Long Covid: ಕೊರೊನಾ ನೆಗೆಟಿವ್​ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು

ಕೊವಿಡ್​ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಬಂದರೂ ಕೂಡಾ ಸುಮಾರು 6 ತಿಂಗಳವರೆಗೆ ಕೊರೊನಾ ಸಂಬಂಧಿತ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ.

Long Covid: ಕೊರೊನಾ ನೆಗೆಟಿವ್​ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು
ಪ್ರಾತಿನಿಧಿಕ ಚಿತ್ರ
Follow us
shruti hegde
|

Updated on: Apr 23, 2021 | 2:30 PM

ಪ್ರತಿ ನಿತ್ಯ ಕೊರೊನಾ ಸೋಂಕು ಹರಡುವ ಮಟ್ಟ ಏರುತ್ತಲೇ ಇದೆ. ಪ್ರತಿನಿತ್ಯವೂ ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಹರಡುತ್ತಿದೆ. ಅನೇಕ ಅಧ್ಯಯನಗಳ ಪ್ರಕಾರ, ಕೊವಿಡ್​ ಲಕ್ಷಣಗಳು ಸುಮಾರು ಶೇ.50ರಷ್ಟು ಸಾಮ್ಯ ಗುಣಲಕ್ಷಣಗಳನ್ನು ಹೊಂದಿದೆ. ಸೋಂಕು ಗುಣಪಡಿಸಿದ ನಂತರವೂ ಆರೋಗ್ಯವು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿಲ್ಲ. ಅಂದರೆ ಕೊವಿಡ್​ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಬಂದರೂ ಕೂಡಾ ಸುಮಾರು 6 ತಿಂಗಳವರೆಗೆ ಕೊರೊನಾ ಸಂಬಂಧಿತ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಅದನ್ನು ಲಾಂಗ್​ ಕೊವಿಡ್ (Long Covid) ಅಥವಾ ಪೋಸ್ಟ್ ಕೊವಿಡ್ ಸಿಂಡ್ರೋಮ್ (Post Covid Syndrome)​ ಎಂದು ಕರೆಯಲಾಗುತ್ತದೆ.

ಲಾಂಗ್​ ಕೊವಿಡ್​ ಎಂದರೇನು? ಕೊವಿಡ್ ಸೋಂಕಿಗೆ ಒಳಗಾದ ರೋಗಿಗಳು ಸಾಮಾನ್ಯವಾಗಿ 1 ರಿಂದ 2 ವಾರಗಳವರೆಗೆ ಚೇತರಿಸಿಕೊಳ್ಳುತ್ತಾರೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆದರೆ ತೀವ್ರವಾಗಿ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಚೇತರಿಸಿಕೊಳ್ಳಲು 6 ರಿಂದ 7 ವಾರಗಳು ಬೇಕಾಗುತ್ತದೆ. ಟೈಮ್ಸ್​ ಆಫ್​ ಇಂಡಿಯಾ ವರದಿಯ ಪ್ರಕಾರ, ರೋಗಿಯು ಕೊವಿಡ್​-19 ನಿಂದ ಚೇತರಿಸಿಕೊಂಡ ನಂತರವೂ ಅಂದರೆ ಕೊರೊನಾ ನೆಗೆಟಿವ್​ ವರದಿ ಬಂದರೂ ಕೂಡಾ ಕೊವಿಡ್​ ಲಕ್ಷಣಗಳಾದ ಕೆಮ್ಮು, ತಲೆನೋವು, ಮೈ-ಕೈ ನೋವು, ಆಯಾಸ, ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಲಾಂಗ್​ ಕೊವಿಡ್​ ಎಂದು ಕರೆಯಲಾಗುತ್ತದೆ.

