Oxygen Shortage: ಕೊವಿಡ್​ ಕೇಂದ್ರದಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪನೆ; ರಾಷ್ಟ್ರರಾಜಧಾನಿಯಲ್ಲೇ ಮೊದಲ ಪ್ರಯೋಗ ಇದು

ಏಕಕಾಲದಲ್ಲಿ ಸುಮಾರು 18-20 ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡಬಲ್ಲ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಎಎನ್​​ಐ ವರದಿ ಮಾಡಿದೆ.

Oxygen Shortage: ಕೊವಿಡ್​ ಕೇಂದ್ರದಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪನೆ; ರಾಷ್ಟ್ರರಾಜಧಾನಿಯಲ್ಲೇ ಮೊದಲ ಪ್ರಯೋಗ ಇದು
ಆಕ್ಸಿಜನ್ ಉತ್ಪಾದನಾ ಘಟಕ
Follow us
Lakshmi Hegde
|

Updated on: May 03, 2021 | 3:38 PM

ರಾಷ್ಟ್ರರಾಜಧಾನಿ ದೆಹಲಿಯಲ್ಲಂತೂ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ. ಈಗಾಗಲೇ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ರೋಗಿಗಳು ಆಮ್ಲಜನಕವಿಲ್ಲದೆ ಸಾವನ್ನಪ್ಪಿದ್ದಾರೆ. ಈ ಅವಸ್ಥೆಯನ್ನು ತಪ್ಪಿಸಲು ಪ್ರಯತ್ನಗಳು ಶುರುವಾಗಿದ್ದು, ಅದರ ಮೊದಲ ಹಂತವಾಗಿ ದೆಹಲಿಯ ಅಕ್ಷರಧಾಮ ದೇವಾಲಯದ ಬಳಿ ಇರುವ ಕಾಮನ್​​ವೆಲ್ತ್​​ ಗೇಮ್​ ವಿಲೇಜ್​ ಕ್ರೀಡಾ ಸಂಕೀರ್ಣದಲ್ಲಿ ಆಕ್ಸಿಜನ್ ಘಟಕವುಳ್ಳ ಕೊವಿಡ್ 19 ಕೇಂದ್ರವನ್ನು ನಿರ್ಮಿಸಲಾಗಿದೆ. ಆಕ್ಸಿಜನ್ ಉತ್ಪಾದನಾ ಘಟಕವೂ ಇರುವ ಮೊದಲ ಕೊವಿಡ್ ಕೇಂದ್ರ ಇದಾಗಿದೆ.

ಏಕಕಾಲದಲ್ಲಿ ಸುಮಾರು 18-20 ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡಬಲ್ಲ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಎಎನ್​​ಐ ವರದಿ ಮಾಡಿದೆ. ಸದ್ಯ ಎದುರಾಗಿರುವ ಆಕ್ಸಿಜನ್​ ಕೊರತೆಯನ್ನು ನೀಗಿಸುವ ಸಲುವಾಗಿ ಕೊವಿಡ್ ಕೇಂದ್ರದಲ್ಲಿಯೇ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ ಎಂದು ಈ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಅನುರಾಗ್​ ಮಿಶ್ರಾ ತಿಳಿಸಿದ್ದಾರೆ. ಈ ಘಟಕವನ್ನು ಎಚ್​ಸಿಎಲ್​ ಫೌಂಡೇಶನ್​​ ನೀಡಿದ್ದು, ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನಾವೀಗ ಆಕ್ಸಿಜನ್​ಗಾಗಿ ಪೂರೈಕೆದಾರರ ಮೇಲೆ ಅವಲಂಬಿತರಾಗಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಅದರಲ್ಲೂ ದೆಹಲಿಯಲ್ಲಂತೂ ಹಲವು ಆಸ್ಪತ್ರೆಗಳು ಆಕ್ಸಿಜನ್ ಇಲ್ಲದೆ ಹೈಕೋರ್ಟ್ ಮೆಟ್ಟಿಲನ್ನೂ ಏರಿವೆ. ಇತ್ತೀಚೆಗಷ್ಟೇ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಓರ್ವ ಹಿರಿಯ ವೈದ್ಯ ಸೇರಿ 12 ರೋಗಿಗಳು ಆಕ್ಸಿಜನ್ ಇಲ್ಲದೆ ಮೃತಪಟ್ಟಿದ್ದರು. ನಿನ್ನೆ ಇಲ್ಲಿನ ಆಕಾಶ್​ ಹೆಲ್ತ್​ಕೇರ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆಮ್ಲಜನಕಕ್ಕಾಗಿ ಬೇಡಿಕೆ ಇಟ್ಟಿದೆ. ನಮ್ಮಲ್ಲಿ 250 ರೋಗಿಗಳು ಇದ್ದಾರೆ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೆ ಇದ್ದರೆ ಸಾವು ನೋವಾಗುತ್ತದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದೆ.

COVID care centre with its own oxygen plant to beat the shortage in Delhi

ಇದನ್ನೂ ಓದಿ: ಸುದೀಪ್​ ಇಲ್ಲದೇ 3 ವಾರ ಮೈ ಮರೆತಿದ್ದ ಬಿಗ್​ ಬಾಸ್​ ಮಂದಿಗೆ ಛಾಟಿ ಬೀಸಿದ ಕಿಚ್ಚನ ವಾಯ್ಸ್​ ಮೆಸೇಜ್​

ಬಾಗಲಕೋಟೆಯಲ್ಲಿ ರೆಮ್​ಡೆಸಿವರ್ ಮಾರಾಟ ಮಾಡುತ್ತಿದ್ದ 10 ಜನರ ಬಂಧನ; ಜಿಲ್ಲಾಸ್ಪತ್ರೆ ನಿಷ್ಕಾಳಜಿ ಬಗ್ಗೆ ಮುಂದುವರಿದ ತನಿಖೆ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್