ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಮಹಾರಾಷ್ಟ್ರಕ್ಕೆ ಬಂತು ಆಕ್ಸಿಜನ್ ಎಕ್ಸ್‌ಪ್ರೆಸ್
Oxygen Express: ಇದೇ ಮೊದಲ ಬಾರಿ ಆಕ್ಸಿಜನ್ ಎಕ್ಸ್‌ಪ್ರೆಸ್ ಗುರುವಾರ ವಿಶಾಖಪಟ್ಟಣಂನಿಂದ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸಾಗಿಸಿದೆ.ಆಂಧ್ರ ಪ್ರದೇಶದ ರಾಷ್ಟ್ರೀಯ ಇಸ್ಪತ್ ನಿಗಮ್ ( ಆರ್‌ಐಎನ್‌ಎಲ್) ನಿಂದ ಗುರುವಾರ ಆಕ್ಸಿಜನ್ ಟ್ಯಾಂಕರ್ ಹೊತ್ತು ಈ ರೈಲು ಮಹಾರಾಷ್ಟ್ರಕ್ಕೆ ಹೊರಟಿತ್ತು.
ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್ ರೋಗಿಗಳು ಆಕ್ಸಿಜನ್ ಲಭಿಸದೆ ಸಂಕಷ್ಟಕ್ಕೀಡಾಗಿರುವ ಹೊತ್ತಲ್ಲಿ ಇದೇ ಮೊದಲ ಬಾರಿ ಆಕ್ಸಿಜನ್ ಎಕ್ಸ್‌ಪ್ರೆಸ್ ಗುರುವಾರ ವಿಶಾಖಪಟ್ಟಣಂನಿಂದ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸಾಗಿಸಿದೆ.ಆಂಧ್ರ ಪ್ರದೇಶದ ರಾಷ್ಟ್ರೀಯ ಇಸ್ಪತ್ ನಿಗಮ್ ( ಆರ್‌ಐಎನ್‌ಎಲ್) ನಿಂದ ಗುರುವಾರ ಆಕ್ಸಿಜನ್ ಟ್ಯಾಂಕರ್ ಹೊತ್ತು ಈ ರೈಲು ಮಹಾರಾಷ್ಟ್ರಕ್ಕೆ ಹೊರಟಿತ್ತು. ಮಹಾರಾಷ್ಟ್ರದಿಂದ 7 ಖಾಲಿ ಟ್ಯಾಂಕರ್ಗಳು ಇಂದು ಬೆಳಗ್ಗೆ ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪತ್ ನಿಗಮ್ ತಲುಪಿದೆ. ಬೆಳಗ್ಗಿನಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (LMO) ಇದಕ್ಕೆ ತುಂಬಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಗುರುವಾರ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.
ಪ್ರತಿ ಟ್ಯಾಂಕರ್‌ಗೆ 15 ಟನ್‌ಗಳಷ್ಟು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ತುಂಬಿದೆ ಮತ್ತು ಸಂಜೆ ರೈಲು ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ ಮತ್ತು ಆರ್‌ಐಎನ್‌ಎಲ್ ಅಧಿಕಾರಿಗಳು ಜಂಟಿ ಪ್ರಯತ್ನದಿಂದ ಯೋಜನೆಯನ್ನು ಯಶಸ್ವಿಗೊಳಿಸಿದರು. ಕೊವಿಡ್ ಪ್ರಕರಣಗಳು ಏರಿಕೆಯಾಗಿರುವ ಈ ಹೊತ್ತಲ್ಲಿ ಇಂದು ಪ್ರಯೋಜನಕಾರಿ ಆಗಿದೆ ಎಂದು ರೈಲ್ವೆ ಹೇಳಿದೆ.
The first ‘Oxygen Express’ train loaded with liquid medical oxygen tankers has left for Maharashtra from Vizag.
Railways continues to serve the nation in difficult times by transporting essential commodities and driving innovation to ensure the wellbeing of all citizens. pic.twitter.com/4t7ZKbjeIT
— Piyush Goyal (@PiyushGoyal) April 22, 2021
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಆರ್ಐಎನ್ಎಲ್ನಿಂದ ಹೊರ ಬರಲು ಸಿದ್ಧವಾಗಿರುವ ರೈಲಿನ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ದ್ರವ ವೈದ್ಯಕೀಯ ಆಮ್ಲಜನಕ ಟ್ಯಾಂಕರ್‌ಗಳನ್ನು ತುಂಬಿದ ಮೊದಲ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲು ವೈಜಾಗ್‌ನಿಂದ ಮಹಾರಾಷ್ಟ್ರಕ್ಕೆ ತೆರಳಿದೆ. ರೈಲ್ವೆ ಅಗತ್ಯ ಸಮಯದಲ್ಲಿ ಸರಕುಗಳನ್ನು ಸಾಗಿಸುವ ಮೂಲಕ ಮತ್ತು ಎಲ್ಲಾ ನಾಗರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹೊಸತನವನ್ನು ಮೈಗೂಡಿಸಿಕೊಂಡು ತುರ್ತು ಸಮಯದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
Oxygen Express trains getting prepared to leave with Liquid Medical Oxygen (LMO) from Visakhapatanam & Bokaro today for Maharashtra & UP respectively
Green Corridor created from Lucknow to Varanasi covering the distance of 270km in 4 hrs 20 minutes
Read: https://t.co/pwzVyGAmcX
— PIB India (@PIB_India) April 22, 2021
ರೈಲ್ವೆ ಇಲಾಖೆ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಉತ್ಪಾದಿಸುವ ಉಕ್ಕಿನ ಸ್ಥಾವರಗಳಿಂದ ಆಕ್ಸಿಜನ್ ರೈಲು ಮೂಲಕ ಆಕ್ಸಿಜನ್ ಸಾಗಿಸುತ್ತಿದೆ.
ರೈಲ್ವೆ ಅಗತ್ಯ ಸರಕುಗಳನ್ನು ಸಾಗಿಸುತ್ತದೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಸಹ ಇದೇ ರೀತಿ ಅಗತ್ಯ ವಸ್ತುಗಳನ್ನು ಸಾಗಿಸಿದ್ದು ತುರ್ತು ಸಂದರ್ಭಗಳಲ್ಲಿ ರಾಷ್ಟ್ರದ ಸೇವೆಯನ್ನು ಮುಂದುವರೆಸಿದೆ. ಈ ಬಾರಿ ದೇಶದ ವಿವಿಧ ಭಾಗಗಳಿಗೆ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ಮೂಲಕರೋಗಿಗಳಿಗೆ ಮತ್ತು ವಿವಿಧ ಆಸ್ಪತ್ರೆಗಳಿಗೆ ಸಹಾಯ ಮಾಡುತ್ತದೆ ಎಂದು ರೈಲ್ವೆ ಹೇಳಿದೆ.
ಈ ಕಾರ್ಯವನ್ನು ನಿರ್ವಹಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಚೇತನ್ ಶ್ರೀವಾಸ್ತವ ನೇತೃತ್ವದ ವಾಲ್ಟೇರ್ ತಂಡವನ್ನು ಜನರಲ್ ಮ್ಯಾನೇಜರ್ ವಿದ್ಯಾ ಭೂಷಣ್ ಅಭಿನಂದಿಸಿದ್ದಾರೆ.
(India’s Oxygen Express train made its first run on Thursday from Visakhapatnam to Maharashtra)