ಇಂದು ಅತಿ ದೀರ್ಘ ಹಗಲುಳ್ಳ ದಿನ; ಈ ಕುರಿತು ತಿಳಿಯಲೇಬೇಕಾದ ಕೆಲವೊಂದಿಷ್ಟು ಮಾಹಿತಿ ಇಲ್ಲಿದೆ
Summer solstice: ಆಯನ ಸಂಕ್ರಾಂತಿ ಎಂಬುದು ಲ್ಯಾಟೀನ್ ಭಾಷೆಯಿಂದ ಬಂದಿದೆ. ವರ್ಷದಲ್ಲಿ ಎರಡು ಬಾರಿ ಪ್ರತಿ ಗೋಳಾರ್ಧದಲ್ಲಿ ಈ ಆಯನ ಸಂಕ್ರಾಂತಿ ದಿನ ಗೋಚರವಾಗುತ್ತದೆ.
ಇಂದು (ಜೂನ್ 21, ಸೋಮವಾರ) ಈ ವರ್ಷದಲ್ಲಿ ದೀರ್ಘಕಾಲದ ಹಗಲನ್ನು ಹೊಂದಿರುತ್ತೇವೆ. ಆದ್ದರಿಂದ ಇದನ್ನು ಬೇಸಿಗೆಯಲ್ಲಿನ ಆಯನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಉತ್ತರ ಗೋಳಾರ್ಧದಲ್ಲಿ ಅತಿ ದೀರ್ಘ ಹಗಲುಳ್ಳ ದಿನ ಇದಾಗಿದೆ. ಸೂರ್ಯನು ಕಾಲ್ಪನಿಕ ಉಷ್ಣಾಂಶದ ಕರ್ಕಾಟಕ ವೃತ್ತ ಅಥವಾ 23.5 ಡಿಗ್ರಿ N ಅಕ್ಷಾಂಶದ ಮೇಲೆ ನೇರವಾಗಿ ಬೀಳುವಾಗ ಈ ಬೇಸಿಗೆಯಲ್ಲಿ ಆಯನ ಸಂಕ್ರಾಂತಿ ದಿನ ಸಂಭವಿಸುತ್ತದೆ. ಈ ದಿನದ ನಂತರದಲ್ಲಿ ಹಗಲು ಕಡಿಮೆಯಾಗಿ ರಾತ್ರಿಯ ಅವಧಿ ಹೆಚ್ಚಾಗಲು ಪ್ರಾರಂಭಿಸುತ್ತದೆ ಹಾಗೂ ಅತಿ ದೀರ್ಘ ಹಗಲು ಹೊಂದಿರುವ ದಿನವನ್ನು ಸೂಚಿಸುತ್ತದೆ.
ಆಯನ ಸಂಕ್ರಾಂತಿ ಎಂಬುದು ಲ್ಯಾಟೀನ್ ಭಾಷೆಯಿಂದ ಬಂದಿದೆ. ವರ್ಷದಲ್ಲಿ ಎರಡು ಬಾರಿ ಪ್ರತಿ ಗೋಳಾರ್ಧದಲ್ಲಿ ಈ ಆಯನ ಸಂಕ್ರಾಂತಿ ದಿನ ಗೋಚರವಾಗುತ್ತದೆ. ಬೇಸಿಗೆಯ ಸಂದರ್ಭದಲ್ಲಿ ಜೂನ್ ತಿಂಗಳಿನಲ್ಲಿ ಹಾಗೂ ಚಳಿಗಾಲದ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಇದು ಕಂಡು ಬರುತ್ತದೆ. ಜೂನ್ ತಿಂಗಳಿನಲ್ಲಿ ಉತ್ತರ ಗೋಳಾರ್ಧದಲ್ಲಿ ಬರುವ ಅಮೆರಿಕಾ, ರಷ್ಯಾ, ಕೆನಡಾ ಭಾರತ ಮತ್ತು ಚೀನಾದಲ್ಲಿ ದೀರ್ಘ ಹಗಲು ಸಂಭವಿಸುತ್ತದೆ. ಜತೆಗೆ ಆಸ್ಟ್ರೇಲಿಯಾ, ಅರ್ಜೆಂಟಿನಾ, ದಕ್ಷಿಣ ಆಫ್ರಿಕಾ ಭಾಗಗಳಲ್ಲಿ ಇದು ವರ್ಷದ ಕಡಿಮೆ ಹಗಲು ಇರುವ ದಿನವಾಗಿರುತ್ತದೆ.
