Farmers Protest: ‘ಆಂದೋಲನ ನಿಲ್ಲಿಸಿ ಬನ್ನಿ, ಮಾತುಕತೆಗೆ ನಾವು ಸಿದ್ಧರಿದ್ದೇವೆ’-ಪ್ರತಿಭಟನಾ ನಿರತ ರೈತರಿಗೆ ಕರೆ ನೀಡಿದ ಕೃಷಿ ಸಚಿವ
ಪ್ರತಿಭಟನೆ ಶುರುವಾಗಿ ಏಳು ತಿಂಗಳು ಕಳೆದ ಈ ದಿನವನ್ನು ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ದಿನವನ್ನಾಗಿ ರೈತರು ಆಚರಿಸಿದ್ದಾರೆ. ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರಗಳಲ್ಲಿ ಬೀಡುಬಿಟ್ಟಿರುವ ವಿವಿಧ ರೈತ ಸಂಘಟನೆಗಳ ಸದಸ್ಯರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಹೊರತು ನಾವು ಹಿಂತಿರುಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಪ್ರಾರಂಭಿಸಿ ಇಂದಿಗೆ ಏಳು ತಿಂಗಳ ಪೂರ್ಣಗೊಂಡಿದ್ದು, ಇನ್ನಾದರೂ ಅವರ ಆಂದೋಲನವನ್ನು ಹಿಂಪಡೆಯಬೇಕು. ಕೃಷಿಕಾಯ್ದೆಗಳಲ್ಲಿರುವ ಯಾವುದೇ ನಿಬಂಧನೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇಂದು ಪ್ರತಿಭಟನೆ ಶುರು ಮಾಡಿ ಏಳು ತಿಂಗಳು ಕಳೆದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ರಾಜಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ನೀಡಿತ್ತು. ಹಾಗಾಗಿ ಇಂದು ದೆಹಲಿ ಗಡಿಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಕೃಷಿ ಸಚಿವ ಸಚಿವ ನರೇಂದ್ರ ಸಿಂಗ್ ತೋಮರ್, ಆಂದೋಲನವನ್ನು ಹಿಂಪಡೆಯಲು ರೈತ ಸಂಘಟನೆಗಳ ಮುಖಂಡರು ಮುಂದಾಗಬೇಕು. ನೂತನ ಕೃಷಿ ಕಾಯ್ದೆಗಳ ಯಾವುದೇ ನಿಬಂಧನೆಗಳ ಬಗ್ಗೆ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆ ಶುರುವಾಗಿ ಏಳು ತಿಂಗಳು ಕಳೆದ ಈ ದಿನವನ್ನು ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ದಿನವನ್ನಾಗಿ ರೈತರು ಆಚರಿಸಿದ್ದಾರೆ. ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರಗಳಲ್ಲಿ ಬೀಡುಬಿಟ್ಟಿರುವ ವಿವಿಧ ರೈತ ಸಂಘಟನೆಗಳ ಸದಸ್ಯರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಹೊರತು ನಾವು ಹಿಂತಿರುಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹಾಗೇ, ಇಂದು ವಿವಿಧ ರಾಜ್ಯಗಳಲ್ಲಿ ಆಯಾ ಪ್ರದೇಶದ ರೈತ ಸಂಘಟನೆಗಳು ರಾಜಭವನದ ಎದುರು ಪ್ರತಿಭಟನೆ ನಡೆಸಿದ್ದು, ನಂತರ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ ಸಲ್ಲಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಚಂಡೀಗಡ್-ಮೊಹಾಲಿ ಗಡಿಯಲ್ಲಿ ಬ್ಯಾರಿಕೇಡ್ ಮುರಿದ ರೈತರು ಇಂದು ಚಂಡೀಗಡ್-ಮೊಹಾಲಿ ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿತ್ತು. ಪಂಜಾಬ್ ರಾಜ್ಯಪಾಲರ ನಿವಾಸ ರಾಜಭವನ ತಲುಪಲು ಪ್ರಯತ್ನಿಸಿದ ರೈತರು ಪೊಲೀಸರ ಬ್ಯಾರಿಕೇಡ್ಗಳನ್ನೂ ಮುರಿದರು. ಅವರನ್ನು ನಿಯಂತ್ರಿಸಲು ಪೊಲೀಸರು ನೀರು ಹಾರಿಸಿದ್ದಾರೆ. ಅದರಲ್ಲೊಬ್ಬ ರೈತನಂತೂ ಜಲ ಫಿರಂಗಿ ವಾಹನವನ್ನೇ ಹತ್ತಿ ಕುಳಿತಿದ್ದ. ಪಂಜಾಬ್ನಲ್ಲಿ ಇವತ್ತಿನ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರೂ ಪಾಲ್ಗೊಂಡಿದ್ದರು. ರೈತರು ರಾಜಭವನಕ್ಕೆ ಕಾಲ್ನಡಿಗೆ ಹೊರಡುವುದಕ್ಕೂ ಮೊದಲು ಮೊಹಾಲಿಯ ಅಂಬ್ ಸಾಹಿಬ್ ಗುರುದ್ವಾರದ ಬಳಿ ಸೇರಿದ್ದರು.
मैं सभी किसान यूनियन के लोगों को कहना चाहता हूँ कि उनको अपना आंदोलन समाप्त करना चाहिए।
भारत सरकार कानून के किसी भी प्रावधान पर बात करने के लिए भी तैयार है और उसका निराकरण करने के लिए भी तैयार है। pic.twitter.com/VUxrAh8MZl
— Narendra Singh Tomar (@nstomar) June 26, 2021
ಇದನ್ನೂ ಓದಿ: 2 ತಿಂಗಳ ಬಳಿಕ ಹೊರಬಿತ್ತು ಸೀಕ್ರೆಟ್ ಮದುವೆ ವಿಷಯ; ಏಪ್ರಿಲ್ನಲ್ಲೇ ಹಸೆಮಣೆ ಏರಿದ್ದ ಸೆಲೆಬ್ರಿಟಿ ಜೋಡಿ
Published On - 4:07 pm, Sat, 26 June 21