Sai Pallavi: ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮಕ್ಕೆ ಸಜ್ಜಾದ ಸಾಯಿ ಪಲ್ಲವಿ; ಫೋಟೋ ವೈರಲ್
ಈ ಮದುವೆಯ ಬಗ್ಗೆ ಸಾಯಿ ಪಲ್ಲವಿ ಇನ್ನಷ್ಟೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬೇಕಿದೆ. ಶೀಘ್ರವೇ ಅವರು ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಲಾಕ್ಡೌನ್ನಲ್ಲಿ ಅನೇಕ ನಟಿಯರು ಸದ್ದಿಲ್ಲದೇ ಮದುವೆ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಣಿತಾ ಸುಭಾಷ್, ಯಾಮಿ ಗೌತಮ್ ಮುಂತಾದವರು ಸೈಲೆಂಟ್ ಆಗಿ ಹಸೆಮಣೆ ಏರಿದ್ದರು. ಸಿಂಪಲ್ ಆಗಿ ಮದುವೆ ಆಗುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಇರುವಾಗ ನಟಿ ಸಾಯಿ ಪಲ್ಲವಿ ಮೆಹಂದಿ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಹಾಗಂತ ಸ್ವತಃ ಸಾಯಿ ಪಲ್ಲವಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿಲ್ಲ. ಸದ್ಯ ಅವರು ಸಂಬಂಧಿಕರ ಮದುವೆಗಾಗಿ ಸಜ್ಜಾಗಿದ್ದಾರೆ.
ಲಾಕ್ಡೌನ್ನಲ್ಲಿ ಕೆಲವು ದಿನಗಳಿಂದ ಸಾಯಿ ಪಲ್ಲವಿ ಅವರು ತಮ್ಮ ಕಸಿನ್ಸ್ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕ್ಯಾಂಡಿಡ್ ಗ್ರೂಪ್ ಫೋಟೋಗಳನ್ನು ಹಂಚಿಕೊಂಡಿದ್ದ ಅವರು ‘ಮದುವೆ ಸ್ಕ್ವಾಡ್’ ಎಂದು ಕ್ಯಾಪ್ಷನ್ ನೀಡಿದ್ದರು. ಈಗ ಮೆಹಂದಿ ಸಂಭ್ರಮದ ಕ್ಷಣಗಳ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಹಲವರು ಒಮ್ಮೆಲೇ ಅಚ್ಚರಿ ಪಟ್ಟಿದ್ದಾರೆ. ಸೈಲೆಂಟ್ ಆಗಿ ಸಾಯಿ ಪಲ್ಲವಿ ಹಸೆಮಣೆ ಏರಬಹುದೇ ಎಂಬ ಗುಮಾನಿ ಅನೇಕರಿಗೆ ಒಂದು ಕ್ಷಣ ಕಾಡಿರಬಹುದು. ಆದರೆ ಅವರು ಈ ರೀತಿ ಮೆಹಂದಿ ಹಚ್ಚಿಕೊಂಡು ಸಜ್ಜಾಗಿರುವುದು ಕಸಿನ್ ಮದುವೆಗೆ ಎನ್ನಲಾಗಿದೆ.
ಈ ಮದುವೆಯ ಬಗ್ಗೆ ಸಾಯಿ ಪಲ್ಲವಿ ಇನ್ನಷ್ಟೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬೇಕಿದೆ. ಶೀಘ್ರವೇ ಅವರು ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಯಿ ಪಲ್ಲವಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮಲಯಾಳಂನ ‘ಪ್ರೇಮಂ’ ಸಿನಿಮಾದಿಂದ ಭಾರಿ ಜನಪ್ರಿಯತೆ ಗಳಿಸಿದ ಅವರು ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
‘ಲವ್ ಸ್ಟೋರಿ’ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ, ವಿರಾಟ ಪರ್ವಂ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ನಾನಿ ಜೊತೆ ನಟಿಸುತ್ತಿರುವ ‘ಶ್ಯಾಮ್ ಸಿಂಗ್ ರಾಯ್’ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಹೀಗೆ ಸಿನಿಮಾ ಮತ್ತು ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತ, ಮುಂದೆ ಸಾಗುತ್ತಿರುವ ಸಾಯಿ ಪಲ್ಲವಿ ಸದ್ಯಕ್ಕಂತೂ ಮದುವೆ ಯೋಚನೆ ಮಾಡುವುದು ಅನುಮಾನ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನ್ನೂ ಅವರಿಗೆ 29ರ ಪ್ರಾಯ.
ಇದನ್ನೂ ಓದಿ:
Sai Pallavi: ಸಾಯಿ ಪಲ್ಲವಿಗೆ ಜೋಡಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್; ಫ್ಯಾನ್ಸ್ ಮೆಚ್ಚಿದ ವಿಡಿಯೋ ವೈರಲ್