ಪುರುಷರಿಗಿಂತ ಮಹಿಳೆಯರಲ್ಲಿ ಲಾಂಗ್​ ಕೊವಿಡ್ ಸಮಸ್ಯೆ ಹೆಚ್ಚು ಬ್ರಿಟನ್ ರಾಷ್ಟ್ರೀಯ ಕಚೇರಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ 20 ಸಾವಿರ ಜನರು ಭಾಗವಹಿಸಿದ್ದು ಇದರ ಅಂಕಿಅಂಶಗಳ ಪ್ರಕಾರ, ಬಹುಬೇಗ ಚೇತರಿಸಿಕೊಂಡ ನಂತರವೂ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದು ತಿಳಿದು ಬಂದಿದೆ. ರೋಗದ ಲಕ್ಷಣವು 5 ವಾರದಿಂದ ಸುಮಾರು 12 ವಾರಗಳವರೆಗೆ ಕಾಣಿಸಿಕೊಂಡವು. ಈ ದೀರ್ಘಕಾಲದವರೆಗಿನ ಕೊವಿಡ್ (ಲಾಂಗ್ ಕೊವಿಡ್) ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿಯೇ ಕಾಣಿಸಿಕೊಂಡಿದೆ.

ಲಾಂಗ್​ ಕೊವಿಡ್ ಲಕ್ಷಣಗಳು ನಿರಂತರ ಕೆಮ್ಮು: ಕೊವಿಡ್​ ಸೋಂಕಿನಿಂದಾಗಿ ರೋಗಿಯು ಹೆಚ್ಚು ಕೆಮ್ಮುತ್ತಿದ್ದರೆ ಉಸಿರಾಟ ಕ್ರಿಯೆಗೆ ತೊಂದರೆಯಾಗುತ್ತದೆ. ಗಂಟಲಿನಲ್ಲಿ ಉರಿ, ಎದೆಯಲ್ಲಿ ಉರಿಯೂತ ಉಂಟಾಗುತ್ತದೆ. ಕೊವಿಡ್​ ಸೋಂಕಿನಿಂದ ಹೊರಬಂದರೂ ಕೂಡಾ ಕೆಮ್ಮು ಹಲವು ವಾರಗಳವರೆಗೆ ಕಾಣಿಸಿಕೊಳ್ಳುತ್ತದೆ.

ಅತಿಸಾರ: ಅಧ್ಯಯನದ ಪ್ರಕಾರ ಕೊರೊನಾ ಸೋಂಕು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಅತಿಸಾರದ ಸಮಸ್ಯೆ ದೀರ್ಘಕಾಲದವರೆಗೆ ಕಂಡು ಬರುತ್ತದೆ.

ಹಸಿವಿನ ಕೊರತೆ: ಅನಾರೋಗ್ಯದಿಂದ ಚೇತರಿಸಿಕೊಂಡ ನಂತರವೂ ಅನೇಕ ರೋಗಿಗಳಿಗೆ ಹಸಿವಿನ ಕೊರತೆ ಕಂಡು ಬರುತ್ತದೆ. ಆಹಾರವನ್ನು ಸೇವಿಸಬೇಕು ಅನಿಸುವುದಿಲ್ಲ. ಈ ಸಮಸ್ಯೆ ಹಲವಾರು ವಾರಗಳವರೆಗೆ ಕಂಡು ಬರುತ್ತದೆ.

ಆಯಾಸ ಮತ್ತು ದೌರ್ಬಲ್ಯ: ಕೊವಿಡ್​ ಸೋಂಕಿನಿಂದ ಬಳಲುತ್ತಿರುವವರಲ್ಲಿ ಸುಮಾರು ಶೇ.80ರಷ್ಟು ರೋಗಿಗಳು ಆಯಾಸದಿಂದ ಬಳಲುತ್ತಿರುತ್ತಾರೆ. ದುರ್ಬಲತೆಯನ್ನೂ ಅನುಭವಿಸುತ್ತಾರೆ.

ಉಸಿರಾಟದ ತೊಂದರೆ: ಕೊರೊನಾ ಸಾಂಕ್ರಾಮಿಕ ರೋಗ ಉಸಿರಾಟಕ್ಕೆ ಸಂಬಂಧಿಸಿದ ರೋಗವಾಗಿದೆ. ಸೋಂಕಿನಿಂದ ಮುಕ್ತರಾದರೂ ಕೂಡಾ ಹಲವು ದಿನಗಳವರೆಗೆ ಉಸಿರಾಟದ ತೊಂದರೆ ಕಂಡುಬರುತ್ತದೆ. ಜೊತೆಗೆ ಗಂಟಲು ನೋವು, ಒರಟಾದ ಧ್ವನಿ ಸಮಸ್ಯೆ ಕಂಡು ಬರುತ್ತದೆ.

ಇದನ್ನೂ ಓದಿ: ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ

(Do not ignore the Symptoms of Long Covid and What it mease here are the details in kannada )

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