ಟ್ಯೂಷನ್ ಟೀಚರ್ ಮುಟ್ಟಬಾರದ ಜಾಗದಲ್ಲೆಲ್ಲ ಕೈ ಹಾಕಿದ್ದ; ಲೈಂಗಿಕ ದೌರ್ಜನ್ಯ ನೆನೆದಿದ್ದ ಬಾಲಿವುಡ್ ನಟಿ
Munmun Dutta Video: 2017ರಲ್ಲಿ ಮೀಟೂ ಆಂದೋಲನ ಆರಂಭವಾದ ನಂತರದಲ್ಲಿ ಸಾಕಷ್ಟು ನಟಿಯರು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದ ಕಹಿ ಘಟನೆಯ ಮೂಟೆಯನ್ನು ಹೊರ ಹಾಕಿದ್ದರು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ, ವೃತ್ತಿ ಜೀವನದಲ್ಲಿ ಏನೆಲ್ಲ ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದರು
ಸ್ಯಾಂಡಲ್ವುಡ್, ಬಾಲಿವುಡ್ ಸೇರಿ ಎಲ್ಲಾ ಚಿತ್ರರಂಗದಲ್ಲಿ ಮೀಟೂ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೇಕರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದರು. ಬಾಲಿವುಡ್ ನಟಿ ಮುನ್ಮುನ್ ದತ್ತ ಕೂಡ ಚಿಕ್ಕ ವಯಸ್ಸಿನಲ್ಲಾದ ಲೈಂಗಿಕ ದೌರ್ಜನ್ಯದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಾದ ಈ ಘಟನೆ ಬಗ್ಗೆ ಅವರು ಸವಿಸ್ತಾರವಾಗಿ ಬರೆದುಕೊಂಡಿದ್ದರು.
2017ರಲ್ಲಿ ಮೀಟೂ ಆಂದೋಲನ ಆರಂಭವಾದ ನಂತರದಲ್ಲಿ ಸಾಕಷ್ಟು ನಟಿಯರು ತಮ್ಮ ಒಡಲಲ್ಲಿ ಇಟ್ಟುಕೊಂಡಿದ್ದ ಕಹಿ ಘಟನೆಯ ಮೂಟೆಯನ್ನು ಹೊರ ಹಾಕಿದ್ದರು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ, ವೃತ್ತಿ ಜೀವನದಲ್ಲಿ ಏನೆಲ್ಲ ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆ ಬಗ್ಗೆ ಮುನ್ಮುನ್ ದತ್ ಉದ್ದನೆಯ ಪತ್ರ ಬರೆದಿದ್ದರು. ಪಕ್ಕದ ಮನೆಯ ಅಂಕಲ್, ಸೋದರ ಸಂಬಂಧಿ ಹಾಗೂ ಶಿಕ್ಷಕರಿಂದ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತಂತೆ.
‘ಈ ನೆನಪನ್ನು ನೆನೆಯುವಾಗ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ನನ್ನ ಪಕ್ಕದ ಮನೆಯ ಅಂಕಲ್ ಬಗ್ಗೆ ನನಗೆ ಭಯವಿತ್ತು. ಆತ ಅವಕಾಶ ಸಿಕ್ಕಾಗೆಲ್ಲ ನನ್ನನ್ನು ಹಿಡಿದುಕೊಳ್ಳುತ್ತಿದ್ದ ಮತ್ತು ಆ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಬೆದರಿಕೆ ಹಾಕುತ್ತಿದ್ದ. ನನ್ನ ಸೋದರ ಸಂಬಂಧಿ ನನ್ನನ್ನು ನೋಡುವ ದೃಷ್ಟಿ ಸರಿಯಾಗಿ ಇರಲಿಲ್ಲ. ನಾನು ಆಸ್ಪತ್ರೆಯಲ್ಲಿ ಜನಿಸಿದಾಗ ನನ್ನನ್ನು ನೋಡಿದ ಆ ವ್ಯಕ್ತಿ, 13 ವರ್ಷಗಳ ನಂತರ ಬದಲಾಗಿದ್ದ. ಅವನು ನನ್ನ ದೇಹವನ್ನು ಸ್ಪರ್ಶಿಸುವ ರೀತಿ ಸರಿಯಾಗಿರಲಿಲ್ಲ’ ಎಂದು ಅವರು ಸೋದರ ಸಂಬಂಧಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.
‘ಟ್ಯೂಷನ್ ನೀಡುವ ಶಿಕ್ಷಕ ನನ್ನ ಕೆಳ ಭಾಗದ ಒಳ ಉಡುಪುಗಳಲ್ಲಿ ಕೈ ಹಾಕುತ್ತಿದ್ದ. ನಾನು ರಾಖಿ ಕಟ್ಟಿದ ಶಿಕ್ಷಕನೋರ್ವ ಹುಡುಗಿಯರ ಬ್ರಾ ಹೊರಗೆಳೆದು ಸ್ತನದ ಮೇಲೆ ಹೊಡೆಯುತ್ತಿದ್ದ. ಇದಕ್ಕೆಲ್ಲ ನಾವು ಈ ಬಗ್ಗೆ ಹೊರಗೆ ಮಾತನಾಡಲು ಭಯ ಪಡುತ್ತೇವೆ ಎನ್ನುವುದೇ ಕಾರಣ ಎಂದು ಹೇಳುವ ಮೂಲಕ ಅವರು ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.
ಇದನ್ನೂ ಓದಿ: ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್ಮುನ್ ದತ್ತ ವಿರುದ್ಧ ಎಫ್ಐಆರ್ ದಾಖಲು
Published On - 1:35 pm, Wed, 9 June 21