Long Covid: ದೀರ್ಘಕಾಲಿಕ ಕೊವಿಡ್ ರೋಗ ಲಕ್ಷಣಗಳ ಚೇತರಿಕೆಯ ಬಳಿಕ ಮೂತ್ರಪಿಂಡ ಸಮಸ್ಯೆ ಕಾಡಬಹುದು!
ಮೇ ತಿಂಗಳಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೊರೊನಾದಿಂದ ಚೇತರಿಸಿಕೊಂಡ ನಂತರ, ಮೂತ್ರಪಿಂಡದ ವೈಫಲ್ಯವು ಬೇಗನೆ ತಿಳಿದು ಬಂದಿಲ್ಲ.
ಕೊರೊನಾ ವೈರಸ್ ಎರಡನೇ ಅಲೆಯಿಂದ ಭಾರತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್ ಬಳಿಕವೂ ಸಹ ಜನರಿಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಲಾಂಗ್ ಕೊವಿಡ್ ಅಥವಾ ದೀರ್ಘಕಾಲಿಕ ಕೊವಿಡ್ ಎಂದು ಕರೆಯುತ್ತಾರೆ. ಇದರ ಪ್ರಕಾರ ರೋಗಿಗಳು ಸೋಂಕಿನಿಂದ ಹೊರ ಬಂದರೂ ಸಹ ಕೆಲವು ವಾರಗಳವರೆಗೆ ವೈರಸ್ನ ಲಕ್ಷಣಗಳನ್ನು ಅನುಭವಿಸುತ್ತಾರೆ.
ಕೊರೊನಾ ವೈರಸ್ ಉಸಿರಾಟ ಸಮಸ್ಯೆ ಒಂದೇ ಅಲ್ಲದೇ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ಸಾಬೀತಾಗಿದೆ. ಈ ಮಧ್ಯೆ, ಕೊರೊನಾದಿಂದ ಚೇತರಿಸಿಕೊಂಡ ನಂತರವೂ ಸಹ ಮೂತ್ರಪಿಂಡ ಸಮಸ್ಯೆ ಬಾಧಿಸುತ್ತದೆ. ಜನರಲ್ಲಿ ಬಿಪಿ ಹೆಚ್ಚಳದಂತಹ ಸಮಸ್ಯೆ ಕಾಡಬಹುದು ಎಂಬುದು ತಿಳಿದು ಬಂದಿದೆ. ಕೊರೊನಾ ಸೋಂಕಿತರ ಮೇಲೆ ನಡೆಸಿದ ಅಧ್ಯಯನದಿಂದ ಇದು ತಿಳಿದು ಬಂದಿದೆ ಎಂದು ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆರಂಭಿಕ ಲಕ್ಷಣಗಳು ಕಂಡು ಬರುವುದಿಲ್ಲ ಮೇ ತಿಂಗಳಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೊರೊನಾದಿಂದ ಚೇತರಿಸಿಕೊಂಡ ನಂತರ, ಮೂತ್ರಪಿಂಡದ ವೈಫಲ್ಯವು ಬೇಗನೆ ತಿಳಿದು ಬಂದಿಲ್ಲ. ಸೋಂಕಿನಿಂದ ಚೇತರಿಸಿಕೊಂಡ ಬಳಿಕದ ಆರಂಭದ ದಿನಗಳಲ್ಲಿ ಗೊತ್ತಾಗಲಿಲ್ಲ. ಸಮಯ ಕಳೆದಂತೆಯೇ ಮೂತ್ರಪಿಂಡದ ಸಮಸ್ಯೆ ತಿಳಿದು ಬಂದಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾದ ಶೇ.13 ಜನರು ಈ ಸಮಸ್ಯೆಗೆ ಒಳಗಾಗಿದ್ದಾರೆ. ಆದರೆ ಅವರಿಗೆ ಯಾವುದೇ ರೋಗ ಲಕ್ಷಣಗಳು ತೋರಿಸಿಲ್ಲ ಎಂದು ಅಧ್ಯಯನ ತಿಳಿಸಿದೆ. ಡಿಶ್ಚಾರ್ಜ್ ಮಾಡಿದ ರೋಗಿಗಳನ್ನು ನಿರಂತರವಾಗಿ ಪರೀಕ್ಷಿಸಬೇಕು. ಏಕೆಂದರೆ ಒಂದೇ ಬಾರಿಗೆ ಮೂತ್ರಪಿಂಡ ಸಮಸ್ಯೆ ಇರುವುದು ಗೊತ್ತಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:
Long Covid Symptoms: ದೀರ್ಘಕಾಲಿಕ ಕೊವಿಡ್ ರೋಗ ಲಕ್ಷಣಗಳು ಹಾಗೂ ನಿರ್ವಹಿಸುವ ಕೆಲವು ಸಲಹೆಗಳು
Long Covid: ಕೊರೊನಾ ನೆಗೆಟಿವ್ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು