AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಆಕ್ಸಿಜನ್ ಕೊರತೆ ವಿವಾದ: ಪ್ಯಾನೆಲ್​ನ ಮಧ್ಯಂತರ ವರದಿ ಬಿಡುಗಡೆಯಾದ ನಂತರ ಆಪ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ

ಮಧ್ಯಂತರ ವರದಿಯು ಬಹಿರಂಗಗೊಂಡ ನಂತರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ‘ಕ್ರಿಮಿನಲ್ ಸ್ವರೂಪದ ನಿರ್ಲಕ್ಷ್ಯ’ ಎಂದು ಹೇಳಿತು. ಆಪ್ ಧುರೀಣ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸದರಿ ವರದಿಯನ್ನು ಬೋಗಸ್ ಮತ್ತು ಬಿಜೆಪಿ ಕಚೇರಿಯಲ್ಲಿ ತಯಾರಿಸಿದ್ದು ಅಂತ ಹೇಳಿದರು.

ದೆಹಲಿ ಆಕ್ಸಿಜನ್ ಕೊರತೆ ವಿವಾದ: ಪ್ಯಾನೆಲ್​ನ ಮಧ್ಯಂತರ ವರದಿ ಬಿಡುಗಡೆಯಾದ ನಂತರ ಆಪ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 26, 2021 | 8:17 PM

Share

ನವದೆಹಲಿ: ಕೊವಿಡ್-19ಎರಡನೇ ಅಲೆ ದೆಹಲಿಯನ್ನು ಅಪ್ಪಳಿಸಿದಾಗ ನಗರದ ಆಕ್ಸಿಜನ್ ಬೇಡಿಕೆಯನ್ನು ಉದ್ದೇಶಪೂರ್ವಕವಾಗಿ ಉತ್ಪ್ರೇಕ್ಷಿಸಿ ಹೇಳಿದರೆಂದು ತೀವ್ರ ಟೀಕೆಗೊಳಗಾಗಿರರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು, ತಾನು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ, ದೆಹಲಿ ತೀವ್ರ ಸ್ವರೂಪದ ಆಮ್ಲಜನಕ ಕೊರತೆ ಎದುರಾಗಿದ್ದು ನಿಜ ಎಂದು ಹೇಳಿದ್ದು ಈ ವಿಷಯದ ಮೇಲೆ ರಾಜಕಾರಣ ಮಾಡುವ ಬದಲು ಮೂರನೇ ಅಲೆ ಎದುರಾದಾಗ ಯಾರೂ ಕಷ್ಟಕ್ಕೆ ಸಿಲಕುದ ಹಾಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಅಪೀಲ್ ಮಾಡಿದ ನಂತರ ಶನಿವಾರದಂದು ಹೇಳಿಕೆಯೊಂದನ್ನು ನೀಡಿರುವ ಎಐಐಎಮ್​ಎಸ್ ನಿರ್ದೇಶಕ ರಣದೀಪ್ ಗುಲೇರಿಯ ಅವರು ಆಕ್ಸಿಜನ್ ಬೇಡಿಕೆ ಬಗ್ಗೆ ಸುಪ್ರೀಮ್ ಕೋರ್ಟ್​ನ ಆಡಿಟ್ ಒಂದು ಮಧ್ಯಂತರ ವರದಿಯಾಗಿದೆಯೇ ಹೊರತು ಅಂತಿಮ ಆದೇಶವಲ್ಲ ಎಂದು ಹೇಳಿದ್ದಾರೆ.

ಇದೇ ವಿಷಯದ ಹಿನ್ನೆಲೆಯಲ್ಲಿ ಆಮ್​ ಆದ್ಮಿ ಪಾರ್ಟಿ ಮತ್ತು ಬಿಜೆಪಿ ಪಕ್ಷಗಳ ನಾಯಕರು ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಟ್ವೀಟ್ ಮಾಡಿರುವ ಕೇಜ್ರಿವಾಲ್, ಸಂಬಂಧಪಟ್ಟವರೆಲ್ಲ ಆಕ್ಸಿಜನ್ ವಿಷಯವನ್ನೇ ಚರ್ಚಿಸುತ್ತಾ ಕಾಲಹರಣ ಮಾಡಿದರೆ, ವೈರಸ್​ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದಿದ್ದಾರೆ.

ಸುಪ್ರೀಮ್ ಕೋರ್ಟ್ ರಚಿಸಿದ ಐವರು ಸದಸ್ಯರ ಪ್ಯಾನೆಲ್​ ನೇತೃತ್ವ ವಹಿಸಿರುವ ಗುಲೇರಿಯ ಅವರು ಪಿಟಿಐ ಜೊತೆ ಶನಿವಾರ ಮಾತಾಡಿ,‘ ಇದೊಂದು ಮಧ್ಯಂತರ ವರದಿಯಾಗಿದೆ. ಆಕ್ಸಿಜನ್ ಬೇಡಿಕೆ ಒಂದೇ ತೆರನಾಗಿರದೆ, ಪ್ರತಿದಿನ ಬದಲಾಗುತ್ತಿರುತ್ತದೆ. ಈ ವಿಷಯ ಸದ್ಯಕ್ಕೆ ನ್ಯಾಯಾಂಗ ವಿಚಾರಣೆಯಲ್ಲಿದೆ,’ ಎಂದು ಹೇಳಿದರು.

ಮಧ್ಯಂತರ ವರದಿಯು ಬಹಿರಂಗಗೊಂಡ ನಂತರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ‘ಕ್ರಿಮಿನಲ್ ಸ್ವರೂಪದ ನಿರ್ಲಕ್ಷ್ಯ’ ಎಂದು ಹೇಳಿತು. ಆಪ್ ಧುರೀಣ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸದರಿ ವರದಿಯನ್ನು ಬೋಗಸ್ ಮತ್ತು ಬಿಜೆಪಿ ಕಚೇರಿಯಲ್ಲಿ ತಯಾರಿಸಿದ್ದು ಅಂತ ಹೇಳಿದರು.

ಒಂದು ದಿನದ ನಂತರ ಟ್ವೀಟ್​ ಮಾಡಿದ ಕೇಜ್ರವಾಲ್ ಅವರು, ‘ಆಕ್ಸಿಜನ್ ಕುರಿತ ನಿಮ್ಮಗಳ ಬಡಿದಾಟ ಮುಗಿದಿದ್ದರೆ ನಾವು ಕೆಲಸ ಆರಂಭಿಸೋಣವೇ? ಮೂರನೇ ಅಲೆ ಎದುರಾದಾಗ ನಾವೆಲ್ಲ ಸೇರಿ ಒಬ್ಬೇಒಬ್ಬ ವ್ಯಕ್ತಿ ಆಕ್ಸಿಜನ್ ಕೊರತೆಯಿಂದ ಕಷ್ಟಕ್ಕೆ ಸಿಲುದಂಥ ವ್ಯವಸ್ಥೆಯನ್ನು ನಿರ್ಮಿಸೋಣ,’ ಎಂದು ಹೇಳಿದರು.

‘ಎರಡನೇ ಅಲೆ ಜೊತೆ ನಾವು ಹೋರಾಡುವಾಗ ಆಕ್ಸಿಜನ್ ತೀವ್ರ ಕೊರತೆ ಎದುರಾಗಿತ್ತು. ಅಂಥ ಸ್ಥಿತಿ ಮೂರನೇ ಅಲೆಯಲ್ಲಿ ತಲೆದೋರಬಾರದು. ನಾವು ಪರಸ್ಪರ ಕಚ್ಚಾಡುತ್ತಿದ್ದರೆ, ಕೊರೋನಾ ನಮ್ಮನ್ನು ಸೋಲಿಸಿಬಿಡುತ್ತದೆ,’ ಎಂದು ಹಿಂದಿಯಲ್ಲಿ ಮಾಡಿದ ಟ್ವೀಟ್​ನಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.

ಏಪ್ರಿಲ್ 30 ರಂದು ದೆಹಲಿ ಸರ್ಕಾರ 700 ಮೆಟ್ರಿಕ್ ಟನ್​ ಆಕ್ಸಿಜನ್​ಗಾಗಿ ಮಾಡಿದ ಬೇಡಿಕೆ ತಪ್ಪು ಸೂತ್ರವೊಂದರ ಮೇಲೆ ಆಧಾರವಾಗಿತ್ತು ಎಂದು ಪ್ಯಾನೆಲ್ ಹೇಳಿದೆ.

ಪ್ಯಾನೆಲ್​ನ ಇಬ್ಬರು ಸದಸ್ಯರಾದ-ದೆಹಲಿ ಸರ್ಕಾರ ಗೃಹ ಖಾತೆಯ ಪ್ರಧಾನ ಕಾರ್ಯದರ್ಶಿ ಬಿ ಎಸ್ ಭಲ್ಲಾ ಮತ್ತು ಮ್ಯಾಕ್ಸ್ ಹೆಲ್ತ್ ಕೇರ್​ನ ಸಂದೀಪ್ ಬುಧಿರಾಜಾ ಅವರು ವರದಿಯಲ್ಲಿನ ತೀರ್ಮಾನಗಳನ್ನು ಪ್ರಶ್ನಿಸಿದ್ದಾರೆ.

