ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್​ಮುನ್​ ದತ್ತ ವಿರುದ್ಧ ಎಫ್​ಐಆರ್​ ದಾಖಲು

ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್​ಮುನ್​ ದತ್ತ ವಿರುದ್ಧ ಎಫ್​ಐಆರ್​ ದಾಖಲು
ಮುನ್​ಮುನ್​ ದತ್ತ

Munmun Dutta: ‘ತಾರಕ್​ ಮೆಹ್ತಾ ಕಾ ಉಲ್ಟಾ ಚಸ್ಮಾ’ಧಾರಾವಾಹಿಯ ಬಬಿತಾ ಪಾತ್ರದ ಮೂಲಕ ಮುನ್​ಮುನ್​ ದತ್ತ ಹೆಚ್ಚು ಫೇಮಸ್​.​ ಕೆಲವೇ ದಿನಗಳ ಹಿಂದೆ ಅವರ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು.

Madan Kumar

| Edited By: Rajesh Duggumane

May 29, 2021 | 3:30 PM

ಹಿಂದಿ ಕಿರುತೆರೆಯ ಖ್ಯಾತ ನಟಿ ಮುನ್​ಮುನ್​ ದತ್ತ ವಿರುದ್ಧ ಮುಂಬೈನಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಯ್ದೆ 1989ರ ಅಡಿಯಲ್ಲಿ ಕೇಸ್​ ದಾಖಲಾಗಿದೆ. ಅಖಿಲ ಭಾರತೀಯ ಬಲಾಯಿ ಮಹಾಸಂಘ ಅಧ್ಯಕ್ಷ ಮನೋಜ್​ ಅವರು ಮುನ್​ಮುನ್​ ದತ್ತ ವಿರುದ್ಧ ದೂರು ನೀಡಿದ್ದರು. ನಟಿಯ ವಿರುದ್ಧ ಅನೇಕ ಕಡೆಗಳಲ್ಲಿ ದೂರು ಸಲ್ಲಿಕೆ ಆಗಿರುವುದರಿಂದ ಮಧ್ಯಪ್ರದೇಶ ಮತ್ತು ಹರಿಯಾಣದಲ್ಲೂ ಎಫ್​ಐಆರ್​ ದಾಖಲು ಮಾಡಲಾಗಿದೆ. ಈ ಮೂಲಕ ಮುನ್​ಮುನ್​ ದತ್ತ ಪೇಚಿಗೆ ಸಿಲುಕಿದಂತಾಗಿದೆ.

‘ತಾರಕ್​ ಮೆಹ್ತಾ ಕಾ ಉಲ್ಟಾ ಚಸ್ಮಾ’ಧಾರಾವಾಹಿಯ ಬಬಿತಾ ಪಾತ್ರದ ಮೂಲಕ ಮುನ್​ಮುನ್​ ದತ್ತ ಹೆಚ್ಚು ಫೇಮಸ್​.​ ಕೆಲವೇ ದಿನಗಳ ಹಿಂದೆ ಅವರ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು. ಆ ವಿಡಿಯೋದಲ್ಲಿ ಮುನ್​ಮುನ್​ ದತ್​ ಅವರು ಜಾತಿ ನಿಂದನೆಯ ಪದವನ್ನು ಬಳಕೆ ಮಾಡಿದ್ದರು. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು.

ಯೂಟ್ಯೂಬ್​ ವಿಡಿಯೋದಲ್ಲಿ ತಮ್ಮ ಮೇಕಪ್ ಬಗ್ಗೆ ಮುನ್​ಮುನ್​ ದತ್ತ ಮಾಹಿತಿ ನೀಡುತ್ತಿದ್ದರು. ‘ಯೂಟ್ಯೂಬ್​ನಲ್ಲಿ ಎಲ್ಲರ ಎದುರಿಗೆ ಬರುತ್ತಿದ್ದೇನೆ. ಚೆನ್ನಾಗಿ ಕಾಣಬೇಕು ಅಂತ ಸ್ವಲ್ಪ ಮೇಕಪ್​ ಮಾಡಿಕೊಂಡಿದ್ದೇನೆ. ಆ ಜಾತಿಯವರ ರೀತಿ ಕಾಣಲು ನನಗೆ ಇಷ್ಟ ಇಲ್ಲ’ಎಂದು ಒಂದು ನಿರ್ದಿಷ್ಟ ಜಾತಿಯ ಹೆಸರು ಹೇಳಿದ್ದರು. ಅವರು ಆ ಜಾತಿ ಹೆಸರು ಬಳಸಿದ್ದರಿಂದಲೇ ವಿವಾದ ಭುಗಿಲೆದ್ದಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಮುನ್​ಮುನ್​ ದತ್ತ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದರು.

ತಮ್ಮ ಹೇಳಿಕೆಯಿಂದ ವಿವಾದ ಆಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಮುನ್​ಮುನ್​ ದತ್ತ ಸೋಶಿಯಲ್​ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದರು. ‘ಯಾರಿಗೂ ನೋವು ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಸಿರಲಿಲ್ಲ. ನನ್ನ ಭಾಷೆಯ ಮಿತಿಯಿಂದಾಗಿ ಆ ಪದದ ಸರಿಯಾದ ಅರ್ಥ ನನಗೆ ತಿಳಿದಿರಲಿಲ್ಲ. ಎಲ್ಲರ ಜಾತಿ, ಧರ್ಮ, ಜನಾಂಗದ ಬಗ್ಗೆ ನಾನು ಗೌರವ ಹೊಂದಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ಎಂದು ಅವರು​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು.

ನಟಿಯ ಈ ಬಣ್ಣದ ಮಾತುಗಳಿಂದ ಯಾರೂ ರಾಜಿ ಆಗಿಲ್ಲ. ಮಾಡಿದ ತಪ್ಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಫ್​ಐಆರ್​ ದಾಖಲಾಗುವವರೆಗೂ ಜನರು ಹೋರಾಟ ಮಾಡಿದ್ದಾರೆ. ಒಟ್ಟಾರೆ ಈ ವಿವಾದ ಮುನ್​ಮುನ್​ ದತ್ತ ಅವರ ವೃತ್ತಿಜೀವನದಲ್ಲೊಂದು ಕಪ್ಪು ಚುಕ್ಕಿ ಆದಂತಾಗಿದೆ.

ಇದನ್ನೂ ಓದಿ:

ಜಾತಿ ನಿಂದನೆ ಆರೋಪ: ಪತಿಯ ಬಂಧನ ಖಂಡಿಸಿ ಧರಣಿಗೆ ಕೂತ ಮಹಿಳೆ ಪೊಲೀಸರ ವಶಕ್ಕೆ

ಜಾತಿ ನಿಂದನೆ ಆರೋಪ: ಕ್ರಿಕೆಟಿಗ ಯುವರಾಜ್​ ಸಿಂಗ್​ ವಿರುದ್ಧ 8 ತಿಂಗಳ ನಂತರ ದಾಖಲಾಯ್ತು FIR

Follow us on

Related Stories

Most Read Stories

Click on your DTH Provider to Add TV9 Kannada