ಈ ದಿನದಂದು ಸೂರ್ಯನ ಶಾಖ ದಿರ್ಘವಾಗಿರುತ್ತದೆ. ನಾಸಾದ ಪ್ರಕಾರ ಈ ದಿನ ಭೂಮಿಯು ಸೂರ್ಯನಿಂದ ಬರುವ ಶಕ್ತಿಯ ಪ್ರಮಾಣವು ಉತ್ತರ ಧ್ರುವದಲ್ಲಿ ಶೇ. 30ರಷ್ಟು ಹೆಚ್ಚಾಗಿರುತ್ತದೆ.
ಉತ್ತರ ಗೋಳಾರ್ಧದಲ್ಲಿ ಸೂರ್ಯನ ಬೆಳಕು ಸಾಮಾನ್ಯವಾಗಿ ಜೂನ್ 20, 21 ಅಥವಾ 22 ರಂದು ಇರುತ್ತದೆ. ಇದೇ ಸಂದರ್ಭದಲ್ಲಿ ಉತ್ತರ ಗೋಳಾರ್ಧವು ಅತಿ ಹೆಚ್ಚು ರಾತ್ರಿಯನ್ನು ಹೊಂದುವಾಗ, ದಕ್ಷಿಣ ಗೋಳಾರ್ಧದಲ್ಲಿ ದೀರ್ಘಕಾಲದ ಹಗಲು ಕಂಡು ಬರುತ್ತದೆ.
ಇಂದು (ಸೋಮವಾರ) ನಾವು ಎಷ್ಟು ಗಂಟೆಯ ದೀರ್ಘ ಬೆಳಕನ್ನು ಪಡೆಯುತ್ತೇವೆ?
*ನವದೆಹಲಿಯಲ್ಲಿ ಬೆಳಿಗ್ಗೆ ಸೂರ್ಯೋದಯದ ಸಮಯ 5:23 ಮತ್ತು ಸೂರ್ಯಾಸ್ತದ ಸಮಯ 7:21. ದಿನದ ದೀರ್ಘ ಕಾಲ 13:58:01 (13 ಗಂಟೆ 58 ನಿಮಿಷ 01 ಸೆಕೆಂಡ್) *ಮುಂಬೈನಲ್ಲಿ ಸೂರ್ಯೋದಯ ಸಮಯ 6:02 ಮತ್ತು ಸೂರ್ಯಾಸ್ತ ಸಮಯ 7:18. ದಿನದ ದೀರ್ಘ ಒಟ್ಟು ದೀರ್ಘ ಸಮಯ 13:16:20
*ಚೆನ್ನೈನಲ್ಲಿ ಸೂರ್ಯೋದಯ ಬೆಳಿಗ್ಗೆ 5:43 ಮತ್ತು ಸೂರ್ಯಾಸ್ತ ಸಮಯ 6:37
*ಪ್ರಮುಖ ನಗರಗಳಲ್ಲಿ ದಿನದ ದೀರ್ಘಾವಧಿ 12:53:48
ಇದನ್ನೂ ಓದಿ:
ಕೊವಿಡ್ ಮತ್ತು ಚಂಡಮಾರುತದಿಂದ ತತ್ತರಿಸಿದ ಸುಂದರಬನ; ಬದುಕು ನಿರ್ವಹಣೆಗಾಗಿ ಹರಸಾಹಸ ಪಡುತ್ತಿದ್ದಾರೆ ಜನ
Long Covid: ದೀರ್ಘಕಾಲಿಕ ಕೊವಿಡ್ ರೋಗ ಲಕ್ಷಣಗಳ ಚೇತರಿಕೆಯ ಬಳಿಕ ಮೂತ್ರಪಿಂಡ ಸಮಸ್ಯೆ ಕಾಡಬಹುದು!
Published On - 11:48 am, Mon, 21 June 21