ವರದಿಗೆ ಜೊತೆ ಭಲ್ಲಾ ಅವರು ಮೇ 31 ರಂದು ಮಾಡಿರುವ ಕಾಮೆಂಟ್​ಗಳನ್ನು ಲಗತ್ತಿಸಲಾಗಿದೆ. ಅದರಲ್ಲಿ ಅವರು ಉಪ-ಸಮಿತಿಯು ತನಗೆ ನೀಡಿರುವ ಜವಾಬ್ದಾರಿಯ ಮೇಲೆ ಗಮನ ಕೇಂದ್ರೀಕರಿಸುವ ಬದಲು ಮೇ 6ರ ಸುಪ್ರೀಮ್ ಕೋರ್ಟ್ ಆದೇಶದ ಷರತ್ತುಗಳಿಂದ ವಿಮುಖವಾಗಿತ್ತು ಎಂದು ಹೇಳಿದ್ದಾರೆ.

ಹಾಸಿಗೆಯ ಆಕ್ಯುಪೆನ್ಸಿಯ ಪ್ರಕಾರ ವೈದ್ಯಕೀಯ ಆಮ್ಲಜನಕದ ಬಳಕೆ ಏಪ್ರಿಲ್ ಅಂತ್ಯದಲ್ಲಿ 250 ಟನ್, ಮೇ ಮೊದಲ ವಾರದಲ್ಲಿ 470-490 ಮೆಟ್ರಿಕ್ ಟನ್ ಮತ್ತು ಮೇ 10 ರಂದು ಹೇಳಿಕೊಂಡಂತೆ 900 ಮೆಟ್ರಿಕ್ ಟನ್ ಎಂದು ಉಪ-ಸಮಿತಿ ಹೇಳಿರುವುದನ್ನು ಭಲ್ಲಾ ಆಕ್ಷೇಪಿಸಿದ್ದಾರೆ

ದೆಹಲಿ ಸರ್ಕಾರವು ‘ಉತ್ಪ್ರೇಕ್ಷಿತ’ ಆಮ್ಲಜನಕ ಅವಶ್ಯಕತೆಯ ಬೇಡಿಕೆ ಸಂಬಂಧಿಸಿದಂತೆ ಭಲ್ಲಾ ಅವರು, ‘ಭಾರತ ಸರ್ಕಾರ / ಐಸಿಎಂಆರ್ ನಿಗದಿಪಡಿಸಿದ ಪ್ರಮಾಣಿತ ಆಮ್ಲಜನಕದ ಅವಶ್ಯಕತೆಗೆ ಅನುಗುಣವಾಗಿ 700 ಮೆಟ್ರಿಕ್ ಟನ್ ಲೆಕ್ಕಾಚಾರವನ್ನು ಮಾಡಲಾಗಿದೆ ಎಂದು ಜಿಎನ್‌ಸಿಟಿಡಿ ಸ್ಪಷ್ಟಪಡಿಸಿದೆ, ಇದು ನಿಮಿಷಕ್ಕೆ 24 ಲೀಟರ್ (ಎಲ್ಪಿಎಂ) ಐಸಿಯು ಹಾಸಿಗೆಗಳಿಗೆ ಮತ್ತು ಐಸಿಯು-ರಹಿತ ಹಾಸಿಗೆಗಳಿಗೆ 10 ಎಲ್ಪಿಎಂ,’ ಎಂದು ಹೇಳಿದ್ದಾರೆ.

ಗುಲೇರಿಯ, ಭಲ್ಲಾ ಮತ್ತು ಬುಧಿರಾಜಾ ಅವರಲ್ಲದೆ, ಜಲ ಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್ ಮತ್ತು ಪಿಈಎಸ್​ಒ ನಿಯಂತ್ರಕರಾದ ಸಂಜಯ ಕುಮಾರದ ಸಿಂಗ್ ಅಪೆಕ್ಸ್ ಕೋರ್ಟ್ ರಚಿಸಿರುವ ಪ್ಯಾನೆಲ್​ನ ಭಾಗವಾಗಿದ್ದಾರೆ.

ಇದನ್ನೂ ಓದಿ: Oxygen Shortage: ಕೊವಿಡ್​ ಕೇಂದ್ರದಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪನೆ; ರಾಷ್ಟ್ರರಾಜಧಾನಿಯಲ್ಲೇ ಮೊದಲ ಪ್ರಯೋಗ ಇದು

Published On - 8:17 pm, Sat, 26 June 21

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್