ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ
ಮಟನ್​ ಪ್ರಾತಿನಿಧಿಕ ಚಿತ್ರ

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ.

TV9kannada Web Team

| Edited By: Lakshmi Hegde

Jun 26, 2021 | 4:50 PM

ಜೈಪುರ​: ಒಂದು ಮದುವೆ ಮುರಿಯಬೇಕು ಎಂದರೆ ಅಷ್ಟು ಬಲವಾದ ಕಾರಣ ಇರಬೇಕು. ಅದರಲ್ಲೂ ವಿವಾಹ ಸಮಾರಂಭದ ದಿನವೇ ಆ ಮದುವೆ ಮುರಿದು ಬೀಳುವುದು ಅಪರೂಪವೇ ಸರಿ. ಅಂಥ ಬಲವಾದ ಕಾರಣ ಇದ್ದರೆ ಮಾತ್ರ ಹಾಗೆಲ್ಲ ಆಗುತ್ತದೆ. ಆದರೆ ಒಡಿಶಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇನ್ನೇನು ಹಸೆಮಣೆ ಏರಬೇಕಿದ್ದ ವಧು-ವರರು ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ದಿನವೇ ಬೇರಾಗಿದ್ದಾರೆ.

ಮದುವೆಯಲ್ಲಿ ಮಟನ್​ ಮಾಡಿಸಿಲ್ಲ ಎಂಬ ಕಾರಣಕ್ಕೆ ಈ ವರ ತನಗೆ ಮದುವೆಯೇ ಬೇಡ ಎಂದಿದ್ದಾನೆ. ಅಲ್ಲದೆ, ಮದುವೆಯನ್ನು ಧಿಕ್ಕರಿಸಿ ಮನೆಗೆ ಹೋಗುವ ಮೊದಲು ಬೇರೆ ಯುವತಿಯನ್ನು ಮದುವೆಯಾಗಿದ್ದಾರೆ. 27ವರ್ಷದ ಈ ವರನ ಹೆಸರು ರಮಾಕಾಂತ್​ ಪಾತ್ರಾ..ಜೈಪುರದ ಸುಕಿಂದಾದ ನಿವಾಸಿ. ಬಾಂಧಾಗಾಂವ್​​ನ ಯುವತಿಯನ್ನು ವರಿಸಲು ಆ ಗ್ರಾಮಕ್ಕೆ ಆಗಮಿಸಿದ್ದ. ವರನ ಕಡೆಯವರೊಂದಿಗೆ ಬಂದ ಮೆರವಣಿಗೆಯಲ್ಲಿ ಇದ್ದವರಿಗೆ ಮೊದಲು ಊಟ ಆಗಲಿ ಎಂದು ಊಟಕ್ಕೆಂದು ಸಿದ್ಧತೆ ಮಾಡಿದ್ದಲ್ಲಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಗೆ ಹೋಗುತ್ತಿದ್ದಂತೆ ವರನ ಸಂಬಂಧಿಕರು, ಮೆರವಣಿಗೆಯಲ್ಲಿ ಇದ್ದವರು ಮೊದಲು ಮಟನ್​ ಕರ್ರಿಗೆ ಬೇಡಿಕೆಯಿಟ್ಟರು. ಆದರೆ ವಧುವಿನ ಕಡೆಯವರು ಮಟನ್ ಮಾಡಿಸಿರಲಿಲ್ಲ. ಇದೇ ಕಾರಣಕ್ಕೆ ಜಗಳ ಶುರುವಾಯಿತು. ವರನೂ ಈ ವಾಗ್ವಾದದಲ್ಲಿ ಪಾಲ್ಗೊಂಡು ತಮ್ಮವರ ಪರವಾಗಿ ವಾದಕ್ಕೆ ನಿಂತ. ಬರುಬರುತ್ತ ಪರಿಸ್ಥಿತಿ ತೀರ ಬಿಗಾಡಿಯಿಸಿತು. ನಂತರ ವರ ತನಗೆ ಮದುವೆಯೇ ಬೇಡವೆಂದು ಎದ್ದು ನಡೆದ.

ವರ ಮತ್ತು ಆತನ ಕಡೆಯವರು ಅಂದು ಒಂದು ದಿನದ ಮಟ್ಟಿಗೆ ಅದೇ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡರು. ಮರುದಿನ ಮನೆಗೆ ಹೋಗುವ ಮೊದಲು ಆತ ಫುಲುಜಾರಾ ಎಂಬಲ್ಲಿ ಬೇರೆ ಯುವತಿಗೆ ತಾಳಿ ಕಟ್ಟಿದ್ದಾನೆ. ಈ ಬಗ್ಗೆ ಪೊಲೀಸ್​ ಕಂಪ್ಲೇಂಟ್ ದಾಖಲಾಗಿಲ್ಲ.

ಇದನ್ನೂ ಓದಿ: ಡೆಲ್ಟಾ ಪ್ಲಸ್ ಡೆಲ್ಟಾ ರೂಪಾಂತರಿಗೆ ತಮಿಳುನಾಡಿನಲ್ಲಿ ಒಬ್ಬರು ಬಲಿ, ಸುರಕ್ಷತೆ ಕ್ರಮ ಹೆಚ್ಚಿಸಲು ಕೇಂದ್ರದ ನಿರ್ದೇಶನ

Follow us on

Related Stories

Most Read Stories

Click on your DTH Provider to Add TV9 Kannada