ಜಾತಿ ನಿಂದನೆ ಆರೋಪ: ಪತಿಯ ಬಂಧನ ಖಂಡಿಸಿ ಧರಣಿಗೆ ಕೂತ ಮಹಿಳೆ ಪೊಲೀಸರ ವಶಕ್ಕೆ

ಪತಿ ಹರೀಶ್​ ಬಂಧನಕ್ಕೆ ಒಳಗಾಗಿದ್ದನ್ನು ಖಂಡಿಸಿದ ಪತ್ನಿ ವಿಮಾ, ಸುಳ್ಳು ಮೊಕದ್ದಮೆ ಆರೋಪ ಹೂಡಿದ್ದಾರೆ ಎಂದು ತನ್ನ ಇಬ್ಬರು ಮಕ್ಕಳೊಡನೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಮಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾತಿ ನಿಂದನೆ ಆರೋಪ: ಪತಿಯ ಬಂಧನ ಖಂಡಿಸಿ ಧರಣಿಗೆ ಕೂತ ಮಹಿಳೆ ಪೊಲೀಸರ ವಶಕ್ಕೆ
ಪತಿಯ ಬಂಧನವನ್ನು ವಿರೋಧಿಸಿ ಪತ್ನಿ ಪ್ರತಿಭಟನೆ
Follow us
shruti hegde
|

Updated on: Dec 25, 2020 | 2:17 PM

ಕೊಡಗು: ಆಸ್ತಿ ವಿಚಾರದಲ್ಲಿ ಜಾತಿ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಹರೀಶ್ ಬಂಧಿತರಾಗಿದ್ದರು. ಪತಿಯ ಬಂಧನವನ್ನು ಖಂಡಿಸಿ ಹರೀಶ್ ಪತ್ನಿ ವಿಮಾ, ಮಡಿಕೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಕಚೇರಿಯ ಮುಂದೆ ಧರಣಿಗೆ ಕುಳಿತಿದ್ದಾರೆ.

ಪತಿ ಹರೀಶ್​ ಬಂಧನಕ್ಕೆ ಒಳಗಾಗಿದ್ದನ್ನು ಖಂಡಿಸಿದ ಪತ್ನಿ ವಿಮಾ, ಸುಳ್ಳು ಮೊಕದ್ದಮೆ ಆರೋಪ ಹೂಡಿದ್ದಾರೆ ಎಂದು ತನ್ನ ಇಬ್ಬರು ಮಕ್ಕಳೊಡನೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.