಭಾವನೆ ಕಡಿಮೆ ಆಯಿತು ಎಂದಿದ್ದಾರೆ.

ಶ್ರೀಕಾಂತ್ ತಿವಾರಿ ಪತ್ನಿ ಆಗಿ ಕಾಣಿಸಿಕೊಂಡಿರುವ ಪ್ರಿಯಾಮಣಿ (ಸುಚಿತ್ರಾ) 80 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಶರೀಫ್​ ಹಶ್ಮಿ (ಸಾಜಿದ್​) 65 ಲಕ್ಷ ರೂಪಾಯಿ, ದರ್ಶನ್ ಕುಮಾರ್ (ಜೆಕೆ)​ 1 ಕೋಟಿ ಪಡೆದಿದ್ದಾರೆ.

ದಿ ಫ್ಯಾಮಿಲಿ ಮ್ಯಾನ್​ 2 ವೆಬ್​ ಸೀರಿಸ್ ಜೂನ್​ 3ರ ಸಂಜೆಯಿಂದಲೇ ಪ್ರಸಾರ ಕಂಡಿತ್ತು. ಅಮೇಜಾನ್ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆದ ಈ ವೆಬ್​ ಸೀರಿಸ್​ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಮೊದಲ ಸೀರಿಸ್​ ಯಶಸ್ವಿಯಾಗಿಸಿದ ನಿರ್ದೇಶಕ ರಾಜ್​ ಮತ್ತು ಡಿಕೆ ಎರಡನೇ ಸೀರಿಸ್​ ಕೂಡ ಯಶಸ್ವಿ ಮಾಡಿದ್ದಾರೆ. ಸೀಸನ್​ 3 ಕೂಡ ತೆರೆಗೆ ಬರುವ ಸೂಚನೆಯನ್ನು ನಿರ್ದೇಶಕರು ನೀಡಿದ್ದಾರೆ.

ಇದನ್ನೂ ಓದಿ: ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಸಮಂತಾ ಆ್ಯಕ್ಷನ್​ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

Published On - 11:53 am, Wed, 9 June 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್