Viral Video: ಈ ಡ್ರೋನ್ನಲ್ಲಿ ಮನುಷ್ಯರೂ ಕೂತು ಹಾರಬಹುದು! ವಿಡಿಯೋ ನೋಡಿ
ಮನೆಯಲ್ಲೇ ಇಂಜಿನಿಯರಿಂಗ್ನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದ ಕೆಲಸ ಇದು ಎಂದು ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಸಂಪೂರ್ಣ ಮೆಟಲ್ ವಸ್ತುಗಳನ್ನು ಉಪಯೋಗಿಸಿ ಈ ಡ್ರೋನ್ ತಯಾರಿಸಲಾಗಿದೆ.
ನೀವು ಬಹಳಷ್ಟು ಡ್ರೋನ್ಗಳ ಬಗ್ಗೆ ಕೇಳಿರಬಹುದು. ಡ್ರೋನ್ಗಳ ಬಗ್ಗೆ ಜನರ ಕುತೂಹಲವೂ ಹೆಚ್ಚೇ ಇದೆ. ಡ್ರೋನ್ ಕ್ಯಾಮರಾ, ಅದರಿಂದ ತೆಗೆದ ಫೋಟೊ ಅಥವಾ ವಿಡಿಯೋ ಎಂದರೆ ಜನ ಕಣ್ಣು ಬಾಯಿ ತೆರೆದು ಕುತೂಹಲದಿಂದ ನೋಡುವುದು ಈಗಲೂ ಇದೆ. ಹಾಗೇ ಡ್ರೋನ್ ಕೇವಲ ಒಂದೆರಡು ಕೆಲಸಕ್ಕೆ ಅಥವಾ ವಲಯಕ್ಕೆ ಸೀಮಿತವಾಗಿಲ್ಲ. ರಕ್ಷಣಾ ಕ್ಷೇತ್ರದಿಂದ ಹಿಡಿದು ಯುವಕರು ಸಣ್ಣಪುಟ್ಟ ವಿಡಿಯೋ ಮಾಡಲು ಕೂಡ ಡ್ರೋನ್ ತಂತ್ರಜ್ಞಾನ ಬಳಸುತ್ತಾರೆ.
ಇಂದು ನಾವು ಹಲವು ವಿಧದ ಡ್ರೋನ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇವೆ. ಹಲವರು ಕೆಲವು ಬಗೆಯ ಡ್ರೋನ್ಗಲನ್ನಾದರೂ ನೋಡಿರುತ್ತಾರೆ. ಅಥವಾ ಬಹಳ ಮಂದಿ ಡ್ರೋನ್ ತಂತ್ರಜ್ಞಾನದ ಸಾಧ್ಯತೆ, ವಿಶೇಷತೆಗಳನ್ನು ಕೇಳಿರುತ್ತೇವೆ. ಇಂದು ನಾವಿಲ್ಲಿ ಅದಲ್ಲೆಕ್ಕಿಂತ ವಿಭಿನ್ನವಾದ ಹೊಸದೊಂದು ಡ್ರೋನ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ. ಇದರಲ್ಲಿ ಸಣ್ಣಪುಟ್ಟ ವಸ್ತುವಲ್ಲ, ಸ್ವತಃ ಮನುಷ್ಯರೇ ಕುಳಿತು ಹಾರಬಹುದು!
ಅಂದಹಾಗೆ, ಜನರು ಕಡಿಮೆ ಖರ್ಚಿನಲ್ಲಿ, ಲಭ್ಯ ವಸ್ತುಗಳನ್ನೇ ಬಳಸಿ ಹೊಸದೇನನ್ನೋ ಕಂಡುಹಿಡಿದದ್ದನ್ನು ನೀವು ನೋಡಿರಬಹುದು. ಅಂತಹ ಕೆಲಸ ನೋಡಿದಾಗ ಜನಸಾಮಾನ್ಯರು ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅಂತಹ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ, ಮನುಷ್ಯನೇ ಡ್ರೋನ್ ಮೇಲೆ ಕುಳಿತು ಹಾರುವ ದೃಶ್ಯ ಕಂಡುಬಂದಿದೆ.
ಮನೆಯಲ್ಲೇ ಇಂಜಿನಿಯರಿಂಗ್ನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದ ಕೆಲಸ ಇದು ಎಂದು ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಸಂಪೂರ್ಣ ಮೆಟಲ್ ವಸ್ತುಗಳನ್ನು ಉಪಯೋಗಿಸಿ ಈ ಡ್ರೋನ್ ತಯಾರಿಸಲಾಗಿದೆ. ತನ್ನ ಮನೆಯ ಗಾರ್ಡನ್ನಲ್ಲೇ ಡ್ರೋನ್ ಹಾರಿಸುವ ವಿಡಿಯೋ ಚಿತ್ರೀಕರಿಸಲಾಗಿದೆ.
ಹೀಗೆ ತಯಾರಿಸಿದ ಡ್ರೋನ್ ಮೂಲಕವೇ ಆ ವ್ಯಕ್ತಿ ತನ್ನ ಮನೆಯ ಮಾಡಿನಷ್ಟು ಎತ್ತರಕ್ಕೆ ಹಾರಿದ್ದಾನೆ. ಕೇವಲ 59 ಸೆಕೆಂಡ್ನ ಈ ವಿಡಿಯೋ ನೆಟ್ಟಿಗರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇದನ್ನು ಹಿತ್ತಿಲಿನಲ್ಲಿ ಬಳಸುವ ಹೆಲಿಕಾಪ್ಟರ್ ಎಂದೂ ಕರೆಯಬಹುದು ಎಂದು ಒಬ್ಬರು ಹೇಳಿದ್ದಾರೆ. ಇದು ಫ್ಲೈಯಿಂಗ್ ಕಾರ್ನಂತೆ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಸರತಿ ಸಾಲಿನಲ್ಲಿ ಸರಸರನೆ ಕಟ್ಟಡ ಇಳಿಯುತ್ತಿರುವ ಮಂಗಗಳು! ಉದ್ಯಮಿ ಹರ್ಷ ಗೋಯಂಕಾ ಹಂಚಿಕೊಂಡ ವಿಡಿಯೋ ವೈರಲ್
Sai Pallavi: ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮಕ್ಕೆ ಸಜ್ಜಾದ ಸಾಯಿ ಪಲ್ಲವಿ; ಫೋಟೋ ವೈರಲ್