Viral Video: ರಾಯಚೂರು: ತರಕಾರಿ, ಸೊಪ್ಪು ಕಾಲಿಂದ ಒದ್ದ ಪಿಸಿಐ ಅಮಾನತು

ವೀಕೆಂಡ್ ಲಾಕ್ ಡೌನ್ ಇದ್ದರೂ ಕೆಲವು ಮಹಿಳೆಯರು ತರಕಾರಿ ಸೊಪ್ಪು ಮಾರಾಟ ಮಾಡುತ್ತಿದ್ದರು. ಏಕಾಏಕೀ ಬಂದು ತರಕಾರಿ ಹಾಗೂ ಸೊಪ್ಪನ್ನು ಕಾಲಿನಿಂದ ಒದ್ದ ಪಿಎಸ್ಐ ಅಜಂ ದರ್ಪ ಮೆರೆದಿದ್ದರು. ಅವರು ಕಾಲಿನಿಂದ ತರಕಾರಿ ಮತ್ತು ಸೊಪ್ಪನ್ನು ಒದೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Viral Video: ರಾಯಚೂರು: ತರಕಾರಿ, ಸೊಪ್ಪು ಕಾಲಿಂದ ಒದ್ದ ಪಿಸಿಐ ಅಮಾನತು
ಕಾಲಿಂದ ಒದೆಯುತ್ತಿರುವ ದೃಶ್ಯ
Follow us
TV9 Web
| Updated By: guruganesh bhat

Updated on: Jun 20, 2021 | 8:20 PM

ರಾಯಚೂರು: ವಾರಾಂತ್ಯದ ಕರ್ಫ್ಯೂ ಲಾಕ್ ಡೌನ್ ಇದ್ದರೂ ಸಹ ತರಕಾರಿ, ಸೊಪ್ಪು ಮಾರಾಟ ಮಾಡುತ್ತಿದ್ದ ಕಾರಣ ತರಕಾರಿ ಮತ್ತು ಸೊಪ್ಪನ್ನು ಒದ್ದ ಸದರ್ ಬಜಾರ್ ಪಿಎಸ್ಐ ಅಜಂರನ್ನು ಅಮಾನತುಗೊಳಿಸಲಾಗಿದೆ. ರಾಯಚೂರು ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ನಡೆದಿದ್ದ ಘಟನೆಗೆ ಸಂಬಂಧಿಸಿ ಎಸಿಪಿ ಪ್ರಕಾಶ ನಿಕ್ಕಂ ಈ ಆದೇಶ ಹೊರಡಿಸಿದ್ದಾರೆ.

ವೀಕೆಂಡ್ ಲಾಕ್ ಡೌನ್ ಇದ್ದರೂ ಕೆಲವು ಮಹಿಳೆಯರು ತರಕಾರಿ ಸೊಪ್ಪು ಮಾರಾಟ ಮಾಡುತ್ತಿದ್ದರು. ಏಕಾಏಕೀ ಬಂದು ತರಕಾರಿ ಹಾಗೂ ಸೊಪ್ಪನ್ನು ಕಾಲಿನಿಂದ ಒದ್ದ ಪಿಎಸ್ಐ ಅಜಂ ದರ್ಪ ಮೆರೆದಿದ್ದರು. ಅವರು ಕಾಲಿನಿಂದ ತರಕಾರಿ ಮತ್ತು ಸೊಪ್ಪನ್ನು ಒದೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕೋಲಾರ: ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್ ಚಾನೆಲ್ ವರದಿಗಾರ

ಕೋಲಾರ: ಯೂಟ್ಯೂಬ್​ ಚಾನಲ್​ ಒಂದರ ವರದಿಗಾರನೊಬ್ಬ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್​ ನಗರದಲ್ಲಿ ನಡೆದಿದೆ. ವಿ.ಟಿವಿ ಹೆಸರಿನ ಯೂಟ್ಯೂಬ್​ ಚಾನಲ್​ನ ವರದಿಗಾರ ಶ್ರೀಧರ್​(45) ಆತ್ಮಹತ್ಯೆಗೆ ಶರಣಾದ ವರದಿಗಾರ. ಕಳೆದ ಹಲವು ವರ್ಷಗಳಿಂದ ಕೆಜಿಎಫ್​ ನಗರದಲ್ಲಿ ಕೆಲವು ಸ್ಥಳೀಯ ಪತ್ರಿಕೆಗಳು ಹಾಗೂ ಯೂಟ್ಯೂಬ್​ ಚಾನಲ್​ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್​ ಸಕ್ರಿಯ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಈ ನಡುವೆ ಕೆಜಿಎಫ್​ನ ಬೆಮೆಲ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಕರೆದು ವಿಚಾರಣೆ ನಡೆಸಿದ್ದರು ಎನ್ನಲಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಎನ್ನಲಾಗಿದೆ.

ಬೆಮೆಲ್​ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಧರ್​ ಅವರನ್ನು ನಿನ್ನೆ ವಿಚಾರಣೆ ನಡೆಸಿದ್ದರು, ಜೊತೆಗೆ ಕರೆದಾಗ ವಿಚಾರಣೆ ಬರುವಂತೆ ಹೇಳಿ ಕಳಿಸಿದ್ದರು. ನಿನ್ನೆ ರಾತ್ರಿ ವಿಚಾರಣೆ ಮುಗಿಸಿಕೊಂಡು ಬಂದಿದ್ದ ಶ್ರೀಧರ್​ ಇಂದು ಬೆಳಗ್ಗೆ ಮನೆಯಿಂದ ಬಂದವರೇ ಕೆಜಿಎಫ್​ ರಾಬರ್ಟ್​ಸನ್​ ಪೇಟೆ ಬಸ್​ ನಿಲ್ದಾಣದ ಬಳಿ ಇರುವ ತಮ್ಮ ವಿಟಿವಿ ಯೂಟ್ಯೂಬ್​ ಚಾನಲ್​ನ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ತಮ್ಮ ಡೆತ್​ ನೋಟ್​ನಲ್ಲಿ ಶ್ರೀಧರ್​ ತಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವೆಂದು ಬರೆದುಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಬರ್ಟ್​ಸನ್​ ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷಿಗಳು ಬೇಕಿದ್ದ ಹಿನ್ನೆಲೆ ಕರೆದು ವಿಚಾರಣೆೆಗೆಂದು ಕರೆದಿದ್ದೆವು. ಅವರಿಗೆ ಯಾವುದೇ ಒತ್ತಡ ಹಾಕಿರಲಿಲ್ಲ. ಅವರಿಂದ ಇನ್ನೂ ಸಾಕಷ್ಟು ಮಾಹಿತಿ ಪಡೆಯಬೇಕಿತ್ತು. ಅಷ್ಟರಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆಸುತ್ತೇವೆ‘ ಎಂದು ಡಿವೈಎಸ್ಪಿ ಉಮೇಶ್​ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು 4,517 ಜನರಿಗೆ ಕೊವಿಡ್ ದೃಢ, 120 ಜನರು ನಿಧನ; ಪಾಸಿಟಿವಿಟಿ ದರ ಶೇ 2.58 Covishield: ವಿದೇಶಗಳಿಗೆ ತೆರಳುವವರಿಗೆ 28 ದಿನಕ್ಕೆ 2ನೇ ಡೋಸ್ ಕೊವಿಡ್ ಲಸಿಕೆ; ಜುಲೈ 22ರಿಂದಲೇ ಆರಂಭ

(PSI suspended in Raichuru for kick the vegetables in leg on weekend curfew)

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?