ತಮಿಳುನಾಡಿನಲ್ಲಿ ಡಿಎಂಕೆ ಗೆದ್ದಿದ್ದಕ್ಕೆ ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ; ದೇಗುಲದ ಗೇಟ್ ಬಳಿಯೇ ಕುಸಿದು ಬಿದ್ದರು
ತಮಿಳುನಾಡಿನಲ್ಲಿ ದಶಕಗಳ ನಂತರ ಒಂದು ಹೊಸ ಆಡಳಿತ ಶುರುವಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷವಾಗಿದ್ದ ಡಿಎಂಕೆ ಇನ್ನು ಮುಂದೆ ಆಡಳಿತ ಪಕ್ಷವಾಗಲಿದೆ.
ನಮ್ಮ ಯಾವ್ಯಾವುದೋ ಕೆಲಸವಾಗಲಿ ಎಂದು ವಿವಿಧ ರೂಪದ ಹರಕೆಗಳನ್ನು ಹೊತ್ತು, ಅದನ್ನು ತೀರಿಸುತ್ತೇವೆ. ಹಾಗೇ ಈ ಮಹಿಳೆ ಕೂಡ ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತೇನೆ ಎಂದು ಹರಕೆ ಹೊತ್ತಿದ್ದರು. ಇದೀಗ ಡಿಎಂಕೆ ಪಕ್ಷವೇ ಗೆದ್ದ ಕಾರಣ ತಮ್ಮ ನಾಲಿಗೆಯನ್ನು ಕತ್ತರಿಸಿ, ದೇವರಿಗೆ ಅರ್ಪಿಸಿದ್ದಾರೆ.
ಹೀಗೊಂದು ಕಷ್ಟಕರವಾದ ಹರಕೆ ಹೊತ್ತಿದ್ದಲ್ಲದೆ, ಅದನ್ನು ತೀರಿಸಿದ ಮಹಿಳೆಯ ಹೆಸರು ವನಿತಾ. ಇವರಿಗೆ 32 ವರ್ಷ. 2021ರ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದ್ದು, ಅದರಲ್ಲಿ ಡಿಎಂಕೆಗೆ ಬಹುಮತ ಬಂದಿದೆ. ಹೀಗಾಗಿ ಫಲಿತಾಂಶ ಹೊರಬರುತ್ತಿದ್ದಂತೆ ವನಿತಾ ತಮ್ಮ ಹರಕೆ ಸಲ್ಲಿಸಿದ್ದಾರೆ. ಜನಾದೇಶ ಡಿಎಂಕೆ ಪರವಾಗಿ ಹೊರಬೀಳುತ್ತಿದ್ದಂತೆ ವನಿತಾ ಮುಥಾಲಮ್ಮನ ದೇವಾಲಯಕ್ಕೆ ಹೋಗಿ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಅದನ್ನು ಆ ದೇವರಿಗೆ ಅರ್ಪಿಸಲು ಪ್ರಯತ್ನಿಸಿದ್ದಾಳೆ. ಆದರೆ ಕೊವಿಡ್ 19 ಇರುವ ಕಾರಣಕ್ಕೆ ಅಲ್ಲಿ ಯಾವುದೇ ಪೂಜೆ, ಹರಕೆ ಸಲ್ಲಿಸಲು ಅವಕಾಶ ಇಲ್ಲ. ಹಾಗಾಗಿ ನಾಲಿಗೆಯನ್ನು ದೇಗುಲದ ಬಾಗಿಲನಲ್ಲಿರುವ ಗೇಟ್ ಬಳಿ ಇಟ್ಟಿದ್ದರು. ಅಷ್ಟರಲ್ಲಿ ಆಕೆಯೂ ಸಹ ಎಚ್ಚರವಿಲ್ಲದೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಅದನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.
ತಮಿಳುನಾಡಿನಲ್ಲಿ ದಶಕಗಳ ನಂತರ ಒಂದು ಹೊಸ ಆಡಳಿತ ಶುರುವಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷವಾಗಿದ್ದ ಡಿಎಂಕೆ ಇನ್ನು ಮುಂದೆ ಆಡಳಿತ ಪಕ್ಷವಾಗಲಿದೆ. ಜಯಲಲತಾ ಅವರ ಎಐಡಿಎಂಕೆ ಪಕ್ಷದ ಆಡಳಿತ ನಿನ್ನೆಗೆ ಕೊನೆಗೊಂಡಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ: ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಮೂಲಕ ತನಿಖೆಗೆ ಸರಕಾರ ಆದೇಶ
10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು
Woman cuts off her tongue for offer temple to keep promise as DMK Victory in Tamil Nadu