AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಕೊರೊನಾ ಲಸಿಕೆ ಪಡೆದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ತುತ್ತು

ಬುಧವಾರ, ದೇಬಂಜನ್ ದೇಬ್ ಎಂಬ ವ್ಯಕ್ತಿಯೊಬ್ಬ ತಾನು ಐಎಎಸ್ ಅಧಿಕಾರಿ, ಸಾವಿರಾರು ಲಸಿಕಾ ಕೇಂದ್ರಗಳನ್ನು ಮೇಲ್ವಿಚಾರಣೆ ನಡೆಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಆತನ ಲಸಿಕಾ ಕೇಂದ್ರದಲ್ಲಿ ಮಿಮಿ ಚಕ್ರವರ್ತಿ ಲಸಿಕೆ ಪಡೆದು ವಿಷಯ ತಿಳಿದಬಳಿಕ ಆತನನ್ನು ಬಂಧಿಸಲಾಗಿದೆ.

ನಕಲಿ ಕೊರೊನಾ ಲಸಿಕೆ ಪಡೆದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ತುತ್ತು
ಮಿಮಿ ಚಕ್ರವರ್ತಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 26, 2021 | 9:36 PM

Share

ಕೋಲ್ಕತ್ತಾ: ನಕಲಿ ಕೊರೊನಾ ಲಸಿಕೆಯ ಜಾಲದ ಮೋಸಕ್ಕೆ ಒಳಗಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಿಮಿ ಚಕ್ರವರ್ತಿ ಶನಿವಾರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪಶ್ಚಿಮ ಬಂಗಾಳದ ಜಾದವ್​ಪುರದ ಲೋಕಸಭಾ ಸದಸ್ಯೆಯ ಈ ಅನಾರೋಗ್ಯವು ನಕಲಿ ಲಸಿಕೆಯಿಂದ ಆಗಿದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ, ಮಿಮಿ ಚಕ್ರವರ್ತಿಗೆ ನಿರ್ಜಲೀಕರಣ, ನಿಶ್ಶಕ್ತಿ ಉಂಟಾಗಿದೆ. ಹೊಟ್ಟೆ ನೋವು ಕಂಡುಬಂದಿದ್ದು, ರಕ್ತದೊತ್ತಡ ಕೂಡ ಇಳಿಕೆಯಾಗಿದೆ. ಆದರೆ, ಆಕೆಯ ಆರೋಗ್ಯ ಈಗ ಸುಸ್ಥಿತಿಯಲ್ಲಿದೆ ಎಂದು ಕುಟುಂಬದವರು ಹೇಳಿದ್ದಾರೆ. ನಟಿ ಹಾಗೂ ರಾಜಕಾರಣಿ ಆಗಿರುವ ಮಿಮಿ ಚಕ್ರವರ್ತಿ ಲಿವರ್ ಸಂಬಂಧಿ ಆರೋಗ್ಯ ಸಮಸ್ಯೆಗೆ ಕೆಲವು ದಿನಗಳ ಹಿಂದೆ ತುತ್ತಾಗಿದ್ದರು.

ಬುಧವಾರ, ದೇಬಂಜನ್ ದೇಬ್ ಎಂಬ ವ್ಯಕ್ತಿಯೊಬ್ಬ ತಾನು ಐಎಎಸ್ ಅಧಿಕಾರಿ, ಸಾವಿರಾರು ಲಸಿಕಾ ಕೇಂದ್ರಗಳನ್ನು ಮೇಲ್ವಿಚಾರಣೆ ನಡೆಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಆತನ ಲಸಿಕಾ ಕೇಂದ್ರದಲ್ಲಿ ಮಿಮಿ ಚಕ್ರವರ್ತಿ ಲಸಿಕೆ ಪಡೆದು ವಿಷಯ ತಿಳಿದಬಳಿಕ ಆತನನ್ನು ಬಂಧಿಸಲಾಗಿದೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಮತ್ತು ಇತರರು ಕಾಸ್ಬಾ ಪ್ರದೇಶದಲ್ಲಿ ಮಂಗಳವಾರ ನಡೆದ ನಕಲಿ ಕೊವಿಡ್ ವ್ಯಾಕ್ಸಿನೇಷನ್ ಶಿಬಿರದಿಂದ ಮೋಸ ಹೋಗಿದ್ದರು . ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ ಜಂಟಿ ಆಯುಕ್ತರಾಗಿ ಸೋಗು ಹಾಕಿ ಶಿಬಿರವನ್ನು ಆಯೋಜಿಸಿದ ಹೊಸೆನ್‌ಪುರದ ದೇಬಂಜನ್ ದೇಬ್ ಎಂಬ 28 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

ಶಿಬಿರದಲ್ಲಿದ್ದ ಜನರಿಗೆ ನಿಜವಾದ ಅಥವಾ ನಕಲಿ ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಕಂಡುಹಿಡಿಯಲು ಪೊಲೀಸರು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದರು. ಸ್ವಸ್ತ ಭವನ ಮತ್ತು ಬಾಗ್ರಿ ಮಾರುಕಟ್ಟೆಯಿಂದ ಹೊರಗಿನಿಂದ ಲಸಿಕೆಗಳನ್ನು ಖರೀದಿಸಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದ. ಅವುಗಳು ನಿಜವಾದ ಲಸಿಕೆಗಳೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ನಾವು ಮಾದರಿಗಳನ್ನು ಕಳುಹಿಸುತ್ತಿದ್ದೇವೆ ”ಎಂದು ಡಿಸಿ (ದಕ್ಷಿಣ ಉಪನಗರ ವಿಭಾಗ) ರಶೀದ್ ಮುನೀರ್ ಖಾನ್ ಹೇಳಿದ್ದರು.

ಟಿಎಂಸಿ ಸಂಸದೆಯ ಪ್ರಕಾರ, ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಶನ್‌ನ ಜಂಟಿ ಆಯುಕ್ತರು ಟ್ರಾನ್ಸ್ಜೆಂಡರ್ ಮತ್ತು ವಿಶೇಷ ಸಾಮರ್ಥ್ಯ ಹೊಂದಿರುವ ಜನರಿಗೆ ಲಸಿಕೆ ಶಿಬಿರವನ್ನು ಆಯೋಜಿಸುತ್ತಿದ್ದಾರೆ ಎಂದು ಅವರು ಆಹ್ವಾನವನ್ನು ಸ್ವೀಕರಿಸಿದ್ದರು.

ಇದನ್ನೂ ಓದಿ: ನಕಲಿ ವ್ಯಾಕ್ಸಿನೇಷನ್ ಶಿಬಿರದಲ್ಲಿ ಮೋಸ ಹೋದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ; ಓರ್ವ ವ್ಯಕ್ತಿಯ ಬಂಧನ

ಲಸಿಕೆ ಹೆಚ್ಚು ಹೆಚ್ಚು ಜನಕ್ಕೆ ನೀಡಿದಷ್ಟೂ ಕೊರೊನಾ ಮೂರನೆ ಅಲೆಯಿಂದ ಬಚಾವಾಗಬಹುದು ಅನ್ನುತ್ತಿದೆ ಅಧ್ಯಯನ ವರದಿ

Published On - 9:32 pm, Sat, 26 June 